ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ 'ಸ್ವಾವಲಂಬಿಗಳಾಗಲು' ಮತ್ತು ಕೋವಿಡ್ -19 ವಿರುದ್ಧ ವ್ಯವಹರಿಸಲು 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಒಟ್ಟು ಪ್ಯಾಕೇಜ್‌ನಲ್ಲಿ ಸರ್ಕಾರದ ಹಣದ ಹೊರಹರಿವಿನ ಮೊತ್ತ ಕೇವಲ 4 ಲಕ್ಷ ಕೋಟಿ ರೂ. ಇದೆ ಎಂದು ಟೀಕಿಸಿದ್ದಾರೆ.
ನಿಜವಾದ ಪ್ಯಾಕೇಜ್ 20 ಲಕ್ಷ ಕೋಟಿಯಲ್ಲ, ಕೇವಲ 4 ಲಕ್ಷ ಕೋಟಿ ರೂ.: ಕಪಿಲ್ ಸಿಬಲ್ - ಆತ್ಮ ನಿರ್ಭಾರ ಭಾರತ
ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನಿನ್ನೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಇದು ದೇಶದ ಒಟ್ಟಾರೆ ಜಿಡಿಪಿಯ ಶೇ 10ರಷ್ಟು ಪರಿಹಾರ ಪ್ಯಾಕೇಜ್ ನೀಡಿಲಾಗಿದೆ ಎಂದಿದ್ದರು.
ಕಪಿಲ್ ಸಿಬಾಲ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 8 ಲಕ್ಷ ಕೋಟಿ ರೂ. ಉತ್ತೇಜಕ, 5 ಲಕ್ಷ ಕೋಟಿ ರೂ. ಹೆಚ್ಚುವರಿ ಸರ್ಕಾರಿ ಸಾಲ ಮತ್ತು 1 ಲಕ್ಷ ಕೋಟಿ ರೂ. ರಿವಾಲ್ವಿಂಗ್ ಭದ್ರತೆಯಿಂದ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.