ನವದೆಹಲಿ: ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಭಾರತೀಯ ಉದ್ಯಮಿ ದಿಗ್ಗಜ ರತನ್ ಟಾಟಾ ಅವರಿಗೆ ನೀಡುವಂತೆ ನೆಟ್ಟಿಗರು ಅಭಿಯಾನ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ವತಃ ರತನ್ ಟಾಟಾ ಅವರೇ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ರತನ್ಗೆ 'ಭಾರತ ರತ್ನ' ಟ್ವಿಟರ್ ಅಭಿಯಾನ: ನೆಟ್ಟಿಗರಿಗೆ ಟಾಟಾ ಉದ್ಯಮಿಯ 'ವಿನಮ್ರ ಮನವಿ' ಹೀಗಿದೆ..! - ಭಾರತ ರತ್ನ
ಕಳೆದ ಹಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಗಾಗೆ ಅಭಿಯಾನ ನಡೆಸಿ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಈಗಲು ಅದು ಮುಂದುವರೆದಿದೆ. ಈ ಅಭಿಯಾನ ನಿಲ್ಲಿಸುವಂತೆ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಇಂದು ಟ್ವಿಟರ್ ಬಳಕೆದಾರರಿಗೆ ಮನವಿ ಮಾಡಿದ್ದಾರೆ.
ಕಳೆದ ಹಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಗಾಗೆ ಅಭಿಯಾನ ನಡೆಸಿ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಈಗಲು ಅದು ಮುಂದುವರಿದಿದೆ. ಈ ಅಭಿಯಾನ ನಿಲ್ಲಿಸುವಂತೆ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಇಂದು ಟ್ವಿಟರ್ ಬಳಕೆದಾರರಿಗೆ ಮನವಿ ಮಾಡಿದ್ದಾರೆ.
ಪ್ರಶಸ್ತಿಯ ವಿಷಯದಲ್ಲಿ ಸಾಮಾಜಿಕ ಮಾಧ್ಯಮದ ಒಂದು ಭಾಗವು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಮೆಚ್ಚುಗೆಯಾಗಿದ್ದರೂ ಅಂತಹ ಅಭಿಯಾನಗಳನ್ನು ನಿಲ್ಲಿಸಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಬದಲಾಗಿ, ನಾನು ಭಾರತೀಯನಾಗಲು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ ಮತ್ತು ಭಾರತದ ಬೆಳವಣಿಗೆ ಮತ್ತ ಸಮೃದ್ಧಿಗೆ ಸಹಕರಿಸುತ್ತೇನೆ ಎಂದು ಟಾಟಾ ಇಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಭಾರತ ರತ್ನ ಫಾರ್ ರತನ್ ಟಾಟಾ ಅಭಿಯಾನಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದಾರೆ.