ಥಾಣೆ:ಎಟಿಎಂನಲ್ಲಿ ಹಿರಿಯ ನಾಗರಿಕರೊಬ್ಬರ ಗಮನ ಬೇರೆಡೆ ಸೆಳೆದು ಆತನ ಖಾತೆಯಿಂದ ಅಪಾರ ಪ್ರಮಾಣದ ಹಣವನ್ನು ಕದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 1ರಂದು 64 ವರ್ಷದ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಥಾಣೆ ನಗರದ ಘೋಡ್‌ಬಂದರ್ ರಸ್ತೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ನ ಎಟಿಎಂಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ ಎಂದು ಕಸರ್‌ವಾಡವಲಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕಿಶೋರ್ ಖೈರ್ನರ್ ತಿಳಿಸಿದ್ದಾರೆ.
ಆರೋಪಿ ವೃದ್ಧನಿಗೆ ನಗದು ಹಿಂಪಡೆಯಲು ಸಹಾಯ ಮಾಡುವಂತೆ ನಟಿಸಿದ ಬಳಿಕ ತನ್ನ ಎಟಿಎಂ ಕಾರ್ಡ್ ತೆಗೆದುಕೊಂಡ ಆರೋಪಿಗಳು ಬಳಿಕ ಅದನ್ನು ನಕಲಿ ಎಂದು ಬದಲಾಯಿಸಿ ವೃದ್ಧನನ್ನು ನಂಬಿಸಿದ್ದಾನೆ. ನಂತರ ಇವರಿಬ್ಬರೂ ಸೇರಿ 19,000 ರೂ. ಹಣವನ್ನು ವೃದ್ಧನ ಖಾತೆಯಿಂದ ಹಿಂತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ವೇಳೆ ಆರೋಪಿಗಳು ಇದೇ ರೀತಿಯ ಮೋಸ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಬಂಧಿತ ಆರೋಪಿಗಳನ್ನು ಗಿಯಾಸುದ್ದೀನ್ ಅಬು ಸಿದ್ದಿಖ್ (26) ಹಾಗೂ ಸೌಝುನ್ ಅಬ್ದುಲ್ ರೆಹಮಾನ್ ಅಗಾ (24) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ನಾನಾ ಬ್ಯಾಂಕ್ಗಳ 55 ಎಟಿಎಂ ಕಾರ್ಡ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಬಾರಿ ಬೆಲೆಯ ಮೊಬೈಲ್ ಹಾಗೂ 2,200 ನಗದು ಸಹ ವಶಕ್ಕೆ ತೆಗೆದುಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.