ನವದೆಹಲಿ: ಚಾಕೊಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟಪಡುವ ಒಂದು ವಿಶ್ವವ್ಯಾಪಿ ಖಾದ್ಯ. ಜಗತ್ತಿನ ಅತ್ಯಂತ ದುಬಾರಿಯಾದ ಚಾಕೊಲೇಟ್ ಭಾರತದಲ್ಲಿದ್ದು, ಅದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಪಾತ್ರವಾಗಿದೆ.
ವಿಶ್ವದ ಅತಿ ದುಬಾರಿ ಚಾಕೊಲೇಟ್ ಅನ್ನು ಬಹುರಾಷ್ಟ್ರೀಯ ಎಫ್ಎಂಸಿಜಿ ಕಂಪನಿಯಾದ ಐಟಿಸಿ ತಯಾರಿಸಿದ್ದು, ಪ್ರತಿ ಕೆ.ಜಿ.ಗೆ 4.3 ಲಕ್ಷ ರೂ. ದರ ನಿಗದಿಪಡಿಸಿದೆ. ಟ್ರಿನಿಟಿ- ಟ್ರಫಲ್ಸ್ ಎಕ್ಸ್‌ಟ್ರಾಆರ್ಡಿನೇರ್ ಅನ್ನು ಕಂಪನಿಯು ಫ್ಯಾಬೆಲ್ ಶ್ರೇಣಿಯ ಪ್ರೀಮಿಯಂ ಮಿಠಾಯಿಗಳ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಈ ಉತ್ಪನ್ನವು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ ಎಂದು ಐಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.