ಕರ್ನಾಟಕ

karnataka

ETV Bharat / business

ಮ್ಯೂಚುವಲ್​ ಫಂಡ್​​ ವ್ಯವಹಾರದಿಂದ ಹೊರ ನಡೆದ ಯೆಸ್ ಬ್ಯಾಂಕ್ - ಜಿಪಿಎಲ್​​ ಫೈನಾನ್ಸ್​

ಆಗಸ್ಟ್ 21ರಂದು ಬ್ಯಾಂಕ್​ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಾದ ಯೆಸ್ ಅಸೆಟ್ ಮ್ಯಾನೇಜ್‌ಮೆಂಟ್ ಮತ್ತು ಯೆಸ್ ಟ್ರಸ್ಟೀ ಲಿಮಿಟೆಡ್‌ನ 100 ಪ್ರತಿಶತದಷ್ಟು ಷೇರುಗಳನ್ನು ಜಿಪಿಎಲ್ ಫೈನಾನ್ಸ್‌ಗೆ ಮಾರಾಟ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಯೆಸ್​ ಬ್ಯಾಂಕ್​ ವಿನಿಮಯ ನೋಟ್​​ನಲ್ಲಿ ತಿಳಿಸಿದೆ.

Yes Bank
ಯೆಸ್​ ಬ್ಯಾಂಕ್

By

Published : Aug 21, 2020, 10:35 PM IST

ನವದೆಹಲಿ: ಯೆಸ್​ ಬ್ಯಾಂಕ್​, ಪ್ರಶಾಂತ್ ಖೇಮ್ಕಾ ಒಡೆತನದ ಜಿಪಿಎಲ್ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್‌ಗೆ ಬಹಿರಂಗಪಡಿಸದ ಮೊತ್ತಕ್ಕೆ ಎರಡು ಅಂಗಸಂಸ್ಥೆಗಳಲ್ಲಿನ ಪಾಲು ಮಾರಾಟ ಮಾಡಲಿದೆ ಎಂದು ಖಾಸಗಿ ವಲಯದ ಸಾಲಗಾರ ತಿಳಿಸಿದೆ.

ಈ ಮೂಲಕ ಮ್ಯೂಚುವಲ್​ ಫಂಡ್​ ವ್ಯವಹಾರದಿಂದ ಹಿಂದೆ ಸರಿಯುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದೆ.

ಆಗಸ್ಟ್ 21ರಂದು ಬ್ಯಾಂಕ್​ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಾದ ಯೆಸ್ ಅಸೆಟ್ ಮ್ಯಾನೇಜ್‌ಮೆಂಟ್ ಮತ್ತು ಯೆಸ್ ಟ್ರಸ್ಟೀ ಲಿಮಿಟೆಡ್‌ನ 100 ಪ್ರತಿಶತದಷ್ಟು ಷೇರುಗಳನ್ನು ಜಿಪಿಎಲ್ ಫೈನಾನ್ಸ್‌ಗೆ ಮಾರಾಟ ಒಪ್ಪಂದ ಜಾರಿಗೊಳಿಸಿದೆ ಎಂದು ಯೆಸ್​ ಬ್ಯಾಂಕ್​ ವಿನಿಮಯ ನೋಟ್​​ನಲ್ಲಿ ತಿಳಿಸಿದೆ.

ವೈಟ್ ಓಕ್ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಖರೀದಿದಾರರಲ್ಲಿ 99 ಪ್ರತಿಶತ ಪಾಲಿ ಹೊಂದಿದೆ. ಈ ವ್ಯವಹಾರವು ನಿಯಂತ್ರಕ ಪ್ರಾಧಿಕಾರಗಳಿಂದ ಅಗತ್ಯವಾದ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಅದು ಹೇಳಿದೆ.

ವಹಿವಾಟು ಪೂರ್ಣಗೊಂಡ ನಂತರ ಯೆಸ್‌ ಆಸ್ತಿ ನಿರ್ವಹಣಾ ಕಂಪನಿಯು (ಯೆಸ್‌ಎಎಂಸಿ) ಯೆಸ್ ಬ್ಯಾಂಕ್‌ನ ಅಂಗಸಂಸ್ಥೆಯಾಗಿ ಉಳಿಯುವುದಿಲ್ಲ. ಮ್ಯೂಚುವಲ್‌ ಫಂಡ್‌ ವಹಿವಾಟುಗಳಿಂದ ಬ್ಯಾಂಕ್‌ ಹೊರನಡೆಯಲಿದೆ.

ABOUT THE AUTHOR

...view details