ನವದೆಹಲಿ:ಭದ್ರತಾ ನಿಯಮ ಉಲ್ಲಂಘಿಸಿದ ಆಪಾದನೆಯಡಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲದ ಜನಪ್ರಿಯ ವಿಡಿಯೋ ಗೇಮಿಂಗ್ ಆ್ಯಪ್ ಪಬ್ಜಿಗೆ ಸೆಡ್ಡುಹೊಡೆಯಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮಲ್ಟಿ ಪ್ಲೇಯರ್ ಆಕ್ಷನ್- ಗೇಮ್ FAU-G (ಫೌಜಿ) ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ "ಆತ್ಮನಿರ್ಭಾರ ಭಾರತ್" ದ ದೂರದೃಷ್ಟಿಗೆ ಅನುಗುಣವಾಗಿ, ಆಕ್ಷನ್-ಗೇಮ್, ಫೌಜಿಅನ್ನು ಪ್ರಾರಂಭಿಸಲಾಗುವುದು. ಶೀಘ್ರದಲ್ಲೇ ಆರಂಭವಾಗಲಿರುವ ಭಾರತೀಯ ಮಲ್ಟಿಪ್ಲೇಯರ್ ಗೇಮಿಂಗ್ ಇದಾಗಿದೆ ಎಂದು ಮಾಹಿತಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಆಂದೋಲನವನ್ನು ಬೆಂಬಲಿಸಲು ಆಕ್ಷನ್ ಗೇಮಿಂಗ್ ಪ್ರಸ್ತುತಪಡಿಸಲು ಹೆಮ್ಮೆಪಡುತ್ತೇನೆ. ನಿರ್ಭಯ ಮತ್ತು ಯುನೈಟೆಡ್ ಗಾರ್ಡ್ಸ್ನ FAU-G ಗೇಮಿಂಗ್. ಮನರಂಜನೆಯ ಜೊತೆಗೆ ಆಟಗಾರರು ನಮ್ಮ ಸೈನಿಕರ ತ್ಯಾಗದ ಬಗ್ಗೆಯೂ ಕಲಿಯುತ್ತಾರೆ. ಗೇಮಿಂಗ್ನಿಂದ ಗಳಿಸಿದ ನಿವ್ವಳ ಆದಾಯದ ಶೇ 20ರಷ್ಟು ಭಾರತ್ ಕೆವೀರ್ ಟ್ರಸ್ಟ್ಗೆ ನೀಡಲಾಗುವುದು ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಹೊಸ ಗೇಮಿಂಗ್ ಬಗ್ಗೆ ಮಾತನಾಡಿದ, 'ರುಸ್ತುಮ್' ನಟ, ಭಾರತದಲ್ಲಿ ಯುವಕರಿಗೆ, ಗೇಮಿಂಗ್ ಮನರಂಜನೆಯ ಒಂದು ಪ್ರಮುಖ ರೂಪವಾಗುತ್ತಿದೆ. FAU-G ಗೇಮಿಂಗ್ ಆಡುವಾಗ ಅವರು ಸೈನಿಕರ ತ್ಯಾಗದ ಬಗ್ಗೆ ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸೈನಿಕರು ಮತ್ತು ಹುತಾತ್ಮರ ಕುಟುಂಬಗಳಿಗೆ ಸಹ ಕೊಡುಗೆ ನೀಡುತ್ತಾರೆ. ಇದರೊಂದಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಲಿದ್ದಾರೆ ಎಂದರು.