ಕರ್ನಾಟಕ

karnataka

ETV Bharat / business

150 ರೈಲು, 50 ರೈಲ್ವೆ ನಿಲ್ದಾಣಗಳ ಖಾಸಗೀಕರಣ ವಿರೋಧಿಸಿ ಸಿಡಿದೆದ್ದ ನೌಕರರು... ಮಾಡಿದ್ದೇನು ಗೊತ್ತೆ? - ಖಾಸಗೀಕರಣ

150 ರೈಲು ಮತ್ತು 50 ರೈಲು ನಿಲ್ದಾಣಗಳ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ಒಪ್ಪಿಸಲು ಕೇಂದ್ರ ಸರ್ಕಾರ ನಡೆಯನ್ನು ಅಖಿಲ ಭಾರತ ರೈಲ್ವೆ ಮೆನ್ ಫೆಡರೇಷನ್ (ಎಐಆರ್​​ಎಫ್) ವಿರೋಧಿಸಿದೆ. ಒಕ್ಕೂಟದ ರೈಲ್ವೆ ನೌಕರರು ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಕಾರ್ಯದರ್ಶಿ ಮಟ್ಟದ ಸಮಿತಿ ರಚನೆ ಕುರಿತ ಭಾರತೀಯ ರೈಲ್ವೆಯ ಅಧಿಸೂಚನೆ ಪ್ರತಿಗಳನ್ನು ಸುಟ್ಟುಹಾಕಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 23, 2019, 9:13 PM IST

ನವದೆಹಲಿ:150 ರೈಲು ಮತ್ತು 50 ರೈಲು ನಿಲ್ದಾಣಗಳ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ಒಪ್ಪಿಸಲು ಕೇಂದ್ರ ಸರ್ಕಾರವು ನೀಲನಕ್ಷೆಯೊಂದನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ವಿರೋಧಿಸಿ ರೈಲ್ವೆ ನೌಕರರ ಒಕ್ಕೂಟಗಳು ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆ ನಡೆಸಿದವು.

ಅಖಿಲ ಭಾರತ ರೈಲ್ವೆ ಮೆನ್ ಫೆಡರೇಷನ್ (ಎಐಆರ್​​ಎಫ್) ಅನ್ವಯ, ರೈಲ್ವೆಯ ನೌಕರರು ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಕಾರ್ಯದರ್ಶಿ ಮಟ್ಟದ ಸಮಿತಿ ರಚನೆ ಕುರಿತ ಭಾರತೀಯ ರೈಲ್ವೆಯ ಅಧಿಸೂಚನೆಯ ಪ್ರತಿಗಳನ್ನು ಸುಟ್ಟುಹಾಕಿದ್ದಾರೆ.

ಕೇಂದ್ರ ಸರ್ಕಾರವು ನೀತಿ ಆಯೋಗದ ನಿರ್ದೇಶನದ ಮೇರೆಗೆ, ಭಾರತೀಯ ರೈಲ್ವೆಯ 50 ನಿಲ್ದಾಣ ಮತ್ತು 150 ರೈಲುಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲು ಕಾರ್ಯದರ್ಶಿ ಮಟ್ಟದ ಸಮಿತಿ ರಚಿಸಿದೆ. ಇದನ್ನು ವಿರೋಧಿಸಿ ಎಐಆರ್​​ಎಫ್​ ಹಾಗೂ ಇದರ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರು ತೋಳುಗಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ ಎಂದು ಸಂಘಟನಾ ಒಕ್ಕೂಟವು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಎಐಆರ್​ಎಫ್​ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಮಾತನಾಡಿ, ರೈಲ್ವೆ ನೌಕರರ ಸುಧಾರಣೆ ಮತ್ತು ಸುರಕ್ಷತೆಗೆ ಒಕ್ಕೂಟ ಬದ್ಧವಾಗಿದೆ. ಆದರೆ, ಹೆಚ್ಚಿನ ಪ್ರಯಾಣಿಕರಿಗೆ ಖಾಸಗಿ ಕಂಪನಿಗಳು ಯೋಗ್ಯವಾದ ಸೇವೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ABOUT THE AUTHOR

...view details