ನವದೆಹಲಿ:ಉದ್ಯೋಗಿಗಳ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಇತ್ತೀಚಿನ ವೇತನದಾರರ ದತ್ತಾಂಶ ಮಾಹಿತಿ ಪ್ರಕಾರ, ಜುಲೈ ಒಂದೇ ತಿಂಗಳಲ್ಲಿ ಸುಮಾರು 14.24 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಿದೆ.
ಆರ್ಥಿಕ ಹಿಂಜರಿತ ಇದ್ರೂ ಒಂದೇ ತಿಂಗಳಲ್ಲಿ 14 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯವಾ? ಹೀಗೊಂದು ಪ್ರಶ್ನೆ?
ಇದೇ ವರ್ಷದ ಹಿಂದಿನ ತಿಂಗಳಲ್ಲಿನ 12.49 ಲಕ್ಷಕ್ಕಿಂತ ಈ ಸಂಖ್ಯೆ ಅಧಿಕವಾಗಿದೆ. 2018-19ರ ಅವಧಿಯಲ್ಲಿ ಇಎಸ್‌ಐಸಿನ ಹೊಸ ಚಂದಾದಾರರು 1.49 ಕೋಟಿ ಆಗಿದ್ದಾರೆ ಎಂದು ರಾಷ್ಟ್ರೀಯ ಅಂಕಿ -ಅಂಶ ಕಚೇರಿ (ಎನ್‌ಎಸ್‌ಒ) ವರದಿಯಲ್ಲಿದೆ. 2017ರ ಸೆಪ್ಟೆಂಬರ್ ಮತ್ತು 2019ರ ಜುಲೈ ಅವಧಿಯಲ್ಲಿ ಸುಮಾರು 2.83 ಕೋಟಿ ಹೊಸ ಚಂದಾದಾರರು ಇಎಸ್‌ಐ ಯೋಜನೆಗೆ ಸೇರ್ಪಡೆ ಆಗಿದ್ದಾರೆ ಎಂದಿದೆ.
ಇದೇ ವರ್ಷದ ಹಿಂದಿನ ತಿಂಗಳಲ್ಲಿನ 12.49 ಲಕ್ಷ ಇದ್ದ ಈ ಸಂಖ್ಯೆಗಿಂತ ಅಧಿಕವಾಗಿದೆ. 2018-19ರ ಅವಧಿಯಲ್ಲಿ ಇಎಸ್‌ಐಸಿನ ಹೊಸ ಚಂದಾದಾರರ ಒಟ್ಟು ದಾಖಲಾತಿ 1.49 ಕೋಟಿ ಆಗಿದೆ ಎಂದು ರಾಷ್ಟ್ರೀಯ ಅಂಕಿ - ಅಂಶ ಕಚೇರಿ (ಎನ್‌ಎಸ್‌ಒ) ವರದಿಯಲ್ಲಿದೆ. 2017ರ ಸೆಪ್ಟೆಂಬರ್ ಮತ್ತು 2019ರ ಜುಲೈ ಅವಧಿಯಲ್ಲಿ ಸುಮಾರು 2.83 ಕೋಟಿ ಹೊಸ ಚಂದಾದಾರರು ಇಎಸ್‌ಐ ಯೋಜನೆಗೆ ಸೇರ್ಪಡೆ ಆಗಿದ್ದಾರೆ ಎಂದಿದೆ.
ಎನ್ಎಸ್ಒ ವರದಿಯು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ದತ್ತಾಂಶಗಳನ್ನು ಕಲೆಹಾಕಿ ತನ್ನ ವರದಿಯನ್ನು ಪ್ರಕಟಿಸಿದ್ದು, ಇಎಸ್ಐಸಿ, ನಿವೃತ್ತಿ ನಿಧಿ ಸಂಸ್ಥೆಯಾದ ಇಪಿಎಫ್ಒ ಮತ್ತು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆಆರ್ಡಿಎ) ವರದಿ ಆಧರಿಸಿ ಈ ಅಂಕಿ- ಅಂಶ ಪ್ರಕಟಿಸಲಾಗಿದೆ.