ಕರ್ನಾಟಕ

karnataka

ETV Bharat / business

'ಲಾಕ್​ಡೌನ್​ನಿಂದ ಆರ್ಥಿಕ ವೃದ್ಧಿ ಶೇ 2.5ಕ್ಕೆ ಕುಸಿದರೂ ಮತ್ತೆ ಶೇ 8ಕ್ಕೆ ಜಿಗಿಯಲಿದೆ' - ಭಾರತದ ಆರ್ಥಿಕತೆ

21 ದಿನಗಳವರೆಗೆ ಇರುವ ಲಾಕ್​ಡೌನ್​, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯ ಮೇಲೆ ತೀವ್ರ ಪರಿಣಾಮ ಬೀರಲಿದೆಯಂತೆ. ಬದಲಾದ ಸನ್ನಿವೇಶಗಳಿಂದಾಗಿ ಬ್ಯಾಂಕ್, ತನ್ನ 2020ರ ಕ್ಯಾಲೆಂಡರ್ ವರ್ಷದ ಜಿಡಿಪಿ ಮುನ್ಸೂಚನೆಯು ಹಿಂದಿನ ಶೇ 4.5 ರಿಂದ ಶೇ 2.5ಕ್ಕೆ ಇಳಿಸಿದೆ. 2020-21ರ ವಿತ್ತೀಯ ವರ್ಷದಲ್ಲಿ ಹಿಂದಿನ ಶೇ 5.2 ರಿಂದ ಶೇ 3.5ಕ್ಕೆ ಇಳಿಯಲಿದೆ ಎಂದು ಭವಿಷ್ಯ ನುಡಿದಿದೆ.

lockdown
ಲಾಕ್​​ಡೌನ್

By

Published : Mar 26, 2020, 3:30 PM IST

ನವದೆಹಲಿ:ನೊವೆಲ್​ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಇಡೀ ದೇಶಾದ್ಯಂತ ಮೂರು ವಾರಗಳ ಸಂಪೂರ್ಣ ಲಾಕ್‌ಡೌನ್‌ಗೆ ಕೇಂದ್ರ ಸರ್ಕಾರ ಕಠಿಣ ಮತ್ತು ಆಕ್ರಮಣಕಾರಿ ನಿರ್ಧಾರ ತೆಗೆದುಕೊಂಡಿದೆ. ಇದು ದೇಶಿ ಜಿಡಿಪಿಯ ಮೇಲೆ ಪರಿಣಾಮ ಬೀರಲಿದೆ ಎಂದು ಬಾರ್ಕ್ಲೇಸ್​ ಅಂದಾಜಿಸಿದೆ.

21 ದಿನಗಳ ವರೆಗೆ ಇರುವ ಲಾಕ್​ಡೌನ್​, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯ ಮೇಲೆ ತೀವ್ರ ಪರಿಣಾಮ ಬೀರಲಿದೆಯಂತೆ. ಬದಲಾದ ಸನ್ನಿವೇಶಗಳಿಂದಾಗಿ ಬ್ಯಾಂಕ್, ತನ್ನ 2020ರ ಕ್ಯಾಲೆಂಡರ್ ವರ್ಷದ ಜಿಡಿಪಿ ಮುನ್ಸೂಚನೆಯು ಹಿಂದಿನ ಶೇ 4.5 ರಿಂದ ಶೇ 2.5ಕ್ಕೆ ಇಳಿಸಿದೆ. 2020-21ರ ವಿತ್ತೀಯ ವರ್ಷದಲ್ಲಿ ಹಿಂದಿನ ಶೇ 5.2 ರಿಂದ ಶೇ 3.5ಕ್ಕೆ ಇಳಿಯಲಿದೆ ಎಂದು ಭವಿಷ್ಯ ನುಡಿದಿದೆ.

ಆದರೆ, ಬಾರ್ಕ್ಲೇಸ್ 2021 ಕ್ಯಾಲೆಂಡರ್​ ವರ್ಷದಲ್ಲಿ ಜಿಡಿಪಿ ಚೇತರಸಿಕೊಳ್ಳಲಿದೆ. ಮತ್ತೆ ಈ ಹಿಂದನ ಲಯಕ್ಕೆ ಮರಳಲಿದೆ. ಅದರ ಅಂದಾಜಿನಂತೆ, ಜಿಡಿಪಿ ಶೇ 8.2ರಷ್ಟು ಇದ್ದರೇ 2021-22ರಲ್ಲಿ ಶೇ 8.0 ರಷ್ಟು ಏರಿಕೆಯಾಗಿದೆ ಎಂದಿದೆ.

ಈ ನಾಲ್ಕು ವಾರಗಳ ಸಂಪೂರ್ಣ ಸ್ಥಗಿತಕ್ಕೆ ಆಧಾರದ ಮೇಲೆ ಅಂದಾಜಿಸಲಾಗಿದೆ. ಈ ಬಳಿಕ ಮೇ ಅಂತ್ಯದವರೆಗೆ ದೇಶಾದ್ಯಂತ ಮತ್ತೆ ಎಂಟು ವಾರಗಳ ಭಾಗಶಃ ಸ್ಥಗಿತಗೊಳಿಸುವಿಕೆ ಇರಬಹುದು. (ಅದರಲ್ಲಿ ಈಗಾಗಲೇ ಒಂದು ವಾರ ಕಳೆದು ಹೋಗಿದೆ). ಇವೆಲ್ಲವು ನಡೆಯುತ್ತಿರುವುದು ಕೋವಿಡ್​-19 ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಎಂದು ಬಾರ್ಕ್ಲೇಸ್‌ನ ಮುಖ್ಯ ಭಾರತ ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯಾ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಈಗಿನ ಲಾಕ್​ಡೌನ್​ನಿಂದಾಗುವ ವೆಚ್ಚವು ಸುಮಾರು 120 ಬಿಲಿಯನ್ ಡಾಲರ್​ ಅಥವಾ ಜಿಡಿಪಿಯ ಶೇ 4ರಷ್ಟು ಎಂದು ಬ್ಯಾಂಕ್ ಅಂದಾಜಿಸಿದೆ. 120 ಬಿಲಿಯನ್ ಡಾಲರ್​​ನಲ್ಲಿ ಮತ್ತೊಂದು ಸುತ್ತಿನ ಬಂದ್​ನಿಂದಾಗಿ ಸುಮಾರು 90 ಬಿಲಿಯನ್ ಡಾಲರ್​ ಹೆಚ್ಚುವರಿ ಪ್ರಭಾವ ಬೀರಬಹುದು. ಉತ್ಪಾದನೆಯಲ್ಲಿನ ನಷ್ಟದ ಸುಮಾರು 2 ಪಿಪಿಗಳಷ್ಟು ಆಗಲಿದೆ. ಇದರ ಪರಿಣಾಮವಾಗಿ ಜಿಡಿಪಿ ಬೆಳವಣಿಗೆಯನ್ನು ಕಡಿತ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ABOUT THE AUTHOR

...view details