ನವದೆಹಲಿ: ಕಳೆದ ವರ್ಷ ಮಾರ್ಚ್-ಸೆಪ್ಟೆಂಬರ್ ಅವಧಿಯಲ್ಲಿ ಯೆಸ್ ಬ್ಯಾಂಕಿನ ಠೇವಣಿ ಸ್ಥಿರತೆಯಲ್ಲಿ ಕುಸಿತ ಕಂಡಿದ್ದು, ಗ್ರಾಹಕರು ಬ್ಯಾಂಕಿನ ಮೇಲಿನ ವಿಶ್ವಾಸ ಕಳೆದುಕೊಂಡಿದ್ದ ಪ್ರತಿಬಿಂಬವಾಗಿ 18,100 ಕೋಟಿ ರೂ.ಯಷ್ಟು ವಾಪಸ್ ತೆಗೆದುಕೊಂಡಿದ್ದಾರೆ.
ಯೆಸ್ ಬ್ಯಾಂಕ್ ಮೇಲೆ ಏಪ್ರಿಲ್ 3ರವರೆಗೆ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದೆ. ಈ ಸಮಯದಲ್ಲಿ ಗ್ರಾಹಕರು 50,000 ರೂ.ಗಿಂತ ಹೆಚ್ಚಿನದನ್ನು ಹಿಂಪಡೆಯುವಂತಿಲ್ಲ. 2019ರ ಮಾರ್ಚ್ ಕೊನೆಯಲ್ಲಿ 2,27,610 ಕೋಟಿ ರೂ. ಠೇವಣಿ ಇರಿಸಲಾಗಿದೆ (2018-19ನೇ ಹಣಕಾಸು ವರ್ಷ).