ನವದೆಹಲಿ:ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ (ಏಪ್ರಿಲ್-ಡಿಸೆಂಬರ್) ಭಾರತದ ರತ್ನಗಳು ಮತ್ತು ಚಿನ್ನಾಭರಣಗಳ ರಫ್ತು ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 71 ರಷ್ಟು ಏರಿಕೆ ಕಂಡಿದೆ.
ಮೌಲ್ಯದ ಲೆಕ್ಕದಲ್ಲಿ 2020ರಲ್ಲಿ ಇದೇ ಅವಧಿಯಲ್ಲಿ ₹16.9 ಶತಕೋಟಿ ಡಾಲರ್‌ಗೆ ಹೋಲಿಸಿದರೆ ಬಾರಿ ₹28.9 ಶತಕೋಟಿ ರಫ್ತು ಮಾಡಿದೆ. ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಅದೇ ಅವಧಿಗೆ ಹೋಲಿಸಿದರೆ, ರತ್ನಗಳು ಮತ್ತು ಆಭರಣ ವಲಯವು ಏಪ್ರಿಲ್-ಡಿಸೆಂಬರ್ 2019 ರಲ್ಲಿ ಸಾಧಿಸಿದ ₹28 ಶತಕೋಟಿಗಿಂತ ಶೇ. 3ರಷ್ಟು ಏರಿಕೆಯನ್ನು ಮತ್ತೆ ದಾಖಲಿಸಿದೆ.
ಡಿಸೆಂಬರ್ 2021ರಲ್ಲಿ ಭಾರತವು ₹2.99 ಶತಕೋಟಿ ಮೌಲ್ಯದ ರತ್ನಗಳು ಮತ್ತು ಆಭರಣಗಳನ್ನು ರಫ್ತು ಮಾಡಿದೆ. ಡಿಸೆಂಬರ್ 2020 ರಲ್ಲಿ ₹2.57 ಶತಕೋಟಿಗಿಂತ 16.38 ರಷ್ಟು ಏರಿಕೆ ದಾಖಲಿಸಿದೆ.
ಇಂಜಿನಿಯರಿಂಗ್ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ನಂತರ ಮೂರನೇ ಅತಿದೊಡ್ಡ ಸರಕು ಪಾಲನ್ನು ಹೊಂದಿರುವ ರತ್ನಗಳು ಮತ್ತು ಆಭರಣ ವಲಯವು ಏಪ್ರಿಲ್ - ಡಿಸೆಂಬರ್ 2021ಅವಧಿಯಲ್ಲಿ ಭಾರತದ ಸಂಪೂರ್ಣ ರಫ್ತು ಪಟ್ಟಿಯಲ್ಲಿ ಶೇ.9.6 ರಷ್ಟು ಪಾಲನ್ನು ಹೊಂದಿದೆ.