ಕರ್ನಾಟಕ

karnataka

ETV Bharat / business

ಕೇಂದ್ರ ಬಜೆಟ್‌ 2022 : 39.45 ಲಕ್ಷ ಕೋಟಿ ರೂ. ಬಜೆಟ್‌ ಗಾತ್ರ - ಕೇಂದ್ರ ಬಜೆಟ್‌ 2022

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನ ಗಾತ್ರ 39.45 ಲಕ್ಷ ಕೋಟಿ ರೂಪಾಯಿ ಇದೆ. 2021-22ರಲ್ಲಿ 37.70 ಲಕ್ಷ ಕೋಟಿ ಬಜೆಟ್‌ ಗಾತ್ರ ಇತ್ತು..

39.45 lakh crore, while the total receipts other than borrowings are estimated
ಕೇಂದ್ರ ಬಜೆಟ್‌ 2022: 39.45 ಲಕ್ಷ ಕೋಟಿ ರೂ. ಬಜೆಟ್‌ ಗಾತ್ರ

By

Published : Feb 1, 2022, 2:32 PM IST

ನವದೆಹಲಿ :2022-23ರಲ್ಲಿ ಬಜೆಟ್‌ ಗಾತ್ರ ಅಂದಾಜು 39.45 ಲಕ್ಷ ಕೋಟಿ ರೂಪಾಯಿ ಆಗಿದೆ. ಸಾಲವನ್ನು ಹೊರತುಪಡಿಸಿ ಒಟ್ಟು ಆದಾಯ ಸಂಗ್ರಹ 22.84 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ವಿತ್ತೀಯ ಕೊರತೆಯು ಜಿಡಿಪಿಯ ಶೇ.6.9ರಷ್ಟಿದೆ ಎಂದು ಅಂದಾಜಿಸಲಾಗಿದೆ. ಬಜೆಟ್ ಅಂದಾಜುಗಳಲ್ಲಿ 6.8 ಶೇಕಡಾವನ್ನು ನಿರೀಕ್ಷಿಸಲಾಗಿದೆ.

2022-23ರಲ್ಲಿನ ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 6.4ಎಂದು ಅಂದಾಜಿಸಲಾಗಿದೆ. ಇದು 2025-26ರ ವೇಳೆಗೆ ವಿತ್ತೀಯ ಕೊರತೆಯ ಮಟ್ಟವನ್ನು ಶೇ. 4.5ಕ್ಕಿಂತ ಕಡಿಮೆ ಮಾಡಲು ಕಳೆದ ವರ್ಷ ಘೋಷಿಸಿದ ವಿತ್ತೀಯ ಬಲವರ್ಧನೆಯ ವಿಶಾಲ ಮಾರ್ಗಕ್ಕೆ ಅನುಗುಣವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಹಣಕಾಸಿನ ನಿರ್ವಹಣೆಯ 2021-22ರ ಬಜೆಟ್‌ನ ಗಾತ್ರ 34.83 ಲಕ್ಷ ಕೋಟಿ ಎಂದು ಅಂದಾಜಿಸಲಾಗಿತ್ತು. ಬಳಿಕ ಪರಿಷ್ಕೃತ ಒಟ್ಟು ಆಯವ್ಯಯದ ಗಾತ್ರ 37.70 ಲಕ್ಷ ಕೋಟಿಗೆ ತಲುಪಿತ್ತು. ಬಂಡವಾಳ ವೆಚ್ಚದ ಪರಿಷ್ಕೃತ ಅಂದಾಜು 6.03 ಲಕ್ಷ ಕೋಟಿ ಇತ್ತು. ಇದು ಏರ್ ಇಂಡಿಯಾದ ಬಾಕಿ ಉಳಿದಿರುವ ಖಾತರಿ ಹೊಣೆಗಾರಿಕೆಗಳು ಮತ್ತು ಅದರ ಇತರ ಬದ್ಧತೆಗಳ ಇತ್ಯರ್ಥಕ್ಕೆ 51,971 ಕೋಟಿ ರೂ. ಮೊತ್ತ ಇದರಲ್ಲಿ ಒಳಗೊಂಡಿದೆ.

ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ 2022-23ರಲ್ಲಿ ಬಂಡವಾಳ ವೆಚ್ಚದ ವೆಚ್ಚವನ್ನು ಶೇ.35.4ರಷ್ಟು ತೀವ್ರವಾಗಿ ಹೆಚ್ಚಿಸಲಾಗಿದೆ. ಬಂಡವಾಳ ವೆಚ್ಚವನ್ನು 2022-23ರಲ್ಲಿ 5.54 ಲಕ್ಷ ಕೋಟಿಯಿಂದ 7.50 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು 2019-20ರ ವೆಚ್ಚಕ್ಕಿಂತ 2.2 ಪಟ್ಟು ಹೆಚ್ಚಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details