ಕರ್ನಾಟಕ

karnataka

ETV Bharat / business

ಹಳೆಯ 100, 10, 5 ರೂ. ನೋಟ್​ಗಳ​ ಡಿಮಾನಿಟೈಸೇಷನ್ ವದಂತಿ: ಈಗ RBI ಹೇಳುವುದೇನು? - ಹಳೆ ಬ್ಯಾಂಕ್ ನೋಟ್

ಹಳೆಯ ಸರಣಿ 100, 10 ಮತ್ತು 5 ರೂ. ಮುಖಬೆಲೆ ನೋಟುಗಳನ್ನು ಮುಂದಿನ ದಿನಗಳಲ್ಲಿ ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕುರಿತು ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ವರದಿಗಳು ತಪ್ಪು. ಸತ್ಯಕ್ಕೆ ದೂರವಾದವು ಎಂದು ಟ್ವೀಟ್ ಮೂಲಕ ಆರ್​ಬಿಐ ಸ್ಪಷ್ಟನೆ ನೀಡಿದೆ.

Rs 100
Rs 100

By

Published : Jan 25, 2021, 4:25 PM IST

ನವದೆಹಲಿ:ಕೆಲವು ಹಳೆಯ ಬ್ಯಾಂಕ್​ನೋಟುಗಳನ್ನು ಸರಣಿ ಹಿಂತೆಗೆದುಕೊಳ್ಳುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸ್ಪಷ್ಟನೆ ನೀಡಿದೆ.

ಹಳೆಯ ಸರಣಿ 100, 10 ಮತ್ತು 5 ರೂ. ಮುಖಬೆಲೆ ನೋಟುಗಳನ್ನು ಮುಂದಿನ ದಿನಗಳಲ್ಲಿ ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕುರಿತು ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳು ವರದಿಯಾಗಿವೆ. ಇವು ಸತ್ಯಕ್ಕೆ ದೂರವಾದವು ಎಂದು ಟ್ವೀಟ್ ಮೂಲಕ ಆರ್​ಬಿಐ ಸ್ಪಷ್ಟಪಡಿಸಿದೆ.

ನೂತನ 100 ರೂ. ನೋಟು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಾಗಬೇಕೆಂಬ ಉದ್ದೇಶದಿಂದ ಹಳೆಯ 100 ರೂ. ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್​​ಗೆ ಸ್ಥಗಿತಗೊಳಿಸುತ್ತದೆ ಎಂದು ಆರ್​ಬಿಐ ಮಹಾಪ್ರಬಂಧಕ ಬಿ.ಎಂ. ಮಹೇಶ್ ಅವರು ಮಂಗಳೂರಲ್ಲಿ ಜನವರಿ 22ರಂದು ಹೇಳಿಕೆ ನೀಡಿದ್ದರು.

ABOUT THE AUTHOR

...view details