ಕರ್ನಾಟಕ

karnataka

ETV Bharat / business

ಭಾರತದ ಕೊರೊನಾ ಯುದ್ಧಕ್ಕೆ ಮೆಚ್ಚುಗೆ... 11,000 ಕೋಟಿ ರೂ. ಸಾಲಕ್ಕೆ ಏಷ್ಯಾ ಬ್ಯಾಂಕ್ ಅನುಮೋದನೆ - ಭಾರತದ ಆರ್ಥಿಕತೆ

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯಂತಹ ತಕ್ಷಣದ ಆದ್ಯತೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಸಾಲ ಮಂಜೂರು ಮಾಡಲಾಗಿದೆ. ಜೊತೆಗೆ ಬಡವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸಾಮಾಜಿಕ ರಕ್ಷಣೆ ನೀಡಬೇಕು ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಹೇಳಿದೆ.

Money
ಹಣ

By

Published : Apr 28, 2020, 6:12 PM IST

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಭಾರತ ಹೋರಾಟವನ್ನು ಮೆಚ್ಚಿದ್ದ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಎ), ಈ ಹಿಂದೆ 16 ಸಾವಿರ ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿತ್ತು. ಈಗ 1.5 ಬಿಲಿಯನ್ ಡಾಲರ್​ (11,369 ಕೋಟಿ ರೂ.) ಸಾಲಕ್ಕೆ ಅನುಮೋದನೆ ನೀಡಿದೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯಂತಹ ತಕ್ಷಣದ ಆದ್ಯತೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಸಾಲ ಮಂಜೂರು ಮಾಡಲಾಗಿದೆ. ಜೊತೆಗೆ ಬಡವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸಾಮಾಜಿಕ ರಕ್ಷಣೆಯನ್ನು ನೀಡಬೇಕು ಎಂದು ಹೇಳಿದೆ.

ಈ ಕಠಿಣ ಬಿಕ್ಕಟ್ಟಿನ ಸವಾಲಿಗೆ ಭಾರತ ಸರ್ಕಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಿಗೆ ಬೆಂಬಲ ನೀಡಲು ಸಂಪೂರ್ಣ ಬದ್ಧವಾಗಿದೆ ಎಂದು ಎಡಿಬಿ ಅಧ್ಯಕ್ಷ ಮಟಾಸುಕು ಆಸ್ಕಾವಾ ಹೇಳಿದ್ದಾರೆ.

ತ್ವರಿತ ವಿತರಣಾ ಈ ನಿಧಿಯು ಸರ್ಕಾರ ಮತ್ತು ಇತರ ಅಭಿವೃದ್ಧಿ ಪಾಲುದಾರರ ಜತೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸಲು ಎಡಿಬಿ ಒದಗಿಸುವ ಬೆಂಬಲ ದೊಡ್ಡ ಮೊತ್ತದ ಪ್ಯಾಕೇಜ್​ನ ಭಾಗವಾಗಿದೆ.

ಭಾರತದ ಕೋವಿಡ್-19 ವಿರುದ್ಧದ ಪ್ರತಿಕ್ರಿಯೆ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದೇವೆ. ಭಾರತದ ಜನರಿಗೆ ವಿಶೇಷವಾಗಿ ಬಡವರು ಮತ್ತು ದುರ್ಬಲರಿಗೆ ಪರಿಣಾಮಕಾರಿ ಬೆಂಬಲ ನೀಡುವಂತೆ ಅಸ್ಕಾವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details