ಕರ್ನಾಟಕ

karnataka

ETV Bharat / business

ಆರ್ಥಿಕ ಚೇತರಿಕೆ: ಖಜಾನೆಗೆ ಬಂತು 1.09 ಲಕ್ಷ ಕೋಟಿ ರೂ. ಕಾರ್ಪೊರೇಟ್ ತೆರಿಗೆ

ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್​ನ ಮುಂಗಡ ತೆರಿಗೆ ಪ್ರಮಾಣವು 73,126 ಕೋಟಿ ರೂ.ಯಷ್ಟು ಇತ್ತು. ಒಟ್ಟು ತೆರಿಗೆ ಸಂಗ್ರಹವು 7,33,715 ಕೋಟಿ ರೂ.ಯಷ್ಟಿದೆ. ತ್ರೈಮಾಸಿಕದಲ್ಲಿ ನಿವ್ವಳ ಮೇಲ್ಮುಖವು 5,87,605 ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

corporate tax
ತೆರಿಗೆ

By

Published : Dec 17, 2020, 5:44 PM IST

ನವದೆಹಲಿ: ಆರ್ಥಿಕ ಚೇತರಿಕೆ ಸಂಕೇತಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕಂಪನಿಗಳ ಮುಂಗಡ ತೆರಿಗೆ ಪಾವತಿ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 49ರಷ್ಟು ಬೆಳವಣಿಗೆ ಕಂಡಿದೆ. ಪರಿಣಾಮ 1,09,506 ಕೋಟಿ ರೂ.ಗೆ ತಲುಪಿದೆ ಎಂದು ಸಿಬಿಡಿಟಿಯ ಮೂಲವೊಂದು ತಿಳಿಸಿದೆ.

ಕಳೆದ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ಸರ್ಕಾರವು ಕಾರ್ಪೊರೇಟ್​ ತೆರಿಗೆ ದರವನ್ನು ದಾಖಲೆಯ ಶೇ 25ಕ್ಕೆ ಇಳಿಸಿತು. ಕಂಪನಿಗಳು ಕಡಿಮೆ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡಲು ಕಾರಣವಾಗಿತ್ತು. ಈಗ ತೆರಿಗೆ ಪಾವತಿಯಲ್ಲಿ ಹೆಚ್ಚಳ ಕಂಡು ಬರುತ್ತಿದೆ.

ಇದನ್ನು ಓದಿ: ಸರ್ವಗುಣ ಸಂಪನ್ನ ಅರಿಶಿನಕ್ಕೆ ಮನಸೋತ ದೊಡ್ಡಣ್ಣ: ರೈತರಿಂದ ನೇರ ಖರೀದಿಗೆ ಒಪ್ಪಂದ

ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್​ನ ಮುಂಗಡ ತೆರಿಗೆ ಪ್ರಮಾಣವು 73,126 ಕೋಟಿ ರೂ.ಯಷ್ಟು ಇತ್ತು. ಒಟ್ಟು ತೆರಿಗೆ ಸಂಗ್ರಹವು 7,33,715 ಕೋಟಿ ರೂ.ಯಷ್ಟಿದೆ. ತ್ರೈಮಾಸಿಕದಲ್ಲಿ ನಿವ್ವಳ ಮೇಲ್ಮುಖವು 5,87,605 ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ತ್ರೈಮಾಸಿಕದಲ್ಲಿ ಆದಾಯ ತೆರಿಗೆ ಇಲಾಖೆ 1,46,109 ಕೋಟಿ ರೂ. ತೆರರಿಗೆ ಬಾಕಿ ಮರುಪಾವತಿಸಿದೆ. ಇದು 2020ರ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ 1,58,988 ಕೋಟಿ ರೂ.ಗಳಿಂದ ಶೇ 8.1ಕ್ಕಿಂತ ಕಡಿಮೆಯಾಗಿದೆ. ಒಟ್ಟಾರೆ ಮುಂಗಡ ಕಾರ್ಪೊರೇಟ್ ತೆರಿಗೆ ಈ ವರ್ಷ ಇಲ್ಲಿಯವರೆಗೆ 2,39,125 ಕೋಟಿ ರೂ.ಗಳಾಗಿದೆ. ಮೊದಲ ಎರಡು ತ್ರೈಮಾಸಿಕಗಳು ಲಾಕ್‌ಡೌನ್‌ನ ಭೀತಿಯಿಂದಾಗಿ ಶೇ 4.9ರಷ್ಟು ಇಳಿಕೆಯಾಗಿ 2,51,382 ಕೋಟಿ ರೂ.ಗೆ ತಲುಪಿತ್ತು. ವೈಯಕ್ತಿಕ ಆದಾಯ ತೆರಿಗೆ ಈ ತ್ರೈಮಾಸಿಕದಲ್ಲಿ ಶೇ 5.6ರಷ್ಟು ಇಳಿದು 32,910 ಕೋಟಿ ರೂ.ಗಳಿಂದ 31,054 ಕೋಟಿ ರೂ.ಗೆ ತಲುಪಿದೆ.

ABOUT THE AUTHOR

...view details