ಕರ್ನಾಟಕ

karnataka

ETV Bharat / business

ಯೆಸ್​ ಬ್ಯಾಂಕ್ ಹಗರಣ: ಸಂಸ್ಥಾಪಕ ರಾಣಾ​ ಬೆನ್ನತ್ತಿದ CBI... ಏಳು ಕಡೆ ಕರೆದೊಯ್ದು ತೀವ್ರ ವಿಚಾರಣೆ - ಯೆಸ್ ಬ್ಯಾಂಕ್

ಸಿಬಿಐ ಎಫ್ಐಆರ್ ಪ್ರಕಾರ ಹಗರಣವು 2018 ಏಪ್ರಿಲ್ ಮತ್ತು ಜೂನ್ ನಡುವೆ ಶುರುವಾಯಿತು. ಹಗರಣ ಪೀಡಿತ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಹೆಚ್ಎಫ್ಎಲ್) ಅಲ್ಪಾವಧಿಯ ಡಿಬೆಂಚರ್​ಗಳಲ್ಲಿ ಯೆಸ್ ಬ್ಯಾಂಕ್ 3,700 ಕೋಟಿ ರೂ. ಹೂಡಿಕೆ ಮಾಡಿದೆ.

Yes Bank
ಯೆಸ್ ಬ್ಯಾಂಕ್

By

Published : Mar 9, 2020, 10:46 PM IST

ನವದೆಹಲಿ: ಡಿಹೆಚ್‌ಎಫ್‌ಎಲ್ ತನ್ನ ಸಹ ಸಂಸ್ಥಾಪಕ ರಾಣಾ ಕಪೂರ್ ಅವರ ಕುಟುಂಬಕ್ಕೆ 600 ಕೋಟಿ ರೂ. ಲಂಚ ನೀಡಿದ ಸಂಬಂಧ ಕೇಂದ್ರೀಯ ತನಿಖಾ ತಂಡ (ಸಿಬಿಐ) ಸೋಮವಾರ ಏಳು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಆರೋಪಿಗಳ ನಿವಾಸ ಮತ್ತು ಅಧಿಕೃತ ಆವರಣದಲ್ಲಿ ಸಿಬಿಐ ಅಧಿಕಾರಿಗಳ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

62 ವರ್ಷದ ಕಪೂರ್, ಡಿಹೆಚ್‌ಎಫ್‌ಎಲ್ ಪ್ರವರ್ತಕ ಕಪಿಲ್ ವಾಧವನ್ ಅವರೊಂದಿಗೆ ಯೆಸ್ ಬ್ಯಾಂಕ್ ಮೂಲಕ ಡಿಎಚ್‌ಎಫ್‌ಎಲ್‌ಗೆ ಹಣಕಾಸಿನ ನೆರವು ನೀಡಿದ್ದಕ್ಕಾಗಿ ಕ್ರಿಮಿನಲ್ ಪಿತೂರಿ ನಡೆಸಿದ್ದಾನೆ ಎಂದು ಸಂಸ್ಥೆ ಆರೋಪಿಸಿದೆ.

ಸಿಬಿಐ ಎಫ್ಐಆರ್ ಪ್ರಕಾರ, ಹಗರಣವು 2018 ಏಪ್ರಿಲ್ ಮತ್ತು ಜೂನ್ ನಡುವೆ ಶುರುವಾಯಿತು. ಹಗರಣ ಪೀಡಿತ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಹೆಚ್ಎಫ್ಎಲ್) ಅಲ್ಪಾವಧಿಯ ಡಿಬೆಂಚರ್​ಗಳಲ್ಲಿ ಯೆಸ್ ಬ್ಯಾಂಕ್ 3,700 ಕೋಟಿ ರೂ. ಹೂಡಿಕೆ ಮಾಡಿದೆ.

ಇದಕ್ಕೆ ಪ್ರತಿಯಾಗಿ ವಾಧವನ್ ಅವರು ಕಪೂರ್ ಮತ್ತು ಕುಟುಂಬ ಸದಸ್ಯರಿಗೆ ಡಿಐಟಿ ಅರ್ಬನ್ ವೆಂಚರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್​ಗೆ ಸಾಲ ರೂಪದಲ್ಲಿ 600 ಕೋಟಿ ರೂ. ನೀಡಲಾಗಿದೆ ಎಂಬ ಆರೋಪ ಇದೆ.

ABOUT THE AUTHOR

...view details