ನವದೆಹಲಿ: ರಿಲಯನ್ಸ್-ಫ್ಯೂಚರ್ ಒಪ್ಪಂದ ತಡೆಯಲು 'ನಾರದ' ಮುನಿಯಂತೆ ಆಟವಾಡಲು ನಿರ್ಧರಿಸಿದ್ದೀರಿ ಎಂದು ಭಾರತದ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟ ಅಮೆಜಾನ್‌ನ ಅಧ್ಯಕ್ಷ ಮತ್ತು ಸಿಇಒ ಜೆಫ್ ಬೆಜೋಸ್‌ಗೆ ಪತ್ರ ಬರೆದಿದೆ.
ಅಮೆಜಾನ್‌ನ ಅನಗತ್ಯ ಸಾಹಸದಿಂದಾಗಿ ಫ್ಯೂಚರ್ ಗ್ರೂಪ್‌ನ ನೂರಾರು ನೌಕರರು ಹಾಗೂ ಅವರ ಕುಟುಂಬ ಸದಸ್ಯರು ಬಳಲುತ್ತಿದ್ದಾರೆ ಎಂದು ಅಸೋಸಿಯೇಷನ್ ಪತ್ರವೊಂದರಲ್ಲಿ ತಿಳಿಸಿದೆ.
ಕಳೆದ ವರ್ಷದ ಮಾರ್ಚ್‌ನಲ್ಲಿನ ಕಿಶೋರ್ ಬಿಯಾನಿಯ ಫ್ಯೂಚರ್ ಗ್ರೂಪ್‌ನ ಸುಮಾರು 6,000 ಸದಸ್ಯರ 6,000 ಕೋಟಿ ರೂ. ಒಪ್ಪಂದ ಅಂತಿಮ ಇತ್ಯರ್ಥ ಕಾಣದೆ ಬಾಕಿ ಉಳಿದಿದೆ. ಆಗಸ್ಟ್‌ನಲ್ಲಿ ನಡೆದ ರಿಲಯನ್ಸ್-ಫ್ಯೂಚರ್ ಒಪ್ಪಂದವು ಶೀಘ್ರದಲ್ಲೇ ತೆರವಾಗಲಿದೆ ಎಂದು ಕಂಪನಿ ಭರವಸೆ ನೀಡಿತ್ತು.