ನವದೆಹಲಿ:ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಗೀತಾ ಗೋಪಿನಾಥ್ ಅವರು 2019ರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಐಎಂಎಫ್‌ನ ಸಂಶೋಧನಾ ವಿಭಾಗದ ನಿರ್ದೇಶಕರು ಮತ್ತು ನಿಧಿಯ ಆರ್ಥಿಕ ಸಲಹೆಗಾರರನ್ನು ಉಲ್ಲೇಖಿಸಿದ ಸಂಭಾಷಣೆಗೆ ಸ್ವತಃ ಗೀತಾ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಬಚ್ಚನ್ ನಡೆಸಿಕೊಂಡು ಬರುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಟಿವಿ ಶೋನಲ್ಲಿ, ಇತ್ತೀಚೆಗೆ ಸ್ಪರ್ಧಿಯೊಬ್ಬರಿಗೆ, 2019ರಿಂದ ಗೀತಾ ಗೋಪಿನಾಥ್ ಅವರು ಯಾವ ಸಂಸ್ಥೆಯ ಮುಖ್ಯ ಹಣಕಾಸು ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಬಚ್ಚನ್ ಅವರು ಹಿಂದಿಯಲ್ಲಿ, ಅವಳ (ಗೀತಾ ಗೋಪಿನಾಥ್) ಮುಖವು ತುಂಬಾ ಸುಂದರವಾಗಿದೆ, ಯಾರೂ ಅವಳನ್ನು ಆರ್ಥಿಕತೆಯೊಂದಿಗೆ ಸಂಬಂಧಿಸಿದವಳು ಎನ್ನುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 100ರ ಗಡಿಯತ್ತ ಡೀಸೆಲ್, ಪೆಟ್ರೋಲ್ ದರ ಕೇಳುವಂತಿಲ್ಲ!