ನವದೆಹಲಿ:ಏಷ್ಯಾನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಮತ್ತು ಕೇಂದ್ರ ಸರ್ಕಾರ 100 ಮಿಲಿಯನ್ ಡಾಲರ್ (730 ಕೋಟಿ ರೂ.) ಸಾಲಕ್ಕೆ ಸಹಿ ಹಾಕಿದ್ದು, ಈ ಸಾಲವನ್ನು ರಾಜ್ಯದ ಬೆಂಗಳೂರಿನ ವಿದ್ಯುತ್ ವಿತರಣಾ ವ್ಯವಸ್ಥೆ ಸುಧಾರಿಸಲು ಬಳಸಲಾಗುತ್ತದೆ.
ವಿದ್ಯುತ್ ವಿತರಣಾ ವ್ಯವಸ್ಥೆಯ ಆಧುನೀಕರಣ ಮತ್ತು ನವೀಕರಿಸುವ ಉದ್ದೇಶದಿಂದ ಈ ಸಾಲವು ಬೆಂಗಳೂರು ನಗರದಲ್ಲಿ ವಿದ್ಯುತ್ ಸರಬರಾಜಿನ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಮ್) 100 ಮಿಲಿಯನ್ ಡಾಲರ್ ಸಾಲವನ್ನು ಹೊರತುಪಡಿಸಿ, ಎಡಿಬಿ ಮೇಲಾಧಾರ ಇಲ್ಲದೆ ಸರ್ಕಾರಕ್ಕೆ 90 ಮಿಲಿಯನ್ ಡಾಲರ್ ಸಾಲ ನೀಡುತ್ತದೆ. ರಾಜ್ಯದ ಸರ್ಕಾರಿ ಸ್ವಾಮ್ಯದ ಐದು ವಿತರಣದಾರರಲ್ಲಿ ಬೆಸ್ಕಾಂ ಕೂಡ ಒಂದು.
ಇದನ್ನೂ ಓದಿ: ಟಾಟಾ ಮೋಟಾರ್ಸ್-ಕರ್ನಾಟಕ ಬ್ಯಾಂಕ್ ಒಪ್ಪಂದ: ವಾಹನ ಖರೀದಿ ಗ್ರಾಹಕರಿಗೆ ಸಿಗಲಿದೆ ಸುಲಭ ಸಾಲ!
ಈ ಸಾಲದ ಮೂಲಕ ನೆಲದಾಳದಲ್ಲಿ ವಿತರಣಾ ಕೇಬಲ್‌ಗಳ ಜೊತೆಗೆ ಸಂವಹನ ಜಾಲವನ್ನು ಬಲಪಡಿಸಲು 2,800 ಕಿ.ಮೀ.ಗಿಂತ ಹೆಚ್ಚಿನ ಫೈಬರ್ ಆಪ್ಟಿಕಲ್ ಕೇಬಲ್‌ಗಳನ್ನು ಅಳವಡಿಸಲಾಗುತ್ತದೆ. ಸುಮಾರು 7,200 ಕಿ.ಮೀ. ವಿತರಣಾ ಮಾರ್ಗಗಳನ್ನು ನೆಲದಾಳದಲ್ಲಿ ಚಲಿಸುವ ತಾಂತ್ರಿಕ ಮತ್ತು ವಾಣಿಜ್ಯ ನಷ್ಟವನ್ನು ಸುಮಾರು ಶೇ. 30ರಷ್ಟು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಫೈಬರ್ ಆಪ್ಟಿಕಲ್ ಕೇಬಲ್‌ಗಳನ್ನು ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆ, ವಿತರಣಾ ಗ್ರಿಡ್‌ನಲ್ಲಿ ಯಾಂತ್ರೀಕೃತ ಸಿಸ್ಟಮ್ (ಡಿಎಎಸ್) ಮತ್ತು ಇತರ ಸಂವಹನ ನೆಟ್‌ವರ್ಕ್‌ಗಳಿಗೆ ಬಳಸಲಾಗುತ್ತದೆ. ಯೋಜನೆಯ ಭಾಗವಾಗಿ 1,700 ಸ್ವಯಂಚಾಲಿತ ರಿಂಗ್ ಮುಖ್ಯ ಘಟಕಗಳನ್ನು ಸ್ಥಾಪಿಸಲಾಗುತ್ತದೆ.