ಕರ್ನಾಟಕ

karnataka

ETV Bharat / business

ಇಂಗ್ಲೆಂಡ್​ನಲ್ಲಿ ಐತಿಹಾಸಿಕ ಚೊಚ್ಚಲ ಬಜೆಟ್​ ಮಂಡಿಸಿದ ನಾರಾಯಣ ಮೂರ್ತಿ ಅಳಿಯ - ಇಂಗ್ಲೆಂಡ್ ಬಜೆಟ್

ಇದೇ ಮೊದಲ ಬಾರಿಗೆ ಭಾರತೀಯನೋರ್ವ ಇಂಗ್ಲೆಂಡ್​​ನ ಆರ್ಥಿಕ ಬಜೆಟ್​ ಮಂಡಿಸಿದ್ದಾರೆ. ಕೊರೊನಾ ವೈರಸ್ ದೇಶದ ಆರ್ಥಿಕತೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದರಿಂದ, ಇಂಗ್ಲೆಂಡ್​ನಲ್ಲಿನ ಭಾರತೀಯ ಮೂಲದ ರಿಷಿ ಸುನಕ್ ಅವರು 'ಬ್ರಿಟಿಷ್ ಜನರ, ಉದ್ಯೋಗಗಳ ಮತ್ತು ಇಂಗ್ಲಿಷರ ವ್ಯವಹಾರಗಳನ್ನು ಬೆಂಬಲಿಸಲು 30 ಬಿಲಿಯನ್ ಪೌಂಡ್ ಉತ್ತೇಜನದ ಪ್ಯಾಕೇಜ್​ ಘೋಷಿಸಿದ್ದಾರೆ'.

Rishi- Narayana Murthy
ರಿಷಿ- ನಾರಾಯಣ ಮೂರ್ತಿ

By

Published : Mar 11, 2020, 9:11 PM IST

ಲಂಡನ್: ಇಂಗ್ಲೆಂಡ್​ನ ಹಣಕಾಸು ಖಾತೆಯ ಜವಾಬ್ದಾರಿ ವಹಿಸಿಕೊಂಡ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ತಮ್ಮ ಚೊಚ್ಚಲ ಬಜೆಟ್​ ಮಂಡಿಸಿದ್ದಾರೆ.

ಕೊರೊನಾ ವೈರಸ್ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದರಿಂದ, ಇಂಗ್ಲೆಂಡ್​ನಲ್ಲಿನ ಭಾರತೀಯ ಮೂಲದ ರಿಷಿ ಸುನಕ್ ಅವರು, ಬ್ರಿಟಿಷ್ ಜನರ, ಉದ್ಯೋಗಗಳ ಮತ್ತು ಇಂಗ್ಲಿಷರ ವ್ಯವಹಾರಗಳನ್ನು ಬೆಂಬಲಿಸಲು 30 ಬಿಲಿಯನ್ ಪೌಂಡ್ ಉತ್ತೇಜನದ ಪ್ಯಾಕೇಜ್​ ಘೋಷಿಸಿದ್ದಾರೆ.

ಎಲ್ಲರ ಮನಸ್ಸಿನಲ್ಲಿರುವ ವಿಷಯಕ್ಕೆ ನಾನು ನೇರವಾಗಿ ಬರಲು ಬಯಸುತ್ತೇನೆ. ಅದು ಕೊರೊನಾ ವೈರಸ್ ಅಥವಾ ಕೋವಿಡ್ -19. ಜನರು ಎಷ್ಟು ಚಿಂತಿತರಾಗಿದ್ದಾರೆಂದು ನನಗೆ ತಿಳಿದಿದೆ. ಅವರ ಆರೋಗ್ಯ, ಅವರ ಪ್ರೀತಿಪಾತ್ರರ ಆರೋಗ್ಯ, ಅವರ ಉದ್ಯೋಗಗಳು, ಆದಾಯ, ವ್ಯವಹಾರಗಳು ಮತ್ತು ಆರ್ಥಿಕ ಭದ್ರತೆಯ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಸುನಕ್​ ತಿಳಿಸಿದರು.

ಜನರು ತಮ್ಮ ಟಿವಿಗಳನ್ನು ಆನ್ ಮಾಡಿದಾಗ ಮಾರುಕಟ್ಟೆಗಳ ಕುಸಿತ, ಆರ್ಥಿಕ ಹಿಂಜರಿತದ ಮಾತುಗಳನ್ನು ಕೇಳಿದಾಗ ಅವರು ಇನ್ನಷ್ಟು ಆತಂಕಕ್ಕೊಳಗಾಗುತ್ತಾರೆ ಎಂಬುದು ನನಗೆ ತಿಳಿದಿದೆ. ಜನರು ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿಯಲು ಬಯಸುತ್ತಾರೆ. ಅದನ್ನು ಸರಿಪಡಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಚಿಂತಿಸುತ್ತಿದ್ದಾರೆ ಎಂದರು.

ಕೊರೊನಾ ವೈರಸ್​ ನಿರೀಕ್ಷಿಸಿದಂತೆ ಇಂಗ್ಲೆಂಡ್​ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ಬಿಬಿಸಿ ವರದಿ ಮಾಡಿದೆ. 'ಇದೆಲ್ಲ ತಾತ್ಕಾಲಿಕ. ಜನರು ತಮ್ಮ ಕೆಲಸಗಳಿಗೆ ಮತ್ತೆ ಮರಳಲಿದ್ದಾರೆ. ಪೂರೈಕೆಯ ಸರಪಳಿ ಸಾಮಾನ್ಯ ಪರಿಸ್ಥಿತಿಗೆ ಮರಳಲಿದೆ' ಎಂದು ಸುನಕ್ ಭವಿಷ್ಯ ನುಡಿದಿದ್ದಾರೆ.

ಸ್ವಯಂ ಉದ್ಯೋಗ, ವ್ಯವಹಾರಗಳು ಮತ್ತು ದುರ್ಬಲ ಜನರನ್ನು ಬೆಂಬಲಿಸಲು 7 ಬಿಲಿಯನ್ ಪೌಂಡ್​ ಒದಗಿಸಲಾಗುವುದು. ರಾಷ್ಟ್ರೀಯ ಆರೋಗ್ಯ ಸೇವೆ ಮತ್ತು ಇತರ ಸಾರ್ವಜನಿಕ ಸೇವೆಗಳಿಗೆ 5 ಬಿಲಿಯನ್ ಪೌಂಡ್ ಅನ್ನು ತುರ್ತು ಪ್ರತಿಕ್ರಿಯೆ ನಿಧಿಯಡಿ ಮೀಸಲಿಡಲಾಗಿದೆ. ಈ ವರ್ಷದ ಆರ್ಥಿಕತೆಯನ್ನು ಬೆಂಬಲಿಸಲು ಹೆಚ್ಚುವರಿ 18 ಬಿಲಿಯನ್ ಪೌಂಡ್‌ಗಳಷ್ಟು ಹಣಕಾಸಿನ ಸಡಿಲಗೊಳಿಸುವಿಕೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ABOUT THE AUTHOR

...view details