ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹೊಡೆತ ಅನುಭವಿಸುತ್ತಿರುವ ಜೊಮ್ಯಾಟೊ ಆಹಾರ ವಿತರಣೆ ಸ್ಟಾರ್ಟ್ಅಪ್ ಶೇ 13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
ಜೊಮ್ಯಾಟೊದಿಂದ ಶೇ 13ರಷ್ಟು ನೌಕರರ ವಜಾ: ಶೇ 50ರಷ್ಟು ವೇತನ ಕಡಿತ - ವೇತನ ಕಡಿತ
600ಕ್ಕೂ ಹೆಚ್ಚು ಉದ್ಯೋಗಿಗಳು ಝೂಮ್ ಕರೆಗಳ ಮೂಲಕ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಉಳಿದ ಉದ್ಯೋಗಿಗಳು ಜೂನ್‌ನಿಂದ ಮುಂದಿನ ಆರು ತಿಂಗಳವರೆಗೆ ಶೇ 50ರಷ್ಟು ವೇತನ ಕಡಿತವಾಗಲಿದೆ ಎಂದು ಜೊಮ್ಯಾಟೊ ಹೇಳಿದೆ.
600ಕ್ಕೂ ಹೆಚ್ಚು ಉದ್ಯೋಗಿಗಳು ಝೂಮ್ ಕರೆಗಳ ಮೂಲಕ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಉಳಿದ ಉದ್ಯೋಗಿಗಳು ಜೂನ್‌ನಿಂದ ಮುಂದಿನ ಆರು ತಿಂಗಳವರೆಗೆ ಶೇ 50ರಷ್ಟು ವೇತನ ಕಡಿತವಾಗಲಿದೆ.
ಸಿಇಒ ದೀಪಿಂದರ್ ಗೋಯಲ್ ಮಾತನಾಡಿ, ಸಂಕಷ್ಟದ ಪರಿಸ್ಥಿತಿಯಿಂದ ಕಂಪನಿ ತನ್ನನ್ನು ತಾನು ಸುಧಾರಿಸಿಕೊಳ್ಳಲು ಸಿದ್ಧವಾಗಬೇಕಿದೆ. ಕಳೆದ ಎರಡು ತಿಂಗಳಲ್ಲಿ ನಮ್ಮ ವ್ಯವಹಾರದ ಅನೇಕ ಅಂಶಗಳು ಗಮನಾರ್ಹವಾಗಿ ಬದಲಾಗಿವೆ. ಇದರಲ್ಲಿ ಹಲವು ಬದಲಾವಣೆಗಳು ಶಾಶ್ವತವೆಂದು ನಿರೀಕ್ಷಿಸಲಾಗಿದೆ ಎಂದರು. ನಮ್ಮಲ್ಲಿನ ಶೇ 13ರಷ್ಟು ಉದ್ಯೋಗಿಗಳಿಗೆ ಅದನ್ನು ನೀಡಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.