ನ್ಯೂಯಾರ್ಕ್ (ವಿಶ್ವಸಂಸ್ಥೆ): ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತರಾದ ಅಮರ್ತ್ಯ ಸೇನ್ ಮತ್ತು ಕೈಲಾಶ್ ಸತ್ಯಾರ್ಥಿ ಹಾಗೂ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಸೇರಿ 225ಕ್ಕೂ ಅಧಿಕ ಜಾಗತಿಕ ನಾಯಕರು ಒಗ್ಗೂಡಿ ಜಿ-20 ಗ್ಲೋಬಲ್ ಲೀಡರ್ ಮುಂದೆ ಕೋವಿಡ್-19 ಸಂಬಂಧಿತ ತಮ್ಮ ಅಹವಾಲು ಇರಿಸಿದ್ದಾರೆ.
ಜಿ- 20 ರಾಷ್ಟ್ರಗಳು ಜಂಟಿಯಾಗಿ 2.5 ಟ್ರಿಲಿಯನ್ ಯುಎಸ್ ಡಾಲರ್ (188 ಲಕ್ಷ ಕೋಟಿ ರೂ.) ನಷ್ಟು ನಿಧಿ ಕೊರೊನಾ ವೈರಸ್ ತಂದಿಟ್ಟ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆ ಯೋಜನೆಗೆ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಹಾಗೂ ಜಾಗತಿಕ ಚೇತರಿಕೆ ಯೋಜನೆ ರೂಪಿಸಲು ಜಿ-20 ಶೃಂಗಸಭೆಯನ್ನು ತುರ್ತಾಗಿ ಕರೆಯಬೇಕು ಎಂದು ವಿಶ್ವದಾದ್ಯಂತ 225ಕ್ಕೂ ಅಧಿಕ ಚಿಂತಕರ ಚಾವಡಿ ಹಾಗೂ ನಾಯಕರು ಸಹಿ ಮಾಡಿದ ಪತ್ರದಲ್ಲಿ ಒತ್ತಾಯಿಸಿದ್ದಾರೆ.