ಕರ್ನಾಟಕ

karnataka

ETV Bharat / business

ಚೀನಾ ಮೂಲದ ಟಿಕ್​ಟಾಕ್​ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿಲ್ಲ: ಝುಕರ್​ಬರ್ಗ್​ ಕಳವಳ - Business News

ಕಳೆದ ವರ್ಷ ಅಕ್ಟೋಬರ್ ಅಂತ್ಯದಲ್ಲಿ ಅಮೆರಿಕ ಅಧ್ಯಕ್ಷರು ಶ್ವೇತಭವನದಲ್ಲಿ ಫೇಸ್‌ಬುಕ್ ಸಿಇಒ ಅವರೊಂದಿಗೆ ಖಾಸಗಿ ಔತಣಕೂಟ ಆಯೋಜಿಸಿದಾಗ ಹೆಚ್ಚುತ್ತಿರುವ ಚೀನಾದ ಅಂತರ್ಜಾಲ ಕಂಪನಿಗಳ ವಿರುದ್ಧ ಮೊಕದ್ದಮೆ ಹೂಡಲು ಝುಕರ್‌ಬರ್ಗ್ ಅವಕಾಶ ಪಡೆದುಕೊಂಡಿದ್ದರು ಎಂದು ಡಬ್ಲ್ಯುಎಸ್‌ಜೆ ತನ್ನ ವರದಿಯಲ್ಲಿ ತಿಳಿಸಿದೆ.

Zuckerberg
ಝುಕರ್​ಬರ್ಗ್​

By

Published : Aug 24, 2020, 7:13 PM IST

ಸ್ಯಾನ್ ಫ್ರಾನ್ಸಿಸ್ಕೋ: ಡೊನಾಲ್ಡ್ ಟ್ರಂಪ್ ಆಡಳಿತವು ಕಿರು ವಿಡಿಯೋ ಶೇರಿಂಗ್​ ಪ್ಲಾಟ್​​ಫಾರ್ಮ್​ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು ಬಿಂಬಿಸಲು ಪ್ರಾರಂಭಿಸುವ ಕೆಲವೇ ತಿಂಗಳಲ್ಲಿ ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರು ಅಮೆರಿಕ ಕಾನೂನು ತಜ್ಞರರೊಂದಿಗೆ ಟಿಕ್‌ಟಾಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಚೀನಾದ ಯುನಿಕಾರ್ನ್ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿಲ್ಲ ಮತ್ತು ಅಮೆರಿಕದ ತಾಂತ್ರಿಕ ಪ್ರಾಬಲ್ಯಕ್ಕೆ ಅಪಾಯವಾಗಿ ಪ್ರತಿನಿಧಿಸುತ್ತದೆ ಎಂದು ಝುಕರ್​ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ಅಂತ್ಯದಲ್ಲಿ ಅಮೆರಿಕ ಅಧ್ಯಕ್ಷರು ಶ್ವೇತಭವನದಲ್ಲಿ ಫೇಸ್‌ಬುಕ್ ಸಿಇಒ ಅವರೊಂದಿಗೆ ಖಾಸಗಿ ಔತಣಕೂಟ ಆಯೋಜಿಸಿದಾಗ ಹೆಚ್ಚುತ್ತಿರುವ ಚೀನಾದ ಅಂತರ್ಜಾಲ ಕಂಪನಿಗಳ ವಿರುದ್ಧ ಮೊಕದ್ದಮೆ ಹೂಡಲು ಝುಕರ್‌ಬರ್ಗ್ ಅವಕಾಶ ಪಡೆದುಕೊಂಡಿದ್ದರು ಎಂದು ಡಬ್ಲ್ಯುಎಸ್‌ಜೆ ತನ್ನ ವರದಿಯಲ್ಲಿ ತಿಳಿಸಿದೆ.

ಫೇಸ್‌ಬುಕ್‌ನಲ್ಲಿ ಅವಲಂಬಿಸುವುದಕ್ಕಿಂತ ವಾಷಿಂಗ್ಟನ್ ಚೀನಾದ ಇಂಟರ್​ನೆಟ್​ ಕಂಪನಿಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಝುಕರ್‌ಬರ್ಗ್ ವಾದಿಸಿದ್ದರು.

ಹಲವಾರು ಸೆನೆಟರ್‌ಗಳೊಂದಿಗಿನ ಅವರ ಭೇಟಿಯಲ್ಲೂ ಇದೇ ರೀತಿಯ ವಾದಗಳನ್ನು ಮಂಡಿಸಿದ್ದರು. ಆ ಬಳಿಕ ಇತರ ಅಧಿಕಾರಿಗಳೊಂದಿಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಸರ್ಕಾರವು ಅಂತಿಮವಾಗಿ ಕಂಪನಿಯ ರಾಷ್ಟ್ರೀಯ ಭದ್ರತಾ ಸಂಬಂಧ ಪರಾಮರ್ಶೆ ಆರಂಭಿಸಿತು.

ಈ ತಿಂಗಳ ಆರಂಭದಲ್ಲಿ ಟ್ರಂಪ್ ಕಾರ್ಯನಿರ್ವಾಹಕ ಆದೇಶವನ್ನು ಹೊರಡಿಸಿದ್ದು, ಬೈಟ್‌ಡ್ಯಾನ್ಸ್‌ಗೆ ಅಮೆರಿಕದಲ್ಲಿ ತನ್ನ ಟಿಕ್‌ಟಾಕ್ ವ್ಯವಹಾರವನ್ನು 90 ದಿನಗಳಲ್ಲಿ ಬೇರೆಡೆಗೆ ತಿರುಗಿಸುವ ಆಯ್ಕೆಯನ್ನು ನೀಡಿದೆ.

ಫೇಸ್‌ಬುಕ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವೈಶಿಷ್ಟ್ಯ ಬಿಡುಗಡೆ ಮಾಡಿದ್ದು, ಇದು ಟಿಕ್‌ಟಾಕ್ ತರಹದ ಕ್ರಿಯಾತ್ಮಕತೆ ಒಳಗೊಂಡಿದೆ. ಈ ಮಧ್ಯೆ ಚೀನಾ ಮೂಲದ ಬೈಟ್ ಡ್ಯಾನ್ಸ್ ಅಮೆರಿಕದಲ್ಲಿ ಯಾವುದೇ ವ್ಯವಹಾರ ಮಾಡುವುದನ್ನು ನಿಷೇಧಿಸಲು ಟ್ರಂಪ್ ಸಹಿ ಹಾಕಿದ್ದಾರೆ. ಕಾರ್ಯನಿರ್ವಾಹಕ ಆದೇಶವನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಟಿಕ್​ಟಾಕ್ ಸಿದ್ಧವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ABOUT THE AUTHOR

...view details