ಇಂದೋರ್:ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ 18 ಬ್ಯಾಂಕ್ಗಳು 2,480 ಪ್ರಕರಣಗಳಿಂದ ₹ 31,898 ವಂಚನೆಗೊಳಗಾಗಿವೆ.
18 ಬ್ಯಾಂಕ್ಗಳಿಗೆ 90 ದಿನದಲ್ಲಿ ₹ 31,898 ಕೋಟಿ ವಂಚನೆ... ಹೇಗೆ ಗೊತ್ತೆ?
ಮಧ್ಯಪ್ರದೇಶದ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಆರ್ಟಿಐ ಅಡಿ ಕೇಳಲಾದ ಅರ್ಜಿಯ ಪ್ರಶ್ನೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ ವಂಚನೆಯ ಮೊತ್ತದಲ್ಲಿ ಎಸ್ಬಿಐನ ಪಾಲು ಶೇ 38ರಷ್ಟಿದೆ.
ಮಧ್ಯಪ್ರದೇಶದ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಆರ್ಟಿಐ ಅಡಿ ಕೇಳಲಾದ ಪ್ರಶ್ನೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ ವಂಚನೆಯ ಮೊತ್ತದಲ್ಲಿ ಎಸ್ಬಿಐನ ಪಾಲು ಶೇ 38ರಷ್ಟಿದೆ.
ವಂಚನೆ ಸ್ವರೂಪ ಮತ್ತು ಬ್ಯಾಂಕ್ ಅಥವಾ ಗ್ರಾಹಕರಿಗೆ ಎಷ್ಟು ಪ್ರಮಾಣದಲ್ಲಿ ನಷ್ಟ ಆಗಿದೆ ಎನ್ನುವ ವಿವರಗಳನ್ನು ಆರ್ಬಿಐ ನೀಡಿಲ್ಲ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಷನ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯೂಕೋ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಂಧ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸಿಂಧ್ ಬ್ಯಾಂಕ್ಗಳು ವಂಚನೆಗೆ ಒಳಗಾದ ಪಟ್ಟಿಯಲ್ಲಿವೆ.