ನವದೆಹಲಿ: ಭಾರತೀಯ ರೈಲ್ವೆಯು ಮೇ 1ರಿಂದ ಇಲ್ಲಿಯವರೆಗೂ 302 ಶ್ರಮಿಕ್ ವಿಶೇಷ ರೈಲು ಬಳಸಿಕೊಂಡು 3.4 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಅವರವರ ತವರಿಗೆ ಕಳುಹಿಸಿದೆ.
302 ಶ್ರಮಿಕ್ ರೈಲುಗಳಲ್ಲಿ 3.4 ಲಕ್ಷ ವಲಸೆ ಕಾರ್ಮಿಕರು ಅವರವರ ಊರಿಗೆ ವಾಪಸ್
ಲಾಕ್ಡೌನ್ನಲ್ಲಿ ಸಿಲುಕಿಕೊಂಡಿದ್ದ ಲಕ್ಷಾಂತರ ಜನರನ್ನು ಅವರ ಊರುಗಳಿಗೆ ಕಳುಹಿಸಲಾಗಿದೆ. ಶುಕ್ರವಾರ- 53 ಮತ್ತು ಗುರುವಾರ 61 ರೈಲುಗಳನ್ನು ನಗರದ ವಿವಿಧ ಭಾಗಗಳಿಂದ ಓಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತೀಯ ರೈಲ್ವೆ
ಲಾಕ್ಡೌನ್ನಲ್ಲಿ ಸಿಲುಕಿಕೊಂಡಿದ್ದ ಲಕ್ಷಾಂತರ ಜನರನ್ನು ಅವರ ಊರುಗಳಿಗೆ ಕಳುಹಿಸಲಾಗಿದೆ. ಶುಕ್ರವಾರ- 53 ಮತ್ತು ಗುರುವಾರ 61 ರೈಲುಗಳನ್ನು ನಗರದ ವಿವಿಧ ಭಾಗಗಳಿಂದ ಓಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿವಿಧ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಮೇ 1ರಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಲಾಕ್ಡೌನ್ ವೇಳೆ ದೇಶಾದ್ಯಂತ ಅಗತ್ಯ ವಸ್ತುಗಳ ಸರಬರಾಜಿಗೆ ಸರಕು ಮತ್ತು ವಿಶೇಷ ಪಾರ್ಸಲ್ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.