ಕರ್ನಾಟಕ

karnataka

ETV Bharat / business

ಕೇಂದ್ರ ಬಜೆಟ್: ಕೋವಿಡ್​​ನಿಂದ ತತ್ತರಿಸಿದ ವಾಯುಯಾನದ ನಿರೀಕ್ಷೆಗಳು ಈಡೇರಲಿವೆಯೇ?​ - Aviation sector expectation from Budget

ವಾಯುಯಾನ ಟರ್ಬೈನ್ ಇಂಧನವನ್ನು ಜಿಎಸ್​​ಟಿ ವ್ಯಾಪ್ತಿಗೆ ತರುವ ಮತ್ತು ವಿಮಾನ ಸಂಸ್ಥೆಗಳ ಮೇಲಿನ ಸಾಲದ ಹೊರೆ ತಗ್ಗಿಸಲು ವಿಮಾನ ನಿಲ್ದಾಣ ಶುಲ್ಕ ಕಡಿಮೆ ಮಾಡುವ ಬೇಡಿಕೆಯನ್ನು ಕೇಂದ್ರವು ಪರಿಗಣಿಸುತ್ತದೆ ಎಂದು ಎದುರು ನೋಡುತ್ತಿದೆ.

Aviation sector
Aviation sector

By

Published : Jan 30, 2021, 12:04 PM IST

ನವದೆಹಲಿ: ಕೋವಿಡ್​​-19 ಬಿಕ್ಕಟ್ಟಿನ ಮಧ್ಯೆ ಪ್ರಯಾಣಿಕ ನಿರ್ಬಂಧಗಳಿಂದ ತೀವ್ರವಾಗಿ ತತ್ತರಿಸಿರುವ ಭಾರತದ ವಾಯುಯಾನ ಕ್ಷೇತ್ರವು ಮುಂಬರುವ ಮುಂಗಡಪತ್ರದಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಇರಿಸಿಕೊಂಡಿದೆ.

ವಾಯುಯಾನ ಟರ್ಬೈನ್ ಇಂಧನವನ್ನು ಜಿಎಸ್​​ಟಿ ವ್ಯಾಪ್ತಿಗೆ ತರುವ ಮತ್ತು ವಿಮಾನ ಸಂಸ್ಥೆಗಳ ಮೇಲಿನ ಸಾಲದ ಹೊರೆ ತಗ್ಗಿಸಲು ವಿಮಾನ ನಿಲ್ದಾಣ ಶುಲ್ಕ ಕಡಿಮೆ ಮಾಡುವ ಬೇಡಿಕೆಯನ್ನು ಕೇಂದ್ರವು ಪರಿಗಣಿಸುತ್ತದೆ ಎಂದು ಎದುರು ನೋಡುತ್ತಿದೆ.

ಈಟಿವಿ ಭಾರತಜತೆ ಮಾತನಾಡಿದ ಇಂಟರ್​ನ್ಯಾಷನಲ್ ಫೌಂಡೇಷನ್ ಫಾರ್ ಏವಿಯೇಷನ್ ​​ಏರೋಸ್ಪೇಸ್ ಮತ್ತು ಡ್ರೋನ್ಸ್‌ನ ಅಧ್ಯಕ್ಷ ಸನತ್ ಕೌಲ್, ಟರ್ಬೈನ್ ಇಂಧನದ ಬಗ್ಗೆ ಸರ್ಕಾರ ಪರಿಹಾರ ನೀಡಬೇಕು. ಆದರೆ, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಭಾವನೆ ನನಗಿಲ್ಲ. ಪ್ರವಾಸೋದ್ಯಮ ಹಣಕಾಸು ನಿಗಮ ಮತ್ತು ವಾಯುಯಾನ ಹಣಕಾಸು ನಿಗಮವು ಒಟ್ಟಾಗಿ ಚಿಂತಿಸಬೇಕಿದೆ. ಇವುಗಳು ಬಳಿಕ ಕೈಗಾರಿಕೆಗಳು ಬಳಲುತ್ತಿವೆ. ಆದ್ದರಿಂದ, ಉದ್ಯಮ ಸ್ಥಿರಗೊಳಿಸುವ ಅಂಶಗಳ ಕುರಿತು ಪರಿಗಣನೆ ತೆಗೆದುಕೊಳ್ಳಬೇಕು ಎಂದರು.

ಕೋವಿಡ್​- ಪ್ರೇರಿತ ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳವರೆಗೆ ಹಾರಾಟ ನಡೆಸಲು ಸಾಧ್ಯವಾಗದ ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಹಣಕಾಸಿನ ನೆರವು ಪಡೆಯುವುದಿಲ್ಲ. ಇದನ್ನು ಸರ್ಕಾರದ ಕಡೆಯಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಜಪಾನ್‌ನಲ್ಲಿ ಉದ್ಯೋಗ ಲಭ್ಯತೆಯಲ್ಲಿ ತೀವ್ರ ಕುಸಿತ... ನಿರುದ್ಯೋಗ ದರ ಏರಿಕೆ!

ವಿಮಾನ ನಿಲ್ದಾಣ, ಪಾರ್ಕಿಂಗ್, ಲ್ಯಾಂಡಿಂಗ್, ನ್ಯಾವಿಗೇಷನ್ ಶುಲ್ಕವನ್ನು ಕಡಿಮೆ ಮಾಡುವುದರ ಜೊತೆಗೆ ಎಟಿಎಫ್ ಮೇಲಿನ ತೆರಿಗೆ ಕಡಿಮೆ ಮಾಡುವುದು ದೇಶೀಯ ವಿಮಾನಯಾನ ಸಂಸ್ಥೆಗಳ ದೀರ್ಘಕಾಲದ ಬೇಡಿಕೆಯಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರ ಸ್ವಲ್ಪ ಪರಿಹಾರ ನೀಡುತ್ತದೆ ಎಂಬ ಆಸೆಯ ವ್ಯಕ್ತಪಡಿಸಿದರು.

ಸರ್ಕಾರವು ಈಗಿನ ವಿಮಾನ ದರ ತೆಗೆದುಹಾಕಬೇಕು. ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಇದು ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದರು.

ಪ್ರಸ್ತುತ, ವಿಮಾನಯಾನ ಸಂಸ್ಥೆಗಳು ತಮ್ಮ ಕೋವಿಡ್ ಪೂರ್ವ ಸಾಮರ್ಥ್ಯದ 80 ಪ್ರತಿಶತ ಆಸನ ನಿಯೋಜನೆಗೆ ಅನುಮತಿಸಲಾಗಿದೆ. ಮಾರ್ಚ್ 23ರಿಂದ ಭಾರತದಲ್ಲಿ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ.

ನಿನ್ನೆ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ 2020-21, 2021ರ ಆರಂಭದಲ್ಲಿ ಭಾರತದ ವಾಯು ಪ್ರಯಾಣಿಕರ ದಟ್ಟಣೆಯು ಕೋವಿಡ್ ಪೂರ್ವ ಮಟ್ಟ ತಲುಪಲಿದೆ ಎಂದು ಸರ್ಕಾರ ನಿರೀಕ್ಷಿಸುತ್ತದೆ ಎಂದಿದೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳ ಒಟ್ಟು ವಿಮಾನಯಾನ ಸಾಮರ್ಥ್ಯವು 713ಕ್ಕೆ ಏರಿಕೆಯಾಗಲಿದೆ ಎಂದು ಸಮೀಕ್ಷೆಯ ತಿಳಿಸಿದೆ.

ABOUT THE AUTHOR

...view details