ಕರ್ನಾಟಕ

karnataka

ETV Bharat / business

'ಅರ್ಥಸಮರ'ದ ಮಧ್ಯೆ ಮೋದಿ ಆಶಾಭಾವ; ಮಹಾಪತನಕ್ಕೂ ಮುನ್ನ ಕೇಂದ್ರ, ರಾಜ್ಯಗಳು ಮಾಡಬೇಕಾದ್ದೇನು?

ನಿಧಾನಗತಿಯ ಜಾಗತಿಕ ವಿತ್ತೀಯ ಬೆಳವಣಿಗೆಯ ಮಧ್ಯೆ, ಭಾರತದ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಕನಸು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಈ ಆಶಾಭಾವ ದೇಶದ ಅಭಿವೃದ್ಧಿಗೆ ಆಶಾಕಿರಣ ಇದ್ದಂತೆ ಎಂದು ಎಲ್ಲೆಡೆ ವಿಶ್ಲೇಷಣೆಗಳು ನಡೆದಿವೆ. ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಮೂರನೇ ಮಹಾಶಕ್ತಿ ಆಗುವತ್ತ ಭಾರತ ಚಿತ್ತ ನೆಟ್ಟಿದೆ. ಇದು ಆಶಾದಾಯಕ ಬೆಳವಣಿಗೆಯೇ ಸರಿ. ಇದು ಆಕಾಶದೆತ್ತರದ ಆಶಾಭಾವ. ನೆಪೋಲಿಯನ್​ ಬೋನಾಪಾರ್ಟೆ ಅವರ,  'ಜಗತ್ತಿನಲ್ಲಿ ಅಸಾಧ್ಯ ಎಂಬುದು ಯಾವುದೂ ಇಲ್ಲ' ಎಂಬ ಉಕ್ತಿಯೇ ಈ ಗುರಿ ಮುಟ್ಟಲು ಸ್ಫೂರ್ತಿ.

ಸಾಂದರ್ಭಿಕ ಚಿತ್ರ

By

Published : Sep 5, 2019, 9:42 AM IST

ಮೋದಿ ನೇತೃತ್ವದ ಕೇಂದ್ರ ಸರ್ಕಾರ 2ನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ 2024ರ ವೇಳೆಗೆ ಐದು ಟ್ರಿಲಿಯನ್​ ಡಾಲರ್​ (ಸರಿಸುಮಾರು 36 ಲಕ್ಷ ಕೋಟಿ ರೂ. ಆರ್ಥಿಕತೆ) ಸುದ್ದಿ ಸದ್ದು ಮಾಡುತ್ತಿದೆ. ಈ ವರ್ಷದಲ್ಲಿ ಭಾರತದ ಜಿಡಿಪಿ ಪಾತಾಳ ಕಾಣುತ್ತಿದೆ.

ಇಷ್ಟೆಲ್ಲದರ ಮಧ್ಯೆ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಕನಸು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಈ ಆಶಾಭಾವ ದೇಶದ ಅಭಿವೃದ್ಧಿಗೆ ಆಶಾಕಿರಣ ಇದ್ದಂತೆ ಎಂದು ಎಲ್ಲೆಡೆ ವಿಶ್ಲೇಷಣೆಗಳು ನಡೆದಿವೆ.

ಇಂತಹ ಉತ್ತಮ ಧ್ಯೇಯೋದ್ದೇಶ ದೇಶಕ್ಕೆ ಒಳಿತು ಮಾಡಬಹುದು. ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ಲ್ಯಾಟಿನ್​ ಅಮೆರಿಕನ್​ ಹಣಕಾಸು ವ್ಯವಸ್ಥೆಯಂತೆ ಅಸಮತೋಲನಕ್ಕೆ ದಾರಿ ಮಾಡಿಕೊಡುವುದಿಲ್ಲ ಎಂಬ ವಿಶ್ವಾಸ ಇಡಬಹುದು.

ಅತ್ಯಂತ ಪ್ರಮುಖ ವಿಷಯ ಎಂದರೆ, ದೇಶದ ಆರ್ಥಿಕತೆ ದುಪ್ಪಟ್ಟಾಗಬೇಕಾದರೆ, ದೇಶದ ಎಲ್ಲ ರಾಜ್ಯಗಳ ಆರ್ಥಿಕ ಸ್ಥಿತಿಗಳಲ್ಲಿ ಪವಾಡ ಸದೃಶ ರೀತಿಯಲ್ಲಿ ಬದಲಾವಣೆ ಆಗಬೇಕಿದೆ. ರಾಜ್ಯಗಳು ವಿನಿಯೋಗಿಸುವ ಹಣ ಆರ್ಥಿಕತೆಯ ಮೇಲೆ ದುಪ್ಪಟ್ಟಿಗಿಂತ ಹೆಚ್ಚಿನ ವೇಗದಲ್ಲಿ ಸಾಗಬೇಕಿದೆ. ಕೇಂದ್ರ ಸರ್ಕಾರ ವಿನಿಯೋಗಿಸುವ ಹಣದ ಮಟ್ಟಕ್ಕೆ ರಾಜ್ಯಗಳು ವಿನಿಯೋಗಿಸಬೇಕಿದೆ.

ವಿಶೇಷ ಎಂದರೆ 36 ಲಕ್ಷ ಕೋಟಿ ರೂ. ಆರ್ಥಿಕತೆ ಸಾಧಿಸಬೇಕಾದರೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಇರುವ ಸರ್ಕಾರಗಳು ಅಲ್ಲಿನ ಆಡಳಿತ ಹಾಗೂ ಪ್ರತಿಪಕ್ಷಗಳು ಹಾಗೂ ರಾಜ್ಯಗಳಲ್ಲಿ ಇರುವ ಸರ್ಕಾರಗಳು ಕೇಂದ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಲ್ಲದೆ, ಪರಸ್ಪರ ಸಹಕಾರ ನೀಡಬೇಕಿದೆ. ಕಠಿಣ ಕ್ರಮಗಳನ್ನ ಮುಂದೂಡುವ ನಿರ್ಧಾರದಿಂದ ಹಿಂದೆ ಸರಿಯಬೇಕಿದೆ.

ಇನ್ನು ಈಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಆರ್ಥಿಕ ಮಾದರಿಗಳನ್ನ ಸಂಪೂರ್ಣವಾಗಿ ವಿಮರ್ಶೆಗೆ ಒಳಪಡಿಸಬೇಕಿದೆ. ಆದರೆ, ಇದಕ್ಕೆ ಕಾಲ ಮಿಂಚಿ ಹೋಗಿದೆ ಎನ್ನಬಹುದು. ಇನ್ನು ರಾಜ್ಯಗಳು ತಮ್ಮ ಹಿತಾಸಕ್ತಿಗಾಗಿ ಮಾಡಿಕೊಂಡಿರುವ ಗುಪ್ತ ಆರ್ಥಿಕ ಮೂಲ ತತ್ವಗಳಲ್ಲಿ ಕೆಲ ಬದಲಾವಣೆ ತರಬೇಕು.

ಕೃಷಿ, ಉತ್ಪಾದನಾ ವಲಯ, ಸೇವೆ ಹಾಗೂ ರಫ್ತು ಪ್ರಮಾಣ ಹೆಚ್ಚಳವಾಗಲೇಬೇಕಿದೆ. ಅಂದಾಗ ಮಾತ್ರ ದೇಶದ ಆರ್ಥಿಕ ವೃದ್ಧಿಯನ್ನ ದ್ವಿಗುಣಗೊಳಿಸಬಹುದಾಗಿದೆ. ನಮ್ಮ ಆರ್ಥಿಕ ಬೆಳವಣಿಗೆಯು ಕಡಿಮೆ ಮಟ್ಟದ ಸೇವಾ ಕ್ಷೇತ್ರಗಳಲ್ಲಿನ ಬೆಳವಣಿಗೆ ಆಧರಿಸಿದೆ.

5 ಟ್ರಿಲಿಯನ್ ಡಾಲರ್​​​ ಆರ್ಥಿಕತೆ

ಸರ್ಕಾರದ ಎಲ್ಲ ಹಂತಗಳಿಂದ ಸಾಲದ ಭಾರಿ ಹೆಚ್ಚಳವನ್ನು ಆಧರಿಸಿದೆ, ಆಗ ಕಾರ್ಮಿಕ ತೀವ್ರ ಉತ್ಪಾದನೆ ಅಥವಾ ಕೃಷಿಯಲ್ಲಿ ಸಾಕಷ್ಟು ಬೆಳವಣಿಗೆ ಅಥವಾ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡದೆ ಖರ್ಚು ಮಾಡಲಾಯಿತು. ಉತ್ಪಾದನಾ ವಲಯದಲ್ಲಿ ಕಾರ್ಮಿಕರನ್ನ ಹೆಚ್ಚಿಸದೇ ಹಾಗೂ ಕೃಷಿ ಅಥವಾ ಮೂಲ ಸೌಕರ್ಯ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ಕಾಣದೇ ಅಭಿವೃದ್ಧಿ ಅಸಾಧ್ಯವೇ ಸರಿ.

ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವೇ ಆಗುವುದಿಲ್ಲ. ಜಿಡಿಪಿ ಹೆಚ್ಚುತ್ತಲೇ ಇದ್ದಾಗ ಯಶಸ್ವಿ ಸರ್ಕಾರಗಳು ಖುಷಿಯಲ್ಲೇ ಇದ್ದವು. ಪರಿಣಾಮ ಈ ಫಲಿತಾಂಶಕ್ಕೆ ಕಾರಣ ಸಾಲ ಯಾಕೆಂದರೆ ಈ ಮೂಲಕ ಹೆಚ್ಚು ಬಳಕೆಗೆ ಅವಕಾಶ ಸಿಕ್ಕಿತ್ತು. ಸರ್ಕಾರ ಸೇವಾ ಕ್ಷೇತ್ರದ ಕೆಳ ಹಂತದ ಬೆಳವಣಿಗೆಗೆ ಹೆಚ್ಚಿನ ಹನ ವಿನಿಯೋಗ ಮಾಡಿತ್ತು. ಆದರೆ, ಆದರೆ ಇದು ಜಾಗತಿಕ ಪೈಪೋಟಿ ನೀಡುವಲ್ಲಿ ಶ್ರಮ ಸಾಕಾಗದಷ್ಟಾಗಿತ್ತು. ವಾಸ್ತವಾಂಶ ಏನೆಂದರೆ ಯಾವಾಗ ತಂತ್ರಜ್ಞಾನ ಪೂರ್ಣ ಬದಲಾವಣೆ ತಂದಿತೋ ಆಗ ಮೇಲ್ಮಟ್ಟದ ಸೇವಾ ಕ್ಷೇತ್ರ ಬೆಳವಣಿಗೆ ಮಾತ್ರ ಆರ್ಥಿಕತೆಯ ಪೈಪೋಟಿಯನ್ನ ತೀವ್ರಗೊಳಿಸಬಹುದು.

ಸಮಸ್ಯೆ ಏನಂದ್ರೆ: ಹೆಚ್ಚುತ್ತಿರುವ ವೆಚ್ಚ ಮತ್ತು ಸಾಲಗಳು
5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಮೊದಲ ಶತ್ರು ಹೆಚ್ಚುತ್ತಿರುವ ವೆಚ್ಚ ಮತ್ತು ಸಾಲಗಳು. ಇವು ಭಾರತೀಯ ರಾಜ್ಯಗಳ ಈಗಿನ ಪರಿಸ್ಥಿತಿ. ಕಳೆದ 10 ವರ್ಷಗಳಲ್ಲಿ ಆರ್ಥಿಕತೆಯ ಒಟ್ಟಾರೆ ನಿವ್ವಳ ಮೌಲ್ಯ ದ್ವಿಗುಣವೇ ಆಗಿಲ್ಲ. 2014- 17ರ ಕಾಲಾವಧಿಯಲ್ಲಿ ರಾಜ್ಯಗಳಲ್ಲಿ ಇರುವ ಕೈಗಾರಿಕೆಗಳ ಬೆಳವಣಿಗೆ ತೀರಾ ಕಡಿಮೆ ಇದೆ. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ಜಿಎಸ್​ಟಿ ಹಾಗೂ ನೋಟ್​ ಬ್ಯಾನ್​ ತೀವ್ರ ಪರಿಣಾಮ ಬೀರಿದೆ. ಇದನ್ನ ಯಾರೂ ಅಲ್ಲಗಳೆಯಲೂ ಆಗಲ್ಲ. ಇನ್ನು ಆಸಕ್ತಿಕರ ಅಂಶ ಎಂದರೆ, 2012-13 ರಿಂದ 2016-17ರ ಅವಧಿಯಲ್ಲಿ ಒಟ್ಟು ಬಂಡವಾಳ ವೃದ್ಧಿ ಬೆಳವಣಿಗೆ ಕಡಿಮೆ ಆಗುತ್ತಲೇ ಇದೆ. ಇದಕ್ಕೆ ಮತ್ತಷ್ಟು ಬರೆ ಎಳೆದಿದ್ದು, ಜಿಎಸ್​​ಟಿ ಹಾಗೂ ನೋಟ್​ ಬ್ಯಾನ್​. ​​
ರಾಜ್ಯಗಳ ಅತಿದೊಡ್ಡ ಸಮಸ್ಯೆ ಎಂದರೆ, ಅವುಗಳ ವೆಚ್ಚ ಹಾಗೂ ಹೆಚ್ಚುತ್ತಿರುವ ಬಡ್ಡಿಗಳ ಪಾವತಿ. ಆದರೆ ಇವುಗಳ ಆದಾಯ ವೃದ್ಧಿ ಮಾತ್ರ ಅತ್ಯಂತ ಆಮೆ ವೇಗದಲ್ಲಿ ಮುಂದುವರೆದಿದೆ. ಆದರೆ, ಬಡ್ಡಿ ಮಾತ್ರ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ. 1930ರಲ್ಲಿ 30,300 ಕೋಟಿ ರೂ. ತೆರಿಗೆ ಆದಾಯ ಇದ್ದರೆ, ಈಗ ಅದು 11.99 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

2014 -15ರವರೆಗೂ ಆ ತೆರಿಗೆ ಆದಾಯ 7.80 ಲಕ್ಷ ಕೋಟಿ ರೂ. ಇದ್ದದ್ದು ಈಗ ಅದು 11.99 ಕೋಟಿ ರೂ. ಗೆ ಏರಿಕೆ ಆಗಿದೆ. ಶೇ 35ರ ಆಸುಪಾಸಿನಲ್ಲಿ ತೆರಿಗೆ ಆದಾಯ ಹೆಚ್ಚಳವಾಗುತ್ತಿದ್ದರೆ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರ್ಚಿನ ಪ್ರಮಾಣ ಏರಿಕೆ ಆಗುತ್ತಿದೆ. ರಾಜ್ಯಗಳು ಜನಪ್ರಿಯ ಯೋಜನೆಗಳ ಬೆನ್ನೇರಿ ಹೊರಟಿದ್ದು ಸಾಲ ಮತ್ತು ಖರ್ಚಿನ ವಿಚಾರ ಹಾಗೂ ಆರ್ಥಿಕತೆ ಸರಿದೂಗಿಸಲು ನಿದ್ರೆಯಲ್ಲೇ ನಡೆಯುತ್ತಿವೆ.

ರಾಜ್ಯ ಸರ್ಕಾರಗಳು ಸಾಲ ಮತ್ತು ಖರ್ಚು ಕಡಿಮೆ ಮಾಡಲು ದೊಡ್ಡ ಬದಲಾವಣೆಗೆ ತೆರೆದುಕೊಳ್ಳಬೇಕಿದೆ. ಈ ಸಂಬಂಧ ಅವು ದೊಡ್ಡ ಜವಾಬ್ದಾರಿಯನ್ನ ಹೊರಬೇಕಿದೆ. 2008ರಿಂದ ಜಾಗತಿಕ ಆರ್ಥಿಕ ಪರಿಸ್ಥಿತಿ ತೀರಾ ಹದಗೆಡುತ್ತಲೇ ಸಾಗಿದೆ. ಇದು ಕೈಗಾರಿಕೆಗಳ ಮೇಲೆ ಭಾರಿ ಪರಿಣಾಮವನ್ನೇ ಬೀರಿದೆ. ಬಳಕೆ ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಇತ್ತೀಚಿನ ಆರ್​ಬಿಐ ವರದಿ ರಾಜ್ಯಗಳ ಬ್ಯಾಲೆನ್ಸ್​ ಶೀಟ್​​ ಅಂಕಿ- ಅಂಶಗಳು ಕಳವಳವನ್ನುಂಟು ಮಾಡುತ್ತಿದೆ ಎಂಬುದನ್ನು ಬಹಿರಂಗ ಪಡಿಸಿದೆ.
ಹೊಣೆಗಾರಿಕೆಗಳು ನಿರಂತರವಾಗಿ ಕಡಿಮೆಯಾಗುತ್ತಲೇ ಇದೆ. 199ರಲ್ಲಿ ದೇಶದ ಆರ್ಥಿಕತೆ 1.28 ಲಕ್ಷ ಕೋಟಿ ರೂ. ಇದ್ದದ್ದು, ಆ ಪ್ರಮಾಣ ಈಗ 45,408 ರೂ. ಕೋಟಿಗೆ ಏರಿಕೆಯಾಗಿದೆ. 2014ರಲ್ಲಿ ದೇಶದ ಒಟ್ಟಾರೆ ಬಾಧ್ಯತೆ ಮೊತ್ತ (Liabilities) 24.71 ರೂ. ಲಕ್ಷ ಕೋಟಿ ಇದ್ದರೆ, 2019ರಲ್ಲಿ ಈ ಪ್ರಮಾಣ 45.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 1991ರಲ್ಲಿ 8,860 ಕೋಟಿ ರೂ. ಬಡ್ಡಿ ಕಟ್ಟುತ್ತಿದ್ದರೆ, ಅದೀಗ 24.71 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸಂಬಳ, ನಿವೃತ್ತಿ ವೇತನಕ್ಕೆ ಸರ್ಕಾರದ ಬೊಕ್ಕಸದಿಂದ ಬಹುತೇಕ ಖಾಲಿಯಾಗುತ್ತಿದೆ. ನಿವೃತ್ತಿ ವೇತನ ಹಾಗೂ ಇತರ ಹೊಣೆಗಾರಿಕೆಗಳು ನಿರಂತರವಾಗಿ ಹೆಚ್ಚುತ್ತಲೇ ಹೋಗ್ತಿವೆ. ಸಹಜವಾಗಿ ಆದಾಯದಲ್ಲಿ ಏರಿಕೆ ಆಗದಿದ್ದಾಗ ವಿತ್ತೀಯ ಕೊರತೆ ಹೆಚ್ಚಾಗುವುದು ಸಾಮಾನ್ಯ​. ಅಷ್ಟೇ ಅಲ್ಲ, ಹಲವು ಅನಗತ್ಯ ಜನಪ್ರಿಯ ಯೋಜನೆಗಳು ದೇಶದ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿವೆ. ಹಳೆಯ ಸಾಲದ ಮರು ಪಾವತಿ, ಬಡ್ಡಿ ಹೀಗೆ ಹಲವು ಕಾರಣಗಳಿಂದ ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ.

5 ಟ್ರಿಲಿಯನ್ ಡಾಲರ್​​​ ಆರ್ಥಿಕತೆ

ರೋಚಕವಾಗಿದೆ ಆಂಧ್ರ ಪ್ರಕರಣ:

1990ರಲ್ಲಿ ನಿವೃತ್ತಿ ವೇತನ ಬಾಧ್ಯತೆ 330 ಕೋಟಿ ರೂ. ಇದ್ದದ್ದು,13,600 ಕೋಟಿ ರೂ.ಗೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ 2013-14ರಲ್ಲಿ ಇಷ್ಟಿದ್ದ ಪ್ರಮಾಣ 2018-19ನೇ ಸಾಲಿನ ಬಜೆಟ್​ನಲ್ಲಿ ಇದು 15,200 ಕೋಟಿ ರೂ. ಏರಿಕೆಯಾಗಿದೆ. ಇನ್ನು ತೆಲಂಗಾಣದಲ್ಲಿ ಇದರ ಪ್ರಮಾಣ 11,700 ಕೋಟಿ ರೂ. ಅಂದರೆ ಎರಡೂ ರಾಜ್ಯಗಳ ಹಣ ಕ್ರೋಢೀಕರಣ ಮಾಡಿದರೆ ದ್ವಿಗುಣವಾಗುತ್ತದೆ.

ವಿಪರ್ಯಾಸ ಎಂದರೆ ಬಹಳಷ್ಟು ಸರ್ಕಾರಗಳು ವೋಟ್​ ಬ್ಯಾಂಕ್​ ಪಾಲಿಟಿಕ್ಸ್​ ಮಾಡುತ್ತಿದ್ದು, ಸಬ್ಸಿಡಿ, ವೇತನ ಹೆಚ್ಚಳ, ನಿವೃತ್ತಿ ವೇತನ, ಇತರ ಅನುದಾನಗಳ ಬೇಕಾಬಿಟ್ಟಿ ಹಂಚಿಕೆ, ನೌಕರರ ದಕ್ಷತೆ ಜೊತೆಗೆ ಆದಾಯ ಮೂಲಗಳನ್ನ ಹುಡುಕದೇ ಇರುವುದು. ಆರ್ಥಿಕತೆ ಚೇತರಿಕೆಗೆ ಕ್ರಮ ಕೈಗೊಳ್ಳದೇ ಇರುವುದು ಸಮಸ್ಯೆಗೆ ಕಾರಣ. ವೇತನ ಆಯೋಗಗಳ ರಚನೆ ಹಾಗೂ ಅವುಗಳನ್ನ ಕಾರ್ಯಗತಗೊಳಿಸುವ ಸರ್ಕಾರಗಳ ಬೇಜವಾಬ್ದಾರಿಯುತ ತೀರ್ಮಾನಗಳು ಆರ್ಥಿಕತೆಯ ಹಿನ್ನಡೆಗೆ ಬಹುಮುಖ್ಯ ಕಾರಣಗಳಲ್ಲೊಂದು.

ಬೇಕಿದೆ ಬದಲಾವಣೆ:
ರಾಜ್ಯಗಳ ಪ್ರಮುಖ ಸಮಸ್ಯೆ ಎಂದರೆ, ಸಾಮಾಜಿಕ ಯೋಜನೆಗಳನ್ನ ರೂಪಿಸುವಲ್ಲಿ ತೋರುವ ನಿಷ್ಕಾಳಜಿ. ವೋಟ್​ ಬ್ಯಾಂಕ್​ ರಾಜಕಾರಣಕ್ಕಾಗಿ ಮಾಡುವ ಗಿಮಿಕ್​ಗಳು ಆರ್ಥಿಕತೆಗೆ ಪೆಟ್ಟು ನೀಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಗಳು ಇಂತಹ ಜನಪ್ರಿಯ ಯೋಜನೆಗಳಿಗೆ ಕಡಿವಾಣ ಹಾಕಬೇಕಿದೆ. ಹೆಚ್ಚುತ್ತಿರುವ ಖರ್ಚುಗಳ ಮೇಲೆ ನಿಗಾ ಇಡಬೇಕಿದೆ. ತರ್ತು ಅಗತ್ಯ ಎಂದರೆ ಎಲ್ಲ ನೀತಿಗಳನ್ನ ಶುದ್ಧೀಕರಣ ಮಾಡಬೇಕಿದೆ. 1990-91 ರಲ್ಲಿ ಸಾಮಾಜಿಕ ರಂಗದಲ್ಲಿ 35,130 ಕೋಟಿ ಇದ್ದದ್ದು ಈಗ ಅದು 14.90 ಲಕ್ಷ ಕೋಟಿ ರೂ. ತಲುಪಿದೆ. ಕಳೆದ ಐದು ವರ್ಷಗಳಲ್ಲಂತೂ ಆ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ. 2014-15ರಲ್ಲಿ 8.30 ಲಕ್ಷ ಕೋಟಿ ಇದ್ದದ್ದು, 2018-19 ರಲ್ಲಿ ಅದು 14.90 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಪ್ರತಿ ವರ್ಷ 15 ಲಕ್ಷ ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಆದರೂ ಇನ್ನೂ ಬಡತನ ನಿರ್ಮೂಲನೆ ಆಗಿಲ್ಲ. ಸಾಮಾಜಿಕ ವೆಚ್ಚ ಖಂಡಿತ ಬೇಕೇ ಬೇಕು. ಜನಸಂಖ್ಯೆಗೆ ಅನುಗುಣವಾಗಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಆಗಬೇಕಿದೆ. ಆರ್ಥಿಕ ಅಭಿವೃದ್ಧಿಗೆ ಅನುದಾನಗಳು ಬೇಕೇಬೇಕು. ಆದರೆ, ಅನುತ್ಪಾದಕತೆ ಹೆಚ್ಚಿನ ಅನುದಾನ ನೀಡುವುದು ಆರ್ಥಿಕತೆ ಮೇಲೆ ತೀರಾ ದುಷ್ಪರಿಣಾಮ ಬೀರುವುದಂತೂ ಸತ್ಯ. ಹಾಗಂತ ಸಬ್ಸಿಡಿ ಕೆಟ್ಟದ್ದು ಅಂತಾ ಯಾರೂ ಹೇಳಲು ಸಾಧ್ಯವಿಲ್ಲ. ಇನ್ನು ರಾಜ್ಯಗಳು ಹೆಚ್ಚು ಸದೃಢ ಹಾಗೂ ಸ್ವಾವಲಂಬಿ ಮತ್ತು ಎಲ್ಲವನ್ನೂ ಮೀರಿ ಬೆಳೆಯುತ್ತವೆಯೋ ಆಗ ಮಾತ್ರ ಸಬ್ಸಿಡಿ ಇಲ್ಲವಾಗಿಸಬಹುದು.

ಬ್ಯಾಂಕ್​ಗಳ ಅವಲಂಬನೆ ಕಡಿಮೆ ಮಾಡಿ ಬಾಂಡ್​ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿದೆ. ಕೇಂದ್ರ ಅಷ್ಟೇ ಅಲ್ಲ ರಾಜ್ಯಗಳು ಮಾರುಕಟ್ಟೆ ಸಾಲಗಳಿಗೆ ಉತ್ತೇಜನ ನೀಡಬೇಕಿದೆ. ಈ ಮೂಲಕ ಆದರೆ ವಿಮಾ ಕಂಪನಿಗಳು, ಬ್ಯಾಂಕುಗಳು ಮತ್ತು ಇತರರು ನಿಯಂತ್ರಕ ಅನುಸರಣೆ ಸಮಸ್ಯೆಗಳು ಸೇರಿದಂತೆ ವಿವಿಧ ರೀತಿಯಲ್ಲಿ ರಾಜ್ಯಗಳಿಗೆ ಸಾಲ ನೀಡಲು ಸೂಕ್ಷ್ಮವಾಗಿ ಒತ್ತಾಯಿಸಲ್ಪಟ್ಟಿರುವುದರಿಂದ ಪ್ರಯೋಜನಗಳನ್ನು ನಿರಾಕರಿಸಲಾಗುತ್ತಿದೆ.

ವಿಳಂಬವಾಗುವ ಮುನ್ನ ಬದಲಾಯಿಸಿ:

ಮತ ಬ್ಯಾಂಕ್ ರಾಜಕೀಯ ಮತ್ತು ರಾಜಕೀಯ ಲಾಭವನ್ನು ಮೀರಿ ನೋಡುವ ಮೂಲಕ ಕೇಂದ್ರ ಸರ್ಕಾರವು ಎಚ್ಚರಿಕೆಯಿಂದ ಸಲಹೆ ನೀಡುವ ತುರ್ತು ಅವಶ್ಯಕತೆಯಿದೆ. ಹಣಕಾಸಿನ ವಿವೇಕವು ತಮ್ಮ ಸ್ವಂತ ಜನರ ದೀರ್ಘಕಾಲೀನ ಆರ್ಥಿಕ ಹಿತಾಸಕ್ತಿಯಲ್ಲಿ ಅಡಗಿದೆ ಎಂಬುದನ್ನು ಕೇಂದ್ರವು ರಾಜ್ಯಗಳಿಗೆ ಮನವರಿಕೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರವು ತುರ್ತು ಸುಧಾರಣೆಯನ್ನು ಆರಂಭಿಸದಿದ್ದಲ್ಲಿ, ಅನಿವಾರ್ಯವಾಗಿ ಮುಂದೂಡುವುದರಿಂದ ಹಣಕಾಸಿನ ತೊಂದರೆಗೊಳಗಾದ ರಾಜ್ಯಗಳು ಭವಿಷ್ಯದಲ್ಲಿ ಹೆಚ್ಚು ಕಠಿಣ ಮತ್ತು ಕಹಿ ಔಷಧಿ ತೆಗೆದುಕೊಳ್ಳಬೇಕಾಗಿರುವುದರಿಂದ ಇಂದೇ ಮಾಡಬೇಕಾಗಿರುವುದು ಹೆಚ್ಚು ಅಗತ್ಯವಾಗಿದೆ. ಸಂವಿಧಾನದ 360ನೇ ಪರಿಚ್ಛೇದವನ್ನು ಬಳಸಿಕೊಂಡು ಸಂವಿಧಾನದ ಅಡಿಯಲ್ಲಿ, ಸಮಸ್ಯೆಗಳಿದ್ದಲ್ಲಿ ಪರಿಹರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂಬುದನ್ನು ರಾಜ್ಯಗಳು ಅರ್ಥ ಮಾಡಿಕೊಳ್ಳಬೇಕು. ಆರ್ಟಿಕಲ್ 360 ಸ್ಪಷ್ಟವಾಗಿ ಹೇಳುತ್ತದೆ, “ಭಾರತದ ಆರ್ಥಿಕ ಸ್ಥಿರತೆ ಅಥವಾ ಸಾಲ ಅಥವಾ ಅದರ ಯಾವುದೇ ಪ್ರದೇಶದ ಬೆದರಿಕೆ ಇರುವಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ರಾಷ್ಟ್ರಪತಿಗಳು ತೃಪ್ತಿ ಹೊಂದಿದ್ದರೆ, ಅವರು ತಮ್ಮ ಘೋಷಣೆಯ ಮೂಲಕ ಪರಿಣಾಮ ಎದುರಿಸಲು ಆ ('ಆರ್ಥಿಕ ತುರ್ತು ಪರಿಸ್ಥಿತಿ') ಘೋಷಣೆ ಮಾಡಬಹುದು”. ಅದು ಅಂತಹ ಸಂಭವನೀಯತೆಗೆ ಕಾರಣವಾದರೆ, ಸಂಬಳ, ಪಿಂಚಣಿ ಮತ್ತು ಸಾಲಗಳೂ ಒಳಗೊಂಡಂತೆ ರಾಜ್ಯಗಳ ಎಲ್ಲ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಆಶಾದಾಯಕವಾದ ರಾಜ್ಯಗಳು ತಮ್ಮ ಜನರನ್ನು ಆ ಹಾದಿಯಲ್ಲಿ ತೆಗೆದುಕೊಂಡು ಹೋಗಲು ಬಯಸುವುದಿಲ್ಲ. ಹೀಗಾಗಿ, ಅಂತಹ ಕೆಟ್ಟಪರಿಸ್ಥಿತಿಗಿಂತ ಇಂದೇ ತಿದ್ದಿಕೊಳ್ಳುವುದು ಅತ್ಯಗತ್ಯವಾಗಿದೆ.

ABOUT THE AUTHOR

...view details