ಕರ್ನಾಟಕ

karnataka

ETV Bharat / business

ಯೆಸ್ ಬ್ಯಾಂಕ್ ಹಗರಣ: ಅನಿಲ್​ ಅಂಬಾನಿ 9 ಗಂಟೆ ಮ್ಯಾರಥಾನ್ ವಿಚಾರಣೆ... ಮಾ.30ಕ್ಕೆ ಮತ್ತೆ ಬುಲಾವ್

ಅನಿಲ್ ಅಂಬಾನಿ ಅವರನ್ನು ಇಡಿ ಅಧಿಕಾರಿಗಳು ಸುಮಾರು ಒಂಬತ್ತು 9 ಗಂಟೆಗಳ ಕಾಲ ಮ್ಯಾರಥಾನ್ ವಿಚಾರಣೆ ನಡೆಸಿದರು. ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಂಬಾನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಂಬಾನಿ ಅವರು ಬೆಳಗ್ಗೆ 9. 30ರ ವೇಳೆಗೆ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ಕಚೇರಿಗೆ ಆಗಮಿಸಿದರು. ಸಂಜೆ 7 ಗಂಟೆಗೆ ಅವರನ್ನು ಕಚೇರಿಯಿಂದ ಹೊರ ಕಳಿಸಿದರು.

Anil Ambani
ಅನಿಲ್ ಅಂಬಾನಿ

By

Published : Mar 19, 2020, 9:49 PM IST

Updated : Mar 19, 2020, 9:58 PM IST

ಮುಂಬೈ: ಯೆಸ್​ ಬ್ಯಾಂಕ್ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಸಮನ್ಸ್​ ಪಡೆದಿದ್ದ ರಿಲಯನ್ಸ್​ ಗ್ರೂಪ್​ ಅಧ್ಯಕ್ಷ ಅನಿಲ್ ಅಂಬಾನಿ ಇಂದು ಮುಂಬೈನಲ್ಲಿ ಇಡಿ ವಿಚಾರಣೆಗೆ ಹಾಜರಾದರು.

ಅನಿಲ್ ಅಂಬಾನಿ ಅವರನ್ನು ಇಡಿ ಅಧಿಕಾರಿಗಳು ಸುಮಾರು ಒಂಬತ್ತು 9 ಗಂಟೆಗಳ ಕಾಲ ಮ್ಯಾರಥಾನ್ ವಿಚಾರಣೆ ನಡೆಸಿದರು. ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಂಬಾನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಂಬಾನಿ ಅವರು ಬೆಳಗ್ಗೆ 9. 30ರ ವೇಳೆಗೆ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ಕಚೇರಿಗೆ ಆಗಮಿಸಿದರು. ಸಂಜೆ 7 ಗಂಟೆಗೆ ಅವರನ್ನು ಕಚೇರಿಯಿಂದ ಹೊರ ಕಳಿಸಿದರು.

ವಿಚಾರಣೆಯಲ್ಲಿ ಅಂಬಾನಿ ಅವರ ಉತ್ತರಗಳಿಗೆ ತೃಪ್ತಿಯಾಗದ ಅಧಿಕಾರಿಗಳು ಮಾರ್ಚ್ 30ರಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಅನಿಲ್​ ಅಂಬಾನಿ ಅವರ ಕಂಪನಿಗಳ ಸಮೂಹ ಯೆಸ್​ ಬ್ಯಾಂಕ್​ನಿಂದ ಸುಮಾರು 12,800 ಕೋಟಿ ರೂ.ಯಷ್ಟು ಸಾಲ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

Last Updated : Mar 19, 2020, 9:58 PM IST

ABOUT THE AUTHOR

...view details