ದಾವೋಸ್:ಜಾಗತಿಕ ವ್ಯಾಪಾರವು ಅಭಿವೃದ್ಧಿ ಹೊಂದಲು ವಿಶ್ವ ವ್ಯಾಪಾರ ಒಕ್ಕೂಟಕ್ಕೆ (ಡಬ್ಲ್ಯುಟಿಒ) ಮುಕ್ತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಮಾಜಿ ವಾಣಿಜ್ಯ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲ್ಯುಇಎಫ್) 'ದಿ ಗ್ರೇಟ್ ಇಂಡೋ- ಪೆಸಿಫಿಕ್ ರೇಸ್' ಕುರಿತ ಮಾತನಾಡಿದ ಅವರು, ಭವಿಷ್ಯದಲ್ಲಿ ಬಹುಪಕ್ಷೀಯ ಸಂಸ್ಥೆಯು ಮುಂದುವರಿಯುವುದರಲ್ಲಿ ಕೆಲವು ಮಹತ್ವದ ಬದಲಾವಣೆಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ವ್ಯಾಪಾರ ಮತ್ತು ಸುರಕ್ಷತೆ ಸೇರಿದಂತೆ ಸಾಗರಗಳು ಮುಖ್ಯವಾದ ಪಾತ್ರ ವಹಿಸಲಿವೆ ಎಂದರು.
ನಾವು ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ವ್ಯಾಪಾರ ಮತ್ತು ವಾಣಿಜ್ಯದ ಮುಕ್ತ ಹರಿವನ್ನು ಅನುಮತಿಸಬೇಕು. ಈ ಪ್ರದೇಶವು ಭಾರಿ ಬೆಳವಣಿಗೆಯನ್ನು ಹೊಂದಿದ್ದು, ಸಹಕಾರ, ಒಗ್ಗಟ್ಟು ಹಾಗೂ ಸಂಪರ್ಕ ವೃದ್ಧಿಯ ಮಹತ್ವದಾಗಿದೆ ಎಂದು ಅವರು ಹೇಳಿದ್ದಾರೆ.
ಆರ್ಥಿಕ ಏಕೀಕರಣವನ್ನು ಉತ್ತೇಜಿಸಬಲ್ಲ ಬಹುಪಕ್ಷೀಯ ಮಂಡಳಿಯು ಮುಕ್ತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಈ ಬಗ್ಗೆ ನಾವು ದೀರ್ಘಕಾಲದಿಂದ ಕಲಿತಿದ್ದೇವೆ. ಈಗ ಅದನ್ನು ಅರಿತುಕೊಂಡಿದ್ದೇವೆ ಎಂದರು.
ಕಳೆದ ಕೆಲವು ದಶಕಗಳಲ್ಲಿ ಡಬ್ಲ್ಯುಟಿಒ ಜಾಗತಿಕ ವ್ಯಾಪಾರವನ್ನು ಬೆಳೆಯಲು ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ನಾವೆಲ್ಲರೂ ಅದನ್ನು ಬೆಂಬಲಿಸಬೇಕು. ಜಾಗತಿಕ ವ್ಯಾಪಾರದ ಸ್ವರೂಪವು ತುಂಬಾ ಕ್ರಿಯಾತ್ಮಕವಾಗಿರುವುದರಿಂದ ಡಬ್ಲ್ಯುಟಿಒ ಮುಂದೆ ಸಾಗಲು ಹೆಚ್ಚಿನ ಬದಲಾವಣೆಗಳನ್ನು ತರಬೇಕಾಗಿದೆ ಎಂದು ಸುರೇಶ್ ಪ್ರಭು ಸಲಹೆ ನೀಡಿದರು.