ಕರ್ನಾಟಕ

karnataka

ETV Bharat / business

ನಿರುದ್ಯೋಗಿಗಳ ಬೀಡಾದ ಭಾರತ: ಕೊರೊನಾದಿಂದ 41 ಲಕ್ಷ ಯುವಕರ ನೌಕರಿಗೆ ಕತ್ತರಿ! - ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ

ಉದ್ಯೋಗ ಕಳೆದುಕೊಂಡ ಬಹುತೇಕರು ನಿರ್ಮಾಣ ಮತ್ತು ಕೃಷಿ ಕ್ಷೇತ್ರದ ಕಾರ್ಮಿಕರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಜಂಟಿಯಾಗಿ ತಯಾರಿಸಿದ ವರದಿ ಏಷ್ಯಾ ಮತ್ತು ಪೆಸಿಫಿಕ್​ನಲ್ಲಿ ಯುವ ಉದ್ಯೋಗಿಗಳ ಮೇಲೆ ಕೋವಿಡ್​-19 ಬಿಕ್ಕಟ್ಟಿನಿಂದ ತಿಳಿದುಬಂದಿದೆ.

Job
ನಿರುದ್ಯೋಗ

By

Published : Aug 18, 2020, 7:59 PM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕದಿಂದಾಗಿ ದೇಶದಲ್ಲಿ 41 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಉದ್ಯೋಗ ಕಳೆದುಕೊಂಡ ಬಹುತೇಕರು ನಿರ್ಮಾಣ ಮತ್ತು ಕೃಷಿ ಕ್ಷೇತ್ರದ ಕಾರ್ಮಿಕರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಜಂಟಿಯಾಗಿ ತಯಾರಿಸಿದ ವರದಿ ಏಷ್ಯಾ ಮತ್ತು ಫೆಸಿಫಿಕ್​ನಲ್ಲಿ ಯುವ ಉದ್ಯೋಗಿಗಳ ಮೇಲೆ ಕೋವಿಡ್​-19 ಬಿಕ್ಕಟ್ಟಿನಿಂದ ತಿಳಿದುಬಂದಿದೆ.

ಭಾರತಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ 4.1 ಮಿಲಿಯನ್ ಯುವಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಏಳು ಪ್ರಮುಖ ಕ್ಷೇತ್ರಗಳ ಪೈಕಿ ನಿರ್ಮಾಣ ಮತ್ತು ಕೃಷಿಯಲ್ಲಿ ವ್ಯಾಪಾಕ ನಷ್ಟವಾಗಿದೆ ಎಂದಿದೆ.

ಸಾಂಕ್ರಾಮಿಕ ರೋಗದಿಂದಾಗಿ ಏಷ್ಯಾ ಮತ್ತು ಪೆಸಿಫಿಕ್‌ ರಾಷ್ಟ್ರಗಳಲ್ಲಿ ಯುವಜನರ ಉದ್ಯೋಗಾವಕಾಶಗಳು ತೀವ್ರವಾಗಿ ಬಾಧಿತವಾಗಿದೆ ಎಂದು ಆರ್ಥಿಕ ಮತ್ತು ಸಾಮಾಜಿಕ ವೆಚ್ಚಗಳು ಎಂಬ ವರದಿ ಹೇಳಿದೆ.

'ಯುವಜನರ ಜಾಗತಿಕ ಸಮೀಕ್ಷೆ ಮತ್ತು ಕೋವಿಡ್​-19'ನ ಪ್ರಾದೇಶಿಕ ಮೌಲ್ಯಮಾಪನವನ್ನು ಆಧಾರ ಹಾಗೂ ವಿವಿಧ ದೇಶಗಳಲ್ಲಿ ಲಭ್ಯವಿರುವ ನಿರುದ್ಯೋಗ ದತ್ತಾಂಶಗಳ ಆಧಾರದ ಮೇಲೆ ಅಂದಾಜು ಮಾಡಲಾಗಿದೆ.

ಕೋವಿಡ್​-19 ಬಿಕ್ಕಟ್ಟಿನ ಮುಂಚೆಯೇ ಏಷ್ಯಾ ಮತ್ತು ಪೆಸಿಫಿಕ್ ರಾಷ್ಟ್ರಗಳ ಯುವಕರು ಕಾರ್ಮಿಕ ಮಾರುಕಟ್ಟೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರು. ಇದರ ಪರಿಣಾಮವಾಗಿ ಹೆಚ್ಚಿನ ನಿರುದ್ಯೋಗಿಗಳು ಮತ್ತು ಯುವಕರ ಶಾಲೆ ಮತ್ತು ಕೆಲಸ ಎರಡರಿಂದಲೂ ಹೊರಗೆ ಉಳಿದಿದ್ದಾರೆ. 2019ರಲ್ಲಿ ಪ್ರಾದೇಶಿಕ ಯುವ ನಿರುದ್ಯೋಗ ದರವು ಶೇ 13.8ರಷ್ಟಿತ್ತು, ವಯಸ್ಕರ ನಿರುದ್ಯೋಗ ಶೇ 3ರಷ್ಟಿತ್ತು. 160 ದಶಲಕ್ಷಕ್ಕೂ ಹೆಚ್ಚು ಯುವಕರು (ಜನಸಂಖ್ಯೆಯ ಶೇ 24) ಉದ್ಯೋಗ, ಶಿಕ್ಷಣ ಅಥವಾ ತರಬೇತಿಯಲ್ಲಿ ಭಾಗವಹಿಸಿರಲ್ಲಿಲ್ಲ ಎಂದು ಹೇಳಿದೆ.

ABOUT THE AUTHOR

...view details