ನವದೆಹಲಿ :2021-22ರ ಕೇಂದ್ರ ಬಜೆಟ್ ತಯಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಜ್ಞರು ಮತ್ತು ಉದ್ಯಮಿಗಳ ಜತೆ ಬಜೆಟ್ ಪೂರ್ವ ಸಮಾಲೋಚನೆಯ ಸರಣಿ ಸಭೆಗಳನ್ನು ಇತ್ತೀಚೆಗಷ್ಟೆ ಮುಕ್ತಾಯಗೊಳಿಸಿದ್ದಾರೆ. ಸಾಂಕ್ರಾಮಿಕದ ನೆರಳಿನಲ್ಲಿ ಫೆಬ್ರವರಿ 1ರಂದು ತಮ್ಮ ಮೂರನೇ ಬಜೆಟ್ ಮಂಡಸಲಿದ್ದು, 'ಹಿಂದೆಂದೂ ಇರದಂತೆ ಇರಲಿದೆ' ಎಂದು ಹೇಳಿದ್ದರು.
ತೆರಿಗೆ ಒಳಗೊಂಡಂತೆ ಹಣಕಾಸಿನ ನೀತಿ ಸೇರಿದ ನಾನಾ ಬಗೆಯ ತಜ್ಞರ ತಂಡಗಳ ಜತೆ ಚರ್ಚಿಸಿದ್ದಾರೆ. ಬಾಂಡ್ ಮಾರುಕಟ್ಟೆ; ವಿಮೆ; ಮೂಲಸೌಕರ್ಯ ಖರ್ಚು; ಆರೋಗ್ಯ ಮತ್ತು ಶಿಕ್ಷಣ ಬಜೆಟ್; ಸಾಮಾಜಿಕ ರಕ್ಷಣೆ; ಕೌಶಲ್ಯ; ನೀರಿನ ಕೊಯ್ಲು ಮತ್ತು ಸಂರಕ್ಷಣೆ; ನೈರ್ಮಲ್ಯ; ಎಂಜಿಎನ್‌ಆರ್‌ಇಜಿಎ; ಸಾರ್ವಜನಿಕ ವಿತರಣಾ ವ್ಯವಸ್ಥೆ; ಸುಲಲಿತ ವ್ಯಾಪಾರ; ಉತ್ಪಾದನೆ-ಸಂಬಂಧಿತ ಹೂಡಿಕೆ ಯೋಜನೆಯ ರಫ್ತು; ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳ ಬ್ರ್ಯಾಂಡಿಂಗ್; ಸಾರ್ವಜನಿಕ ವಲಯದ ವಿತರಣಾ ಕಾರ್ಯವಿಧಾನಗಳು; ನಾವೀನ್ಯತೆ, ಹಸಿರು ಬೆಳವಣಿಗೆ; ಇಂಧನ ಮತ್ತು ವಾಹನಗಳ ಮಾಲಿನ್ಯರಹಿತ ಮೂಲಗಳ ಬಗ್ಗೆ ಮಾತುಕತೆ ನಡೆಸಿದ್ದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ; ರೈಲ್ವೆ, ಬ್ಯಾಂಕ್ಗಳಲ್ಲಿ ಟ್ರಾನ್ಸ್ಲೇಟರ್ ಕೆಲಸ ಮಾಡಲು ಬರಲಿವೆ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್!
2022ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಮೂಲಸೌಕರ್ಯಗಳತ್ತ ಹೆಚ್ಚು ಗಮನ ಹರಿಸಲಾಗುವುದು ಎಂದು ಸೀತಾರಾಮನ್ ಭರವಸೆ ನೀಡಿದ್ದಾರೆ. ಇದನ್ನು ಬೆಳವಣಿಗೆಯ ಲೆಕ್ಕಾಚಾರವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಅರ್ಥಶಾಸ್ತ್ರಜ್ಞರು 2020-21ರಲ್ಲಿ ಆರ್ಥಿಕತೆಯು ಶೇ.7-9ರಷ್ಟು ಕುಗ್ಗುವ ನಿರೀಕ್ಷೆಯಿದೆ. ಆದರೆ, ಹಣಕಾಸು ಸಚಿವಾಲಯವು ಮುಂದಿನ ವರ್ಷದಲ್ಲಿ ಎರಡು ಅಂಕಗಳ ಬೆಳೆವಣಿಗೆ ಪುಟಿದೇಳಲಿದೆ ಎಂಬ ನಿರೀಕ್ಷೆ ಇರಿಸಿಕೊಂಡಿದ್ದಾರೆ.