ನವದೆಹಲಿ: ಕೇರಳ, ಪಂಜಾಬ್ ಸೇರಿದಂತೆ ಬಿಜೆಪಿಯೇತರ 7 ರಾಜ್ಯಗಳು (ಕೇಂದ್ರಾಡಳಿತ ಪುದುಚೇರಿ ಹೊರತುಪಡಿಸಿ) ಜಿಎಸ್‌ಟಿ ಕೊರತೆ ನೀಗಿಸಲು ರಾಜ್ಯಗಳು ಸಾಲ ಪಡೆಯುವ ಕೇಂದ್ರದ ಪ್ರಸ್ತಾಪದ ಸಲಹೆಯನ್ನು ಸೋಮವಾರ ತಿರಸ್ಕರಿಸಿವೆ.
ರಾಜ್ಯಗಳಿಗೆ ಸಲ್ಲಬೇಕಾದ ತೆರಿಗೆ ಪರಿಹಾರದ ಪಾಲು ನೀಡುವುದು ಸಾಂವಿಧಾನಿಕ ಹೊಣೆಗಾರಿಕೆಯು ಕೇಂದ್ರ ಸರ್ಕಾರದ ಮೇಲಿದೆ ಎಂದು ರಾಜ್ಯಗಳು ಹೇಳಿವೆ.
ಸೋಮವಾರ ನಡೆದ ಅನೌಪಚಾರಿಕ ಸಭೆಯಲ್ಲಿ ಬಿಜೆಪಿಯೇತರ ಆರು ರಾಜ್ಯಗಳಾದ ಪಂಜಾಬ್, ಪಶ್ಚಿಮ ಬಂಗಾಳ, ಕೇರಳ, ದೆಹಲಿ, ಛತ್ತೀಸ್‌ಗಢ ಮತ್ತು ತೆಲಂಗಾಣ ಜಿಎಸ್‌ಟಿ ಆದಾಯದ ಕೊರತೆ ಸರಿದೂಗಿಸಲು ಪರ್ಯಾಯ ಕಾರ್ಯವಿಧಾನ ರೂಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಆಡಳಿತದ ರಾಜಸ್ಥಾನ ಮತ್ತು ಪುದುಚೇರಿ ಕೂಡ ಸೂಕ್ತವಾದ ನಡೆಯನ್ನು ತಾವು ಅನುಸರಿಸುತ್ತೇವೆ ಎಂದು ಹೇಳಿವೆ.
ಜಿಎಸ್‌ಟಿ ಆದಾಯದ ಕೊರತೆ ಪೂರೈಸಲು ರಾಜ್ಯಗಳು ಸಾಲ ಪಡೆಯುವ ಕೇಂದ್ರದ ಪ್ರಸ್ತಾಪವನ್ನು ಪಂಜಾಬ್ ಹಣಕಾಸು ಸಚಿವ ಮನ್ಪ್ರೀತ್ ಸಿಂಗ್ ಬಾದಲ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. 'ಇದೊಂದು ಗಂಭೀರ ಮತ್ತು ಸಾಂವಿಧಾನಿಕ ಭರವಸೆಯ ಸ್ಪಷ್ಟ ಉಲ್ಲಂಘನೆ. ಒಕ್ಕೂಟ ವ್ಯವಸ್ಥೆಯ ಆತ್ಮಕ್ಕೆ ಎಸಗಿದ ದ್ರೋಹ' ಎಂದು ಕಿಡಿಕಾರಿದ್ದಾರೆ.
ಕಳೆದ ಜಿಎಸ್‌ಟಿಸಿ ಸಭೆಯಲ್ಲಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಾದಲ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸೋಮವಾರ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ವಿಷಯದ ಬಗ್ಗೆ ಸಂಪೂರ್ಣ ಸ್ಪಷ್ಟತೆ ಕೊಡಲು ಮತ್ತೊಂದು ತುರ್ತು ಸಭೆ ನಡೆಸಬೇಕು ಎಂದರು.
ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ತೆಲಂಗಾಣ ಮತ್ತು ಕೇರಳ ರಾಜ್ಯ ಸರ್ಕಾರಗಳು ಜಿಎಸ್‌ಟಿ ಪರಿಹಾರದ ಕುರಿತು ಕೇಂದ್ರದ ಆಯ್ಕೆಗಳನ್ನು ತಿರಸ್ಕರಿಸಲು ಸಹಮತ ವ್ಯಕ್ತಪಡಿಸಿವೆ. ದೇವರ ಕಾರ್ಯಚಟುವಟಿಕೆ, ಮಾನವರ ಅಥವಾ ಪ್ರಕೃತಿಕ ವಿಕೋಪದ ಹೊರತಾಗಿಯೂ ರಾಜ್ಯಗಳಿಗೆ ಬರಬೇಕಾದ ಪರಿಹಾರವನ್ನು ಕೇಂದ್ರ ಸರ್ಕಾರ ಸೆಸ್‌ನ ಅವಧಿ ವಿಸ್ತರಿಸುವ ಮೂಲಕ ಮರುಪಾವತಿಸಬೇಕು ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಒತ್ತಾಯಿಸಿದ್ದಾರೆ.
ಸಾಕಪ್ಪ ಸಾಕು!. ಇನ್ನು ಮುಂದೆ ರಾಜ್ಯಗಳು ಹಕ್ಕುಗಳಿಗೆ ಶರಣಾಗುವುದಿಲ್ಲ. ಜಿಎಸ್‌ಟಿ ಪರಿಹಾರ ಪಡೆಯುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಐಸಾಕ್ ಟ್ವೀಟ್ ಮಾಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2.35 ಲಕ್ಷ ಕೋಟಿ ರೂ. ಜಿಎಸ್‌ಟಿ ಕೊರತೆಯ ಬಗ್ಗೆ ಕೇಂದ್ರ ಮತ್ತು ಪ್ರತಿಪಕ್ಷ ಆಡಳಿತದ ರಾಜ್ಯಗಳು ಭಿನ್ನಾಭಿಪ್ರಾಯ ಹೊಂದಿವೆ.
ಜಿಎಸ್‌ಟಿ ಡೆಡ್ಲಾಕ್ ಬಗ್ಗೆ ಕೇಂದ್ರದ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ನಾವೆಲ್ಲರೂ ತಪ್ಪಾಗಿ ಗ್ರಹಿಸಿದ್ದೇವೆ. ಇದು ಮಂಡಳಿಯ ವಿಚಾರಣೆಯ ಬಗ್ಗೆ ವಿಷಾದಕರವಾದ ವ್ಯಾಖ್ಯಾನವಾಗಿದೆ. ನಾವು 5 ಗಂಟೆಗಳ ಕಾಲ ಚರ್ಚಿಸಿ ಆ ನಂತರ ಪ್ರಸ್ತಾಪಗಳೊಂದಿಗೆ ಹೊರ ಬರುತ್ತೇವೆ. ಅದು ಚರ್ಚೆಗಳೊಂದಿಗೆ ಸಂಪೂರ್ಣವಾಗಿ ಸಂವಹನ ಕಡಿತಗೊಂಡಿದೆ. ಯಾವುದೇ ಸ್ಪಷ್ಟಿಕರಣಕ್ಕೆ ಸಮಯವಿಲ್ಲ ಎಂದು ಬರೆದುಕೊಂಡಿದ್ದಾರೆ.