ಶಿಮ್ಲಾ: ಕುಸಿಯುತ್ತಿರುವ ಜಿಎಸ್ಟಿ ಸಂಗ್ರಹ, ಉಪಭೋಗ ಮತ್ತು ಬೇಡಿಕೆಯ ಕ್ಷೀಣಿಸುವಿಕೆಯ ಮಧ್ಯೆ ಮುಂದಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ವಿನಾಯಿತಿ ನೀಡುವ ಬಗ್ಗೆ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುಳಿವು ನೀಡಿದ್ದಾರೆ.
ಮುಂಬರುವ ಬಜೆಟ್‌ನಲ್ಲಿ ತೆರಿಗೆದಾರರು ಪರಿಹಾರ ನಿರೀಕ್ಷಿಸಬಹುದೇ ಎಂದು 'ಇಟಿವಿ ಭಾರತ್' ಪ್ರತಿನಿಧಿ ಕೇಳಿದಾಗ, 'ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಮತ್ತು ಕಾರ್ಪೊರೇಟ್‌ಗಳಿಗೆ ಪರಿಹಾರವನ್ನು ಒದಗಿಸಿದ್ದು ನರೇಂದ್ರ ಮೋದಿ ಸರ್ಕಾರ. ಮುಂದೆಯು ಇದು ಸಂಭವಿಸಬಹುದು' ಎಂದರು.
ಬಜೆಟ್ಗಾಗಿ ಕಾಯಿರಿ. ವಾಸ್ತವದಲ್ಲಿ ಈ ಹಿಂದೆಯೂ ತೆರಿಗೆದಾರರಿಗೆ ಪರಿಹಾರ ನೀಡಿದ ಏಕೈಕ ಸರ್ಕಾರ ಎಂದರೆ ನರೇಂದ್ರ ಮೋದಿ ಸರ್ಕಾರ. 5 ಲಕ್ಷ ರೂ.ಗಳವರೆಗೆ ತೆರಿಗೆ ರಿಯಾಯಿತಿ ನೀಡುತ್ತಿದೆ. ಕಾರ್ಪೊರೇಟ್ ತೆರಿಗೆಯನ್ನು ಶೇ 30ರಿಂದ ಕೆಳಗಿಳಿಸಿದೆ ಎಂದು ಹೇಳಿದರು.
ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಜಾಗತಿಕ ಆರ್ಥಿಕತೆಯ ಕುಸಿತದ ಪರಿಣಾಮವು ಭಾರತದ ಆರ್ಥಿಕತೆ ಮೇಲೂ ಪ್ರಭಾವ ಬೀರಿದೆ. ಆದಾಗ್ಯೂ ಇತ್ತೀಚಿನ ತಿಂಗಳುಗಳಲ್ಲಿ ಕೈಗೊಂಡ ಉತ್ತೇಜನ ಕ್ರಮಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಆಕರ್ಷಿಸಲಾಗಿದೆ. ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ತಲುಪಲು ಈ ಕ್ರಮಗಳು ನೆರವಾಗಲಿವೆ ಎಂದರು.