ನವದೆಹಲಿ: ಈಗಿನ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು ಅರ್ಧದಷ್ಟು ಭಾರತೀಯರು ತಮ್ಮ ಮನೆಗಳನ್ನು ನಡೆಸಲು ಸಾಲ ಪಡೆದ ಹಣದ ಮೇಲೆ ಅವಲಂಬಿತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ ಮತ್ತು ವೇತನ ಕಡಿತದಿಂದಾಗಿ ಕಡಿಮೆ-ಮಧ್ಯಮ-ಆದಾಯದವರ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಸಾಂಕ್ರಾಮಿಕವು ರೋಗವು ಸಾಲ ಮತ್ತು ಸಾಲ ಆಧಾರಿತ ಆದ್ಯತೆಗಳ ಕಡೆಗೆ ಬಲವಾಗಿ ತಳ್ಳುತ್ತಿದೆ ಎಂದು ಹೋಮ್ ಕ್ರೆಡಿಟ್ ಇಂಡಿಯಾದ ವರದಿ ತಿಳಿಸಿದೆ. ಸಮೀಕ್ಷೆಯ ಆಧಾರದ ಮೇಲೆ ವರದಿಯಲ್ಲಿ, ಶೇ 46ರಷ್ಟು ಜನರು ತಮ್ಮ ಮನೆಗಳನ್ನು ನಡೆಸಲು ಮುಖ್ಯವಾಗಿ ಸಾಲ ಪಡೆದಿದ್ದಾರೆ ಎಂದು ತೋರಿಸಿದೆ.
ಕೊರೊನಾ ವೈರಸ್ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಜನರ ಸಾಲ ಪಡೆಯುವ ವಿಧಾನಗಳನ್ನು ಅರ್ಥೈಸಿಕೊಳ್ಳಲು ಏಳು ನಗರಗಳಲ್ಲಿ ಸುಮಾರು 1,000 ಸಂವಾದಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ವೇತನ ಕಡಿತ ಅಥವಾ ವಿಳಂಬ ಸಂಬಳ ಪರಿಣಾಮವಾಗಿ ಹೆಚ್ಚಿನ ಸಾಲಗಾರರು ಎರವಲನ್ನು ಆಶ್ರಯಿಸಿದ್ದಾರೆ. ಶೇ 27ರಷ್ಟು ಜನರು ತಮ್ಮ ಮಾಸಿಕ ಕಂತುಗಳನ್ನು ಹಿಂದಿನ ಸಾಲದಿಂದ ಮರುಪಾವತಿಸುವುದು ಕ್ರೆಡಿಟ್ ಹಿಂದಿನ ಎರಡನೇ ಅತಿದೊಡ್ಡ ಕಾರಣವೆಂದು ಉಲ್ಲೇಖಿಸಿದ್ದಾರೆ.
ಶೇ 14ರಷ್ಟು ಜನರು ಉದ್ಯೋಗ ನಷ್ಟ ಅನುಭವಿಸಿದ್ದರಿಂದ ಸಾಲ ಪಡೆದರು. ಸಾಮಾನ್ಯ ಸಮಯಕ್ಕಿ ಭಿನ್ನವಾಗಿ ಕೋವಿಡ್-19 ಸಾಂಕ್ರಾಮಿಕ ವೇಳೆ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಹಣ ಎರವಲು ಪಡೆಯಲು ಆದ್ಯತೆ ನೀಡುತ್ತಾರೆ. ಪರಿಸ್ಥಿತಿ ಸಾಮಾನ್ಯವಾದಾಗ ಮತ್ತು ಉದ್ಯೋಗಗಳು ಅಥವಾ ಸಂಬಳ ಪಡೆದಾಗ ಹಣವನ್ನು ಹಿಂದಿರುಗಿಸಲು ಸುಲಭವಾಗುತ್ತೆ.