ಕರ್ನಾಟಕ

karnataka

ETV Bharat / business

ಚೀನಿ ಉತ್ಪನ್ನಗಳ ಮಾರಾಟಕ್ಕೆ ಅನುಮತಿಸುವಂತೆ ಶೇ 49ರಷ್ಟು ಭಾರತೀಯರು ಜೈಕಾರ- ಸಮೀಕ್ಷೆ - India China Trade

ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ, ಚೀನಾ ಕಂಪನಿಗಳಿಗೆ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಶೇ 49ರಷ್ಟು ಭಾರತೀಯರು ಹೇಳಿದ್ದಾರೆ. 35 ಪ್ರತಿಶತದಷ್ಟು ಜನರು ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದಿದ್ದಾರೆ.

India China
ಭಾರತ ಚೀನಾ

By

Published : Jul 9, 2020, 4:30 PM IST

ನವದೆಹಲಿ: ಚೀನಾ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಶೇ 49ರಷ್ಟು ಜನರು ಹೇಳಿದ್ದಾರಂತೆ.! ಈ ವಿಚಾರ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿದುಬಂದಿದೆ.

ಲೋಕಲ್ ಸರ್ಕಲ್ಸ್ ನಡೆಸಿದ ಸರ್ವೇಯಲ್ಲಿ ಶೇ 35 ರಷ್ಟು ಜನರು ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಹೇಳಿದ್ದರೆ, ಶೇ 14 ರಷ್ಟು ಜನರು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಮಾರಾಟ ಮಾಡಲು ಮಾತ್ರ ಅನುಮತಿಸಬೇಕು ಎಂದಿದ್ದಾರೆ.

ಚೀನಾ ಜೊತೆಗೆ ಯಾವುದೇ ಡೇಟಾ ಹಂಚಿಕೆ ಒಪ್ಪಂದ ನಡೆಯದಿದ್ದರೆ ಮಾತ್ರ ಅಂತಹ ಕಂಪನಿಗಳಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶ ನೀಡುವಂತೆ ಶೇ 25ರಷ್ಟು ಜನರು ಹೇಳಿದ್ದಾರೆ. ಚೀನಾದೊಂದಿಗೆ ಯಾವುದೇ ಡೇಟಾ ಹಂಚಿಕೆ ನಡೆಯದಿದ್ದರೆ ಆ ಕಂಪನಿಗಳ ಎಲ್ಲಾ ಉತ್ಪನ್ನಗಳ ಮಾರಾಟಕ್ಕೆ ಅನುಮತಿಸಬೇಕು ಎಂದು ಶೇ 20ರಷ್ಟು ಜನರು ಬಯಸಿದ್ದಾರೆ.

ಚೀನಾದೊಂದಿಗೆ ಯಾವುದೇ ಡೇಟಾ ಹಂಚಿಕೆ ನಡೆಯದಿದ್ದರೆ ಎಲ್ಲಾ ಉತ್ಪನ್ನಗಳ ಮಾರಾಟವನ್ನು ಅನುಮತಿಸಬೇಕು ಎಂದು ಶೇ 4ರಷ್ಟು ಜನರು ಹೇಳಿದರು.

ಚೀನಾದ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದರೆ ಭಾರತೀಯ ಗ್ರಾಹಕರ ವೈಯಕ್ತಿಕ ಮತ್ತು ಒಟ್ಟು ಮಾಹಿತಿಯು ಭಾರತದಲ್ಲಿ ಕೇಂದ್ರೀಕೃತವಾಗಿರಬೇಕು. ಕಂಪನಿಯ ಚೀನಾ ಪ್ರಧಾನ ಕಚೇರಿಗೆ ವಿದೇಶಕ್ಕೆ ಹೋಗಬಾರದು ಎಂದು ಶೇ 49ರಷ್ಟು ಜನರ ಅಭಿಮತವಾಗಿದೆ ಎಂದು ವರದಿ ಹೇಳಿದೆ.

ಚೀನಾದ ಹೂಡಿಕೆಯೊಂದಿಗೆ ಭಾರತೀಯ ಕಂಪನಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು 30 ಪ್ರತಿಶತದಷ್ಟು ಜನರು, ಚೀನಾದ ಮಾಲೀಕತ್ವವು ಶೇ 10ರಷ್ಟು ಹೆಚ್ಚಿದ್ದರೆ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 29 ಪ್ರತಿಶತದಷ್ಟು ಜನರು ಯಾವುದೇ ಚೀನಾದ ಮಾಲೀಕತ್ವವನ್ನು ಹೊಂದಿರುವ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

27 ಪ್ರತಿಶತದಷ್ಟು ಜನರು ಅಂತಹ ಕಂಪನಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಆದರೆ ಚೀನಾದ ನಿರ್ದೇಶಕರು ರಾಜೀನಾಮೆ ನೀಡಬೇಕು ಎಂದಿದ್ದರೆ ಕೇವಲ 11 ಪ್ರತಿಶತದಷ್ಟು ಜನರು ಅಂತಹ ಯಾವುದೇ ಕಂಪನಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details