ನವದೆಹಲಿ: ಕಾಂಗ್ರೆಸ್ ಆಡಳಿತ ಇರುವ ಛತ್ತೀಸ್‌ಗಢ ರಾಜ್ಯ ಸರ್ಕಾರವು ಕೇಂದ್ರ ನೀಡಿದ ಸಾಲ ಪ್ರಸ್ತಾಪದ ಆಯ್ಕೆ 1 ಅಂಗೀಕರಿಸಿದ್ದು, ಜಿಎಸ್‌ಟಿ ಆದಾಯದ ಕೊರತೆ ಪೂರೈಕೆಗೆ ವಿಶೇಷ ವಿಂಡೋ ಮೂಲಕ 1,792 ಕೋಟಿ ರೂ. ಪಡೆಯಲಿದೆ.
ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯದ ಕೊರತೆ ಪೂರೈಸಲು ಕೇಂದ್ರ ಸರ್ಕಾರದ ಆಯ್ಕೆ1ರ ಅನ್ವಯ ರಾಜ್ಯಗಳಿಗೆ ವಿಶೇಷ ಗವಾಕ್ಷಿ ಒದಗಿಸಲು ಆರ್‌ಬಿಐಯೊಂದಿಗೆ ಸಮಾಲೋಚಿಸಿ 97,000 ಕೋಟಿ ರೂ. ಸಮಂಜಸ ಬಡ್ಡಿ ದರದಲ್ಲಿ ಸಾಲವಾಗಿ ಒದಗಿಸುತ್ತದೆ. ಈ ಹಣವನ್ನು ಸೆಸ್ ಸಂಗ್ರಹದಿಂದ 5 ವರ್ಷಗಳ ನಂತರ ಮರು ಪಾವತಿಸಬಹುದು.
ಆಯ್ಕೆ-2ರ ಅನ್ವಯ ರಾಜ್ಯಗಳಿಗೆ ಈ ವರ್ಷದ 2,35,000 ಕೋಟಿ ರೂ. ಸಂಪೂರ್ಣ ಜಿಎಸ್‌ಟಿ ಪರಿಹಾರದ ಅಂತರವನ್ನು ರಾಜ್ಯಗಳು ಆರ್‌ಬಿಐನೊಂದಿಗೆ ಸಮಾಲೋಚಿಸಿ ಪೂರೈಸಬಹುದು.
'ಕೃಷಿ ಕಾಯ್ದೆ ರದ್ದು ಮಾಡದೇ, ಬೇರೆ ಯಾವ ನಿರ್ಧಾರ ಕೈಗೊಂಡರೂ ದೇಶಕ್ಕೆ ಮೋಸ'
ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯ ಕೊರತೆ ನೀಗಿಸಲು ಛತ್ತೀಸ್‌ಗಢ ಆಯ್ಕೆ -1 ಅನ್ನು ಅಂಗೀಕರಿಸಿದೆ. ಜಾರ್ಖಂಡ್ ಹೊರತುಪಡಿಸಿ ಎಲ್ಲ ರಾಜ್ಯಗಳು ಪರಿಹಾರಕ್ಕೆ ಕೇಂದ್ರದ ಸೂಚಿಸಿದ ಸೂತ್ರಕ್ಕೆ ಸೇರಿಕೊಂಡಿವೆ. ಜಿಎಸ್‌ಟಿ ಆದಾಯದ ಕೊರತೆ ಪೂರೈಕೆಯ ಆಯ್ಕೆ -1 ಆಯ್ದುಕೊಂಡ ಛತ್ತೀಸ್‌ಗಢ ರಾಜ್ಯ ಸರ್ಕಾರಕ್ಕೆ (ಜಿಎಸ್‌ಡಿಪಿಯಲ್ಲಿ ಶೇ 0.50ರಷ್ಟು) ಹೆಚ್ಚುವರಿ ಸಾಲವಾಗಿ 1,792 ಕೋಟಿ ರೂ. ಪಡೆಯಲಿದೆ.
ಆಯ್ಕೆ -1 ಕ್ಕೆ ಒಲವು ತೋರಿದ ರಾಜ್ಯಗಳ ಸಂಖ್ಯೆ 27ಕ್ಕೆ ಏರಿದೆ. ಜಾರ್ಖಂಡ್ ಹೊರತುಪಡಿಸಿ ಎಲ್ಲ ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ -1ರ ಪರವಾಗಿ ನಿಂತಿವೆ. ವಿಶೇಷ ವಿಂಡೋವನ್ನು 2020ರ ಅಕ್ಟೋಬರ್ 23 ರಿಂದ ಕಾರ್ಯರೂಪಕ್ಕೆ ತರಲಾಗಿದ್ದು, ಸರ್ಕಾರವು ಈಗಾಗಲೇ ಐದು ಕಂತುಗಳಲ್ಲಿ ರಾಜ್ಯಗಳ ಪರವಾಗಿ 30,000 ಕೋಟಿ ರೂ. ಎರವಲು ಪಡೆದಿದೆ. ಆಯ್ಕೆ -1 ಅನ್ನು ಆಯ್ಕೆ ಮಾಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿವೆ.