ನವದೆಹಲಿ: ಆರ್ಥಿಕ ಪ್ರಗತಿ ಹೆಚ್ಚಿಸುವ ಆತ್ಮನಿರ್ಭರ ಭಾರತನ 3.0 ಉತ್ತೇಜಕ ಪ್ಯಾಕೇಜ್ನ ಭಾಗವಾಗಿ, ವಸತಿ ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಿಸುಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಡೆವಲಪರ್ ಮತ್ತು ಮನೆ ಖರೀದಿದಾರರಿಗೆ ಆದಾಯ ತೆರಿಗೆ ಪರಿಹಾರ ಘೋಷಿಸಿದ್ದಾರೆ.
ಯೋಜನೆಯ ಆಶ್ರಯದಲ್ಲಿ ಇಂಜಿನಿಯರ್ ಮತ್ತು ಮನೆ ಖರೀದಿದಾರರಿಗೆ 2 ಕೋಟಿ ರೂ. ವರೆಗಿನ ವಸತಿಗಳಿಗೆ ತೆರಿಗೆ ಪರಿಹಾರ ನೀಡಲಾಗುತ್ತಿದೆ.
ಸರ್ಕಾರದ ಈ ಕ್ರಮವು ಮನೆಗಳನ್ನು ಖರೀದಿಸಲು ಜನರನ್ನು ಪ್ರೋತ್ಸಾಹಿಸುತ್ತದೆ ಮತ್ತು ಹೆಚ್ಚುವರಿ ಉಳಿಕೆ ತಗ್ಗಿಸುತ್ತದೆ. ಆದಾಯ ತೆರಿಗೆ ಪರಿಹಾರವು ಮೊದಲ ಬಾರಿಯ ಖರೀದಿದಾರರಿಗೆ ಮಾತ್ರ 2021ರ ಜೂನ್ 30ರವರೆಗೆ ಲಭ್ಯವಿರುತ್ತದೆ. 2 ಕೋಟಿ ರೂ. ವರೆಗಿನ ವಸತಿ ಯೂನಿಟ್ಗಳಿಗೆ ಪ್ರಾಥಮಿಕ ಮಾರಾಟಕ್ಕೆ ದರ ಮತ್ತು ಒಪ್ಪಂದದ ಮೌಲ್ಯದ ನಡುವಿನ ವ್ಯತ್ಯಾಸ ದ್ವಿಗುಣಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.