ಬೀಜಿಂಗ್:ಸ್ಮಾರ್ಟ್ಫೋನ್ ದೈತ್ಯ ಶಿಯೋಮಿ ಎಲೆಕ್ಟ್ರಿಕ್ ವಾಹನ ವ್ಯವಹಾರ ಉದ್ಯಮಕ್ಕೆ ಪ್ರವೇಶಿಸುವುದಾಗಿ ಮಂಗಳವಾರ ಪ್ರಕಟಿಸಿದೆ.
ಎಲೆಕ್ಟ್ರಿಕ್ ವಾಹನ ವ್ಯವಹಾರವನ್ನು ನಿರ್ವಹಿಸಲು ಕಂಪನಿಯು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು ನಿರ್ವಹಿಸುತ್ತದೆ. ಮುಂದಿನ 10 ವರ್ಷಗಳಲ್ಲಿ ಕಂಪನಿಯಲ್ಲಿನ ಹೂಡಿಕೆಯು 10 ಬಿಲಿಯನ್ ಡಾಲರ್ ತಲುಪುವುದನ್ನು ಕಂಪನಿ ಅಂದಾಜಿಸಿದೆ.
ಶಿಯೋಮಿ ಸಿಇಒ ಲೀ ಜುನ್ ಸ್ಮಾರ್ಟ್ ಎಲೆಕ್ಟ್ರಿಕ್ ವಾಹನ ಘಟಕದ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.
ಇವಿ ಉದ್ಯಮಕ್ಕೆ ಕಂಪನಿಯ ಈ ಕ್ರಮವು ಚೀನಾ ಮತ್ತು ವಿದೇಶಗಳಲ್ಲಿ ಇತರ ಟೆಕ್ ದೈತ್ಯರ ಕ್ರಮಗಳ ನಡೆಯನ್ನು ಅನುಕರಣೆ ಮಾಡುವಂತಿದೆ.
ಜನವರಿಯಲ್ಲಿ ಚೀನಾದ ಸರ್ಚ್ ದೈತ್ಯ ಬೈದು ಇಂಕ್ ದೇಶೀಯ ಕಾರು ತಯಾರಕ ಗೀಲಿ ಆಟೋಮೊಬೈಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಸಹಭಾಗಿತ್ವದ ಮೂಲಕ ಇವಿ ಘಟಕ ಅಭಿವೃದ್ಧಿಪಡಿಸುವುದಾಗಿ ಘೋಷಿಸಿತ್ತು.
ಫೆಬ್ರವರಿಯಲ್ಲಿ ತೊಂದರೆಗೆ ಒಳಗಾದ ಚೀನಾದ ಸ್ಮಾರ್ಟ್ಫೋನ್ ದೈತ್ಯ ಹುವಾವೇ ಟೆಕ್ನಾಲಜೀಸ್ ಕಂಪನಿ ಲಿಮಿಟೆಡ್, ಪ್ರಸ್ತುತ ಇವಿಗಳನ್ನು ತಯಾರಿಸಲು ಸರ್ಕಾರಿ ಸ್ವಾಮ್ಯದ ವಾಹನ ತಯಾರಕ ಚಂಗನ್ ಆಟೋಮೊಬೈಲ್ ಮತ್ತು ಇತರ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬುದು ವರದಿಯಾಗಿದೆ.
ಇದನ್ನೂ ಓದಿ: ಗೂಗಲ್ ಸ್ಟೇಡಿಯಾ ಗೇಮಿಂಗ್ ಲೈಬ್ರರಿಗೆ 'ಕೇಜ್ & ವೈಲ್ಡ್ ಮಾಸ್ಕ್' ಸೇರ್ಪಡೆ
ವರದಿಗಳ ಪ್ರಕಾರ, ಆ್ಯಪಲ್ ಇಂಕ್ ಇವಿ ಮಾರುಕಟ್ಟೆಗೆ ಪ್ರವೇಶಿಸಲು ಬಹಳ ಹಿಂದಿನಿಂದಲೂ ಯೋಜಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯ ಶಿಯೋಮೆ ಇವಿ ಮಾರುಕಟ್ಟೆ ಘೋಷಣೆ ಹೊರಡಿಸಿದೆ.