ಕರ್ನಾಟಕ

karnataka

By

Published : Mar 7, 2020, 6:50 PM IST

ETV Bharat / business

ಬರಡು ATMಗಳ ಮುಂದೆ ಗ್ರಾಹಕರ ಕ್ಯೂ: ಯೆಸ್​ ಬ್ಯಾಂಕ್​ ಅಕೌಂಟಲ್ಲಿ ಹಣ ಇದ್ರೂ ಗ್ರಾಹಕರ​ ಜೇಬು ಖಾಲಿ

ನೆಟ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸದ ಕಾರಣ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಕ್ರೆಡಿಟ್ ಕಾರ್ಡ್‌ಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ. ಆದರೆ, ಖಾಲಿ ಎಟಿಎಂಗಳ ಮುಂದೆ ನಿಂತ ಗ್ರಾಹಕರು ಮತ್ತೆ ಹಣ ತುಂಬುತ್ತಾರೆ ಎಂಬ ಆಕಾಂಕ್ಷೆಯಿಂದ ಸರದಿ ಸಾಲಿನಲ್ಲಿ ನಿಂತು ವಿತ್​ಡ್ರಾಗಾಗಿ ಪರದಾಟ ನಡೆಸುತ್ತಿದ್ದರು.

Yes Bank
ಯೆಸ್​ ಬ್ಯಾಂಕ್ ಎಟಿಎಂ

ನವದೆಹಲಿ: ತೀವ್ರ ಹಣಕಾಸಿನ ಹೊಡೆತದಿಂದ ಕಂಗೆಟ್ಟಿರುವ ಯೆಸ್​ ಬ್ಯಾಂಕ್​, ಠೇವಣಿ ಇರಿಸಿದ್ದ ಹಣವನ್ನು ವಾಪಸ್​ ಪಡೆಯಲು ಖಾಲಿ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ಜನರು ನಿಂತಿರುವ ದೃಶ್ಯಗಳು ದೇಶದ ನಾನಾ ಭಾಗದಲ್ಲಿ ಕಂಡುಬಂದಿದೆ.

ಬ್ಯಾಂಕ್​ ಹಣಕಾಸು ಬಿಕ್ಕಟ್ಟಿನ ನೈಜ ಸ್ಥಿತಿ ಹೊರಬೀಳುತ್ತಿದ್ದಂತೆ ಆರ್​ಬಿಐ ಹಾಗೂ ಕೇಂದ್ರ ಸರ್ಕಾರ ವಹಿವಾಟಿನ ಮೇಲೆ ನಿರ್ಬಂಧ ಹೇರಿತ್ತು. ಅನೇಕ ಗ್ರಾಹಕರು ಯೆಸ್ ಬ್ಯಾಂಕ್ ಶಾಖೆಗಳಲ್ಲಿ ಚೆಕ್ ಮೂಲಕ ನಿಗದಿತ 50,000 ರೂ. ಹಿಂಪಡೆದರು.

ಇದೇ ವೇಳೆ ಆರ್​ಬಿಐ ಎಸ್‌ಬಿಐನ ಮಾಜಿ ಕಾರ್ಯನಿರ್ವಾಹಕರನ್ನು ಯೆಸ್​ ಬ್ಯಾಂಕ್​ಗೆ ಮುಖ್ಯಸ್ಥರನ್ನಾಗಿ ನೇಮಿಸಿದೆ. ತಿಂಗಳ ಒಳಗೆ ಬ್ಯಾಂಕಿನ್​ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಅನೇಕ ಗ್ರಾಹಕರು ಚೆಕ್​ ಮೂಲಕ ನಿಗದಿತ 50,000 ರೂ. ಡ್ರಾ ಮಾಡಿಕೊಂಡಿದ್ದಾರೆ. ಯಾವುದೇ ನಗದು ವಿತರಣೆ ಸಮಸ್ಯೆ ಕಂಡುಬಂದಿಲ್ಲ ಎಂದು ದೆಹಲಿ ಸೆಂಟ್ರಲ್​ ಬ್ಯಾಂಕ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಇಂಟರ್​ನೆಟ್ ಬ್ಯಾಂಕಿಂಗ್ ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಕ್ರೆಡಿಟ್ ಕಾರ್ಡ್​ ಸಹ ಸ್ಥಗಿತಗೊಂಡಿದೆ. ಹೇಗೋ ಮಾಡಿ ₹ 50,000 ಅನ್ನು ವಿತ್ ಡ್ರಾ ಮಾಡಿಕೊಂಡೆ ಎಂದು ಬ್ಯಾಂಕ್ ಗ್ರಾಹಕ ಲಲಿತ್ ಕುಮಾರ್ ಹೇಳಿದ್ದಾರೆ.

ಘಾಜಿಯಾಬಾದ್​ ಎಟಿಎಂ ಮುಂಭಾಗದಲ್ಲಿ ಬ್ಯಾಂಕ್ ಗ್ರಾಹಕರು ಹಣ ವಿತ್ ಡ್ರಾ ಮಾಡಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಆ ಎಟಿಎಂ ಖಾಲಿ ಆಗಿತ್ತು. ಗ್ರಾಹಕರು ಹಣ ಡ್ರಾ ಮಾಡಿಕೊಳ್ಳುತ್ತಿದ್ದರಿಂದ ಬಹುತೇಕ ಎಟಿಎಂಗಳು ಖಾಲಿ-ಖಾಲಿ ಆಗಿದ್ದವು.

ABOUT THE AUTHOR

...view details