ಕರ್ನಾಟಕ

karnataka

ETV Bharat / business

ಐಟಿಐ ಅಭ್ಯರ್ಥಿಗಳಿಗೆ ಇಸ್ರೋ ನೀಡ್ತಿದೆ 45,900 ರೂ. ವೇತನದ ಕೆಲಸ... ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ? - Indian Space Research Organisation today News

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್​ನಲ್ಲಿ (ಎಚ್‌ಎಸ್‌ಎಫ್‌ಸಿ) ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಸಾಂದರ್ಭಿಕ ಚಿತ್ರ

By

Published : Aug 24, 2019, 8:33 PM IST

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್​ನಲ್ಲಿ (ಎಚ್‌ಎಸ್‌ಎಫ್‌ಸಿ) ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆರಂಭವಾಗಿದ್ದು, ಸೆಪ್ಟೆಂಬರ್ 13 ಅರ್ಜಿ ಸ್ವೀಕರಿಸುವ ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ಅರ್ಜಿಗಳನ್ನು ಇಸ್ರೋದ ಅಧಿಕೃತ ವೆಬ್‌ಸೈಟ್ isro.gov.in ಮೂಲಕ ಕಳುಹಿಸಬಹುದು ಎಂದು ತಿಳಿಸಿದೆ.

ಎಚ್‌ಎಸ್‌ಎಫ್‌ಸಿನ ಫಿಟ್ಟರ್​, ಪ್ಲಂಬರ್​, ಮೆಕ್ಯಾನಿಸ್ಟ್​, ಟೆಕ್ನಿಶಿಯನ್​​​ ಅಸಿಸ್ಟೆಂಟ್​, ಟೆಕ್ನಿಶಿಯಲ್​​ ಎಲೆಕ್ಟ್ರಾನಿಕ್ಸ್​, ಟೆಕ್ನಿಶಿಯಲ್​ ಅಸಿಸ್ಟೆಂಟ್​ ಸೇರಿ​ ವಿವಿಧ ವಿಭಾಗಗಳಲ್ಲಿನ ಒಟ್ಟು 86 ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಶೈಕ್ಷಣಿಕ ಅರ್ಹತೆ:ಅಭ್ಯರ್ಥಿಗಳು ಪ್ರಮಾಣೀಕೃತ ಸಂಸ್ಥೆಗಳಿಂದ ಐಟಿಐ ತೇರ್ಗಡೆಯ ಜೊತೆಗೆ ಕನಿಷ್ಠ ಅಥವಾ ಸಮಾನ ಮಟ್ಟದ ಶಿಕ್ಷಣ ಪಡೆದಿರಬೇಕು.

ವಯೋಮಿತಿ:ಉದ್ಯೋಗಕ್ಕೆ ಅರ್ಹತೆ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ:
1. ಇಸ್ರೋದ ಅಧಿಕೃತ ವೆಬ್​ಗೆ ಭೇಟಿ ನೀಡಿ
2. ವೆಬ್​ ಮುಖ ಪುಟದ ಕರಿಯರ್ಸ್​ ಆಯ್ಕೆ ಆಯ್ದುಕೊಳ್ಳಿ
3. ನಿಮಗೆ ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ, ಮೌಸ್​ ಬಟನ್​ ಸ್ಕ್ರಾಲ್​ ಮಾಡಿದಾಗ ಕೇಳ ಭಾಗದಲ್ಲಿ ಕಾಣಿಸುವ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್​
(Human Space Flight Center ) ಲಿಂಕ್ ಕ್ಲಿಕ್​ ಮಾಡಿ
4. 'ಅಪ್ಲೈ ಆನ್​​ಲೈನ್​' ಕ್ಲಿಕ್​ ಮಾಡಿ
5. ಅರ್ಜಿಯನ್ನು ಭರ್ತಿ ಮಾಡಿ, ಫೋಟೋವನ್ನು ಅಪ್​ಲೋಡ್ ಮಾಡಿ
6. ಸಬ್​ಮಿಟ್ ಬಟನ್​​ ಕ್ಲಿಕ್​ ಮಾಡಿ ಪೇಮೆಂಟ್​ ಆಯ್ಕೆ ಮಾಡಿ

ಶುಲ್ಕ:ಅಭ್ಯರ್ಥಿಗಳು ಅರ್ಜಿಯ ಶುಲ್ಕವಾಗಿ ₹ 250 ಪಾವತಿಸಬೇಕು
ವೇತನ:ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ₹ 21,700ರಿಂದ 44,900ರ ವರೆಗೆ ಮಾಸಿಕ ವೇತನ ಪಡೆಯಲಿದ್ದಾರೆ.

ABOUT THE AUTHOR

...view details