ಕರ್ನಾಟಕ

karnataka

ETV Bharat / business

ಕಂಪ್ಯೂಟರ್‌ನಿಂದ ಜೆನರೇಟ್ ಆಗದ ಐಟಿ ದಾಖಲೆಗಳು ಇನ್ಮುಂದೆ ಇನ್​ವ್ಯಾಲಿಡ್​: ನಿರ್ಮಲಾ ಸೀತಾರಾಮನ್

ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಸೀತಾರಾಮನ್, ತೆರಿಗೆ ಸಂಬಂಧಿತ ಡಿಐಎನ್​ನ ಯಾವುದೇ ಸಂವಹನದ ನೋಟಿಸ್, ಪತ್ರ, ಆದೇಶ, ಸಮನ್ಸ್ ಅಥವಾ ಇತರೆ ಪತ್ರವ್ಯವಹಾರ ಕಂಪ್ಯೂಟರ್​ನಿಂದ ಜೆನರೇಟ್​ ಆಗಿರದಿದ್ದರೇ ಅದು ಅಮಾನ್ಯವಾಗಿರುತ್ತದೆ. ಕಾನೂನಿನ ದೃಷ್ಟಿಯಲ್ಲಿ ಅದು ಮೌಲ್ಯಯುತ ಆಗುವುದಿಲ್ಲ ಎಂದರು.

Income Tax
ಐಟಿ

By

Published : Aug 13, 2020, 5:42 PM IST

Updated : Aug 13, 2020, 6:19 PM IST

ನವದೆಹಲಿ: ಆದಾಯ ತೆರಿಗೆ ಇಲಾಖೆಯ ಕಂಪ್ಯೂಟರ್​ನಿಂದ​ ಜನರೇಟ್​ ಆಗದ ತೆರಿಗೆ ಸಂಬಂಧಿತ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ಸಂಖ್ಯೆ (ಡಿಐಎನ್) ಅಮಾನ್ಯವಾಗಿರುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

ತೆರಿಗೆ ಸಂಬಂಧಿತ ಡಿಐಎನ್​ನ ಯಾವುದೇ ಸಂವಹನದ ನೋಟಿಸ್, ಪತ್ರ, ಆದೇಶ, ಸಮನ್ಸ್ ಅಥವಾ ಇತರೆ ಪತ್ರವ್ಯವಹಾರ ಕಂಪ್ಯೂಟರ್​ನಿಂದ ಜೆನರೇಟ್​ ಆಗಿರದಿದ್ದರೇ ಅದು ಅಮಾನ್ಯವಾಗಿರುತ್ತದೆ. ಕಾನೂನಿನ ದೃಷ್ಟಿಯಲ್ಲಿ ಅದು ಮೌಲ್ಯಯುತ ಆಗುವುದಿಲ್ಲ ಎಂದರು.

ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಸೀತಾರಾಮನ್, ಮುಖರಹಿತ ತೆರಿಗೆ ಪರಿಶೀಲನೆ ಮೌಲ್ಯಮಾಪನ ಮತ್ತು ಕೋರಿಕೆಯು ತೆರಿಗೆಯಲ್ಲಿ ನ್ಯಾಯಯುತ ಮತ್ತು ವಸ್ತುನಿಷ್ಠತೆ ಹೆಚ್ಚಿಸುತ್ತದೆ ಎಂದರು.

ಸರ್ಕಾರದ ನಡೆಯ ಹಿಂದಿನ ಉದ್ದೇಶ ವಿವರಿಸಿದ ಹಣಕಾಸು ಸಚಿವೆ, ಬದಲಾವಣೆಗಳು ಅನುಸರಣೆ ಹೊರೆ ಮುಂದೆ ಸರಾಗವಾಗಿಸುತ್ತದೆ. ಇಲಾಖೆ ಮತ್ತು ತೆರಿಗೆ ಪಾವತಿದಾರರ ನಡುವೆ ಯಾವುದೇ ಭೌತಿಕ ಸಂಪರ್ಕ ಇರುವುದಿಲ್ಲ. ಅದು ಮಾಹಿತಿಯ ಖಚಿತತೆ ನೀಡಲಿದೆ. ಅಸ್ತಿತ್ವದಲ್ಲಿರುವ ಉತ್ಪಾದನಾ ಘಟಕಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ 30ರಿಂದ 22ಕ್ಕೆ ಇಳಿಸಿದ್ದು ಸೇರಿದಂತೆ ಹಲವು ಸುಧಾರಣೆಗಳನ್ನು ಆದಾಯ ತೆರಿಗೆ ಇಲಾಖೆ ಕೈಗೊಂಡಿದೆ ಎಂದು ಹೇಳಿದರು.

Last Updated : Aug 13, 2020, 6:19 PM IST

ABOUT THE AUTHOR

...view details