ಕರ್ನಾಟಕ

karnataka

ETV Bharat / business

HDFC, ಮಾಸ್ಟರ್‌ಕಾರ್ಡ್ ವಿರುದ್ಧ RBI ಕಠಿಣ ಕ್ರಮ... ಈಗಿರುವ ಕಾರ್ಡ್​​​ದಾರರಿಗೆ ಇಲ್ಲ ಯಾವುದೇ ಭಯ! - ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣ ಹೆಚ್‌ಡಿಎಫ್‌ಸಿ ಬ್ಯಾಂಕ್, ಮಾಸ್ಟರ್‌ಕಾರ್ಡ್ ಹಾಗೂ ಅಮೆರಿಕನ್ ಎಕ್ಸ್‌ಪ್ರೆಸ್‌ ವಿರುದ್ಧ ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದೆ.

HDFC, ಮಾಸ್ಟರ್‌ಕಾರ್ಡ್ ವಿರುದ್ಧ RBI ಕಠಿಣ ಕ್ರಮ
HDFC, ಮಾಸ್ಟರ್‌ಕಾರ್ಡ್ ವಿರುದ್ಧ RBI ಕಠಿಣ ಕ್ರಮ

By

Published : Aug 6, 2021, 7:55 PM IST

ಮುಂಬೈ: ಹಣಕಾಸು ಸೇವೆಗಳ ಕಂಪನಿಗಳಾದ ಹೆಚ್‌ಡಿಎಫ್‌ಸಿ ಬ್ಯಾಂಕ್, ಮಾಸ್ಟರ್‌ಕಾರ್ಡ್ ಹಾಗೂ ಅಮೆರಿಕನ್ ಎಕ್ಸ್‌ಪ್ರೆಸ್‌ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಠಿಣ ಕ್ರಮ ಕೈಗೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ಸೇವೆ ಕುರಿತು ನಿರ್ದೇಶಿಸಿದ್ದ ಆರ್​ಬಿಐ ಇದೀಗ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿದೆ. ಹೆಚ್‌ಡಿಎಫ್‌ಸಿ ಜೊತೆಗೆ ಮಾಸ್ಟರ್‌ಕಾರ್ಡ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್‌ ಕಂಪನಿಗಳಿಗೂ ಯಾವುದೇ ಡೆಬಿಟ್‌, ಕ್ರೆಡಿಟ್‌ ಹಾಗೂ ಪ್ರಿಪೇಯ್ಡ್‌ ಕಾರ್ಡ್​ ವಿತರಿಸದಂತೆ ಸೂಚಿಸಿದೆ.

ಇದನ್ನೂ ಓದಿ: ಅಮೆಜಾನ್‌ ದಿಗ್ವಿಜಯ ; ರಿಲಯನ್ಸ್‌ ಇಂಡಸ್ಟ್ರೀಸ್‌, ಫ್ಯೂಚರ್‌ ಗ್ರೂಪ್‌ ಸ್ವತ್ತುಗಳ ಖರೀದಿಗೆ ಸುಪ್ರೀಂಕೋರ್ಟ್‌ ತಡೆ

ಈ ಮೂರು ಕಂಪನಿಗಳಲ್ಲಿ ಈಗಿರುವ ಗ್ರಾಹಕರ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ದೇಶದಲ್ಲಿ ಹೊಸ ಗ್ರಾಹಕರನ್ನು ಈ ಕಂಪನಿಗಳು ಸ್ವೀಕರಿಸಿದಂತೆ ಆರ್‌ಬಿಐ ತಿಳಿಸಿದೆ. ರಿಸರ್ವ್ ಬ್ಯಾಂಕ್​ನ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣ ಈ ನಿರ್ಬಂಧ ವಿಧಿಸಲಾಗಿದೆ ಎಂದು ಆರ್​ಬಿಐ ಗವರ್ನರ್​ ಶಕ್ತಿಕಾಂತ್ ದಾಸ್​ ಹೇಳಿದ್ದಾರೆ.

ABOUT THE AUTHOR

...view details