ಮುಂಬೈ: ಭೂಗತ ಪಾತಕಿ ಮತ್ತು ಜಾಗತಿಕವಾಗಿ ಭಯೋತ್ಪಾದಕ ಸಂಘಟನೆಗಳ ಜತೆ ಗುರುತಿಸಿಕೊಂಡಿರುವ ದಾವೂದ್ ಇಬ್ರಾಹಿಂಗೆ ಸೇರಿದ್ದ ಏಳು ಆಸ್ತಿಗಳನ್ನು ಕಳ್ಳಸಾಗಾಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯ್ದೆ (ಸಫೆಮಾ) ಅಡಿಯಲ್ಲಿ ನವೆಂಬರ್ 10ರಂದು ಹರಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾವೂದ್ ಇಬ್ರಾಹಿಂ ಸಂಬಂಧಿತ ಆಸ್ತಿಗಳ ಹರಾಜು ಮಹಾರಾಷ್ಟ್ರದಲ್ಲಿ ಅತಿದೊಡ್ಡದು ಎಂದು ಹೇಳಲಾಗುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಹರಾಜು ನಡೆಸಲಾಗುವುದು.
ರತ್ನಗಿರಿ ಜಿಲ್ಲೆಯ ಖೇಡ್ ತಾಲೂಕಿನ ಮುಂಬಕೆ ಗ್ರಾಮದಲ್ಲಿರುವ ಆರು ಆಸ್ತಿಗಳ ಮೌಲ್ಯ ಹೀಗಿದೆ...
- 27 ಗುಂಟೆಯ ಜಮೀನು ಮೀಸಲು ಬೆಲೆ 2,05,800 ರೂ.
- 29.30 ಗುಂಟೆಯ ಭೂಮಿಯ ಮೀಸಲು 2,23,300 ರೂ.
- 24.90 ಗುಂಟೆ ಜಮೀನು ಮೀಸಲು ದರ 1,89,800 ರೂ.
- 20 ಗುಂಟೆ ಜಮೀನಿನ ಮೀಸಲು ದರ 1,52,500 ರೂ.
- 18 ಗುಂಟೆ ಭೂಮಿಯ ಮೀಸಲು ಬೆಲೆ 1,38,000 ರೂ.
- 27 ಗುಂಟಾ ಭೂಮಿ ಮತ್ತು ಕಟ್ಟಡ ಸಂಖ್ಯೆ 172 ಮೀಸಲು ಬೆಲೆ 5,35,800 ರೂ.
- ದಾವೂದ್ ಇಬ್ರಾಹಿಂನ ಮತ್ತೊಂದು ಆಸ್ತಿ ಖೇಡ್‌ನ ಲೊಟೆವಿಲೇಜ್‌ನಲ್ಲಿ 30 ಗುಂಟೆ ಜಮೀನಿನ ಮೀಸಲು ಬೆಲೆ 61,48,100 ರೂ.ನಷ್ಟಿದೆ.