ಕರ್ನಾಟಕ

karnataka

ETV Bharat / business

ಬಿಕ್ಕಟ್ಟಿನ ಮಧ್ಯೆ ಗ್ರಾಹಕರಿಗೆ ಬಿಗ್​ ರಿಲೀಫ್‌ ಕೊಟ್ಟ ಯೆಸ್​ ಬ್ಯಾಂಕ್ - ಯೆಸ್​ ಬ್ಯಾಂಕ್ ಆರ್​ಟಿಜಿಎಸ್​ ಪಾವತಿ

ಬ್ಯಾಂಕ್‌ನ ಆಂತರಿಕ ಆರ್‌ಟಿಜಿಎಸ್ ಸೇವೆಗಳನ್ನು ಸಕ್ರಿಯಗೊಳಿಸಲಾಗಿದೆ. ಯೆಸ್​ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಇತರ ಬ್ಯಾಂಕ್ ಖಾತೆಗಳಿಂದ ಸಾಲದ ಬಾಧ್ಯತೆಗಳನ್ನು ಪಾವತಿಸಬಹುದು ಎಂದು ಯೆಸ್​ ಬ್ಯಾಂಕ್ ಟ್ವಿಟ್ಟರ್​ ಮೂಲಕ ತಿಳಿಸಿದೆ.

Yes Bank
ಯೆಸ್​ ಬ್ಯಾಂಕ್

By

Published : Mar 11, 2020, 8:38 PM IST

ನವದೆಹಲಿ: ಯೆಸ್​ ಬ್ಯಾಂಕ್​ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಇತರ ಬ್ಯಾಂಕ್ ಖಾತೆಗಳಿಂದ ಸಾಲದ ಬಾಧ್ಯತೆಗಳನ್ನು ಪಾವತಿಸಲು ಅವಕಾಶ ನೀಡಲಾಗಿದೆ. ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್​ನ (ಆರ್‌ಟಿಜಿಎಸ್‌) ಆಂತರಿಕೆ ಸೇವೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ತನ್ನ ಗ್ರಾಹಕರಿಗೆ ಆಂತರಿಕ ಐಎಂಪಿಎಸ್ ಮತ್ತು ನೆಫ್ಟ್​ (ಎನ್‌ಇಎಫ್‌ಟಿ) ಸೇವೆಗೆ ಅನುಮತಿಸಿದ ಒಂದು ದಿನದ ಬಳಿಕ ಯೆಸ್​ ಬ್ಯಾಂಕ್ ಮತ್ತೊಂದು ವಹಿವಾಟಿನ ವಿನಾಯಿತಿ ತೆರವುಗೊಳಿಸಿದೆ.

ಆರ್​ಟಿಜಿಎಸ್​ ಅನ್ನು 2 ಲಕ್ಷ ರೂ.ಗಿಂತ ಹೆಚ್ಚಿನ ಪಾವತಿಗಳಿಗೆ ಬಳಸಲಾಗುತ್ತದೆ. ಆದರೆ, ಈ ಮೊತ್ತಕ್ಕಿಂತ ಕಡಿಮೆ ಪಾವತಿಗಳನ್ನು ನೆಫ್ಟ್ ಮುಖೇನ ಬಳಸಬಹುದು. ಇದಲ್ಲದೆ ಬ್ಯಾಂಕ್​ಗೆ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮರುಪಾವತಿಯನ್ನು ಇತರ ಬ್ಯಾಂಕ್ ಖಾತೆಗಳಿಂದ ಐಎಂಪಿಎಸ್ ಮೂಲಕ ಮಾಡಬಹುದು ಎಂದು ಹೇಳಿದೆ.

ಆಂತರಿಕ ಆರ್‌ಟಿಜಿಎಸ್ ಸೇವೆಗಳನ್ನು ಸಕ್ರಿಯಗೊಳಿಸಲಾಗಿದೆ. ಯೆಸ್​ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಇತರ ಬ್ಯಾಂಕ್ ಖಾತೆಗಳಿಂದ ಸಾಲದ ಬಾಧ್ಯತೆಗಳನ್ನು ಪಾವತಿಸಬಹುದು ಎಂದು ಬ್ಯಾಂಕ್ ಟ್ವಿಟ್ಟರ್​ ಮೂಲಕ ತಿಳಿಸಿದೆ.

ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ 'ನಿರ್ಬಂಧಿತ ವಹಿವಾಟಿಗೆ ಸಂಬಂಧಿತ 'ಎಫ್​ಎಕ್ಯೂ'ನಲ್ಲಿ ಆನ್‌ಲೈನ್ ರವಾನೆ, ಚೆಕ್‌ಗಳು ಮತ್ತು ಡಿಮಾಂಡ್​ ಡ್ರಾಫ್ಟ್ಸ್​ ವಿಲೇವಾರಿ ಮತ್ತು ಇಎಂಐಗಳ ಬಾಹ್ಯ ಪಾವತಿಯಂತಹ ಇತರೆ ಸೇವೆಗಳು ನಿಷೇಧದ ಅವಧಿಯಲ್ಲಿ ಮುಂದುವರಿಯುತ್ತದೆ ಎಂದು ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕ್ ಹೇಳಿದೆ.

ಉದ್ಯೋಗದಾತರು ಯೆಸ್ ಬ್ಯಾಂಕ್​ನಲ್ಲಿ ಚಾಲ್ತಿ ಖಾತೆಯನ್ನು ಹೊಂದಿದ್ದರೆ ಮತ್ತು ಉದ್ಯೋಗಿಗಳಿಗೆ ಸಂಬಳ ನೀಡಲು ಬಯಸಿದರೆ ಅಂತಹ ವಹಿವಾಟಿಗೆ ಯಾವುದೇ ತೊಂದರೆ ಇರುವುದಿಲ್ಲ. ಆರ್‌ಟಿಜಿಎಸ್ ಮತ್ತು ನೆಫ್ಟ್ ಸೇರಿದಂತೆ ಹೊರಗಿನ ಆನ್‌ಲೈನ್ ರವಾನೆಗಳನ್ನು ಇನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ABOUT THE AUTHOR

...view details