ನವದೆಹಲಿ:ನಿರ್ದಿಷ್ಟ ಸರುಕುಗಳ ಮೇಲೆ ಉತ್ಪನ್ನದ 'ಮೂಲ ದೇಶ ' (ಕಂಟ್ರಿ ಆಫ್ ಒರಿಜಿನ್) ಪ್ರದರ್ಶನ ಕಡ್ಡಾಯವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಸಂಬಂಧ ಇ-ಕಾಮರ್ಸ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳಿಗೆ ನೋಟಿಸ್ ನೀಡಲಾಗಿದೆ.
ಎರಡೂ ಕಂಪನಿಗಳಿಗೆ ನೀಡಿದ ನೋಟಿಸ್‌ನಲ್ಲಿ, ಗ್ರಾಹಕ ವ್ಯವಹಾರಗಳ ಸಚಿವಾಲಯವು, 'ಈ ಎರಡೂ ಕಂಪನಿಗಳ ಜಾಹೀರಾತುಗಳನ್ನು ಪರಿಶೀಲಿಸಿದಾಗ ಕಾನೂನು ಅಡಿ (ಪ್ಯಾಕೇಜ್ಡ್ ಸರಕು) ನಿಯಮಗಳ ಕಡ್ಡಾಯ ಘೋಷಣೆಯ ಮಾನದಂಡಗಳು ಉಲ್ಲೇಖಿಸಿಲ್ಲ ಎಂಬುದು ತಿಳಿದುಬಂದಿದೆ.
ಸಚಿವಾಲಯವು ಎರಡೂ ಕಂಪನಿಗಳಿಗೆ ಅಗತ್ಯವಾದ ಮಾಹಿತಿ ಒದಗಿಸುವಂತೆ ಕೇಳಿದೆ. ಈ ನೋಟಿಸ್‌ಗೆ 15 ದಿನಗಳಲ್ಲಿ ಪ್ರತಿಕ್ರಿಯೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಎಲ್ಲಾ ಇ-ಕಾಮರ್ಸ್ ಸಂಸ್ಥೆಗಳು ಸೆಪ್ಟೆಂಬರ್ 30ರೊಳಗೆ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುತ್ತಿರುವ ಎಲ್ಲಾ ವಸ್ತುಗಳ ಮೇಲೆ 'ಕಂಟ್ರಿ ಆಫ್ ಒರಿಜಿನ್' ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕಾಗಿದೆ.
ಇತ್ತೀಚೆಗೆ ಭಾರತ-ಚೀನಾ ನಡುವಿನ ಗಡಿ ಜಗಳದಿಂದಾಗಿ ಇಂತಹ ಮಾನದಂಡಗಳ ಉಲ್ಲಂಘನೆ ವಿಚಾರಣೆ ವೇಗಪಡೆದುಕೊಳ್ಳುತ್ತಿದೆ. 'ಕಂಟ್ರಿ ಆಫ್ ಒರಿಜಿನ್' ಕಡ್ಡಾಯಗೊಳಿಸುವ ಅಭಿಯಾನದಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮುಂಚೂಣಿಯಲ್ಲಿದ್ದು, ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿದೆ.
ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಈ ನಿರ್ಧಾರ ಕೇಂದ್ರದ ದಿಟ್ಟ ಕ್ರಮ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರ ಹಬ್ಬದ ಮಾರಾಟವನ್ನು ತಕ್ಷಣವೇ ತನಿಖೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದರು. ಅಲ್ಲಿ ಯಾವುದೇ ಕಂಪನಿಯೂ ತನ್ನ ಉತ್ಪನ್ನಗಳ ಮೇಲೆ 'ಕಂಟ್ರಿ ಆಫ್ ಒರಿಜಿನ್' ಅನ್ನು ನಮೂದಿಸುವ ಜವಾಬ್ದಾರಿ ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು.