ಕರ್ನಾಟಕ

karnataka

ETV Bharat / business

EMI ನಿಷೇಧ ಮುಂದೂಡುವಂತೆ ಟ್ರಕ್ ಒಕ್ಕೂಟ ಮನವಿ, ಬೇಡ ಎನ್ನುತ್ತಿರುವ ಬ್ಯಾಂಕರ್ಸ್​: ಇಕ್ಕಟ್ಟಿನಲ್ಲಿ RBI​ - ಎಐಎಂಟಿಸಿ

ಬ್ಯಾಂಕ್​ ಮತ್ತು ಹಣಕಾಸೇತರ ಸಂಸ್ಥೆಗಳ ಮುಖ್ಯಸ್ಥರು ಮತ್ತೊಮ್ಮೆ ಇಎಂಐ ಪಾವತಿಯನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು ಎಂದು ಕೇಂದ್ರೀಯ ಬ್ಯಾಂಕ್​​ಗೆ ಮನವಿ ಮಾಡಿದ್ದಾರೆ. ಇತ್ತ, ಟ್ರಕ್​ ಒಕ್ಕೂಟ ಇಎಂಐ ಮುಂದೂಡುವಂತೆ ಕೋರಿದೆ. ಈ ಬಗ್ಗೆ ಸೆಂಟ್ರಲ್​ ಬ್ಯಾಂಕ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Road
ಸಾರಿಗೆ

By

Published : Aug 18, 2020, 6:38 PM IST

ನವದೆಹಲಿ: ಭಾರತದ ಟ್ರಕ್ ಚಾಲಕರ ಸಂಘವಾದ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ), ಸಾಲ ಪಾವತಿ ನಿಷೇಧವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್​ಗೆ (ಆರ್‌ಬಿಐ) ಮನವಿ ಮಾಡಿದೆ.

ಕೊರೊನಾ ವೈರಸ್​​ ಪ್ರೇರೇಪಿತ ಆದಾಯ ನಷ್ಟ ಅನುಭವಿಸಿದವರ ನೆರವಿಗೆ ಕೇಂದ್ರ ಧಾವಿಸಿತ್ತು. 2020ರ ಮಾರ್ಚ್ 1 ಮತ್ತು 2020ರ ಮೇ 31ರ ನಡುವಿನ ಎಲ್ಲಾ ಅವಧಿಯ ಸಾಲ ಪಾವತಿಯನ್ನು ಮೂರು ತಿಂಗಳ ನಿಷೇಧಕ್ಕೆ ಕೇಂದ್ರ ಬ್ಯಾಂಕ್ ಅನುಮತಿಸಿತ್ತು. ಇದನ್ನು ಮೇ ತಿಂಗಳಲ್ಲಿ ಆಗಸ್ಟ್​​ವರೆಗೆ ಮತ್ತೆ ಮೂರು ತಿಂಗಳು ವಿಸ್ತರಿಸಿತು. ಟ್ರಕ್​ ಚಾಲಕರ ಒಕ್ಕೂಟ ಇದನ್ನು ಮತ್ತೆ ಮುಂದೂಡುವಂತೆ ಕೇಂದ್ರ ಬ್ಯಾಂಕ್​ ಅನ್ನು ಕೋರಿದೆ.

ಕೊರೊನಾ ಮತ್ತು ಲಾಕ್‌ಡೌನ್​ನಿಂದಾಗಿ ಭಾರತದ ರಸ್ತೆ ಸಾರಿಗೆ ಕ್ಷೇತ್ರವು ತೀವ್ರ ತೊಂದರೆಗೀಡಾಗಿದೆ. ಆದಾಯ ಕುಸಿತದಿಂದಾಗಿ ಉದ್ಯಮವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಈಗಿನ ಹಣಕಾಸು ವಲಯದ ಪುನರುಜ್ಜೀವನದ ಬಗ್ಗೆ ಸ್ವಲ್ಪ ಭರವಸೆ ಇಲ್ಲ ಎಂದು ಒಕ್ಕೂಟ ಹೇಳಿದೆ.

ರಿಟರ್ನ್ ಲೋಡ್​ಗಳ ಕೊರತೆ ಮತ್ತು ತೀವ್ರ ಕುಸಿತಕ್ಕೆ ಒಳಗಾದ ಬೇಡಿಕೆಯಿಂದಾಗಿ ಅಂತಾರಾಜ್ಯ ಲಾರಿಗಳ ಓಡಾಟ ಗಮನಾರ್ಹವಾಗಿ ಕುಸಿದಿದೆ. ಜನಸಂಖ್ಯೆಯ ಶೇ 85ರಷ್ಟಿರುವ ಸರಕು ಮತ್ತು ಪ್ರಯಾಣಿಕರ ಎಲ್ಲ ವಿಭಾಗಗಳಲ್ಲೂ ಸಣ್ಣ ನಿರ್ವಾಹಕರ ಸ್ಥಿತಿ ನಿಜಕ್ಕೂ ಅನಿಶ್ಚಿತತೆಯಿಂದ ಕೂಡಿದೆ ಎಂದು ಎಐಎಂಟಿಸಿ ಅಧ್ಯಕ್ಷ ಕುಲ್ತರಣ್ ಸಿಂಗ್ ಅಟ್ವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತೆರಿಗೆ, ಡೀಸೆಲ್ ದರ ಏರಿಕೆ, ಚೆಕ್​ ಪೋಸ್ಟ್​ಗಳಲ್ಲಿನ ಭ್ರಷ್ಟಾಚಾರ ಮತ್ತು ಸುಂಕದ ಏರಿಕೆಯಿಂದ ನಿತ್ಯದ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಲೇ ಇದೆ. ಆದರೆ, ದುರ್ಬಲ ಬೇಡಿಕೆಯಿಂದಾಗಿ ಸರಕು ಸಾಗಣೆ ಕಡಿಮೆಯಾಗಿದೆ ಎಂದು ಆರ್​ಬಿಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಪ್ರಸ್ತುತ, ಸುಮಾರು 50 ಪ್ರತಿಶತದಷ್ಟು ವಾಹನಗಳು ಇನ್ನೂ ರಸ್ತೆಗೆ ಇಳಿದಿಲ್ಲ. ಈಗಿನ ನಿಷೇಧದ ಅವಧಿ ಮುಗಿದ ನಂತರ ಎನ್‌ಪಿಎಗಳಲ್ಲಿ (ಕಾರ್ಯನಿರ್ವಹಿಸದ ಸ್ವತ್ತುಗಳು) ಹೆಚ್ಚಾಗಲಿದೆ ಎಂದು ಹೇಳಿದೆ.

ಸಾರಿಗೆದಾರರು ತಮ್ಮ ಇಎಂಐ ಪಾವತಿಸಲು ಸಾಧ್ಯವಾಗುತ್ತಿಲ್ಲ. ನಿಷೇಧವು ಅವರಿಗೆ ಸ್ವಲ್ಪ ಪರಿಹಾರ ನೀಡಲಿದೆ. ಬ್ಯಾಂಕ್​ಗಳು, ಎನ್‌ಬಿಎಫ್‌ಸಿಗಳು ಮತ್ತು ಫೈನಾನ್ಷಿಯರ್‌ಗಳು ಏಜೆಂಟ್‌ಗಳಿಂದ ತಮ್ಮ ಇಎಂಐ ಪಾವತಿಸಲು ಅಥವಾ ವಾಹನ ವಶಪಡಿಸಿಕೊಳ್ಳುವಂತಹ ಒತ್ತಡ ಹೇರುತ್ತಿವೆ ಎಂದು ಹೇಳಿದರು.

ಇನ್ನೊಂದು ಬ್ಯಾಂಕ್​ ಮತ್ತು ಹಣಕಾಸೇತರ ಸಂಸ್ಥೆಗಳ ಮುಖ್ಯಸ್ಥರು ಮತ್ತೊಮ್ಮೆ ಇಎಂಐ ಪಾವತಿಯನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು ಎಂದು ಕೇಂದ್ರೀಯ ಬ್ಯಾಂಕ್​​ಗೆ ಮನವಿ ಮಾಡಿದೆ. ಇತ್ತ ಟ್ರಕ್​ ಒಕ್ಕೂಟ ಮುಂದೂಡುವಂತೆ ಕೋರಿದೆ. ಈ ಬಗ್ಗೆ ಸೆಂಟ್ರಲ್​ ಬ್ಯಾಂಕ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.

ABOUT THE AUTHOR

...view details