ಕರ್ನಾಟಕ

karnataka

ETV Bharat / business

90 ದಿನದಲ್ಲಿ ಅಂಬಾನಿ ಕಂಪನಿಗೆ ಹರಿದು ಬಂತು ₹ 1.5 ಲಕ್ಷ ಕೋಟಿ! - ರಿಲಯನ್ಸ್ ಜಿಯೋ

ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಒಟ್ಟು 14 ಜಾಗತಿಕ ಕಂಪನಿಗಳು ಕಳೆದ ಮೂರು ತಿಂಗಳಲ್ಲಿ ಹೂಡಿಕೆಯ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಜಿಯೋನ 4.36 ಲಕ್ಷ ಕೋಟಿ ರೂ. ನಿಧಿಯಲ್ಲಿ ಏರಿಕೆಯಾಗಿ, ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಂದ ಒಟ್ಟಾರೆ ಹೂಡಿಕೆ 1,52,056 ಕೋಟಿ ರೂ.ಯಷ್ಟು ಹೆಚ್ಚಳವಾಗಿದೆ.

Jio
ಜಿಯೋ

By

Published : Jul 15, 2020, 8:22 PM IST

ನವದೆಹಲಿ:ತಂತ್ರಜ್ಞಾನ ದೈತ್ಯ ಗೂಗಲ್, ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ 33,737 ಕೋಟಿ ರೂ. ಹೂಡಿಕೆ ಮಾಡಿ ಶೇ 7.73ರಷ್ಟು ಷೇರು ಪಾಲು ಪಡೆಯಲಿದೆ.

ಆರ್‌ಐಎಲ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುಖೇಶ್ ಅಂಬಾನಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿ, ನಮ್ಮ ಪ್ರಸ್ತುತ ಬಂಡವಾಳ ಸಂಗ್ರಹದ ಚಕ್ರ ಕೊನೆಗೊಳಿಸುತ್ತಿದ್ದಂತೆ ಮತ್ತೊಂದು ಕಾರ್ಯತಂತ್ರದ ಪಾಲುದಾರರನ್ನು ಜಿಯೋಗೆ ಸ್ವಾಗತಿಸಲು ಸಂತೋಷವಾಗುತ್ತದೆ ಎಂದರು.

ಗೂಗಲ್‌ನ ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್‌ಗಳ 4.36 ಲಕ್ಷ ಕೋಟಿ ರೂ. ನಿಧಿಯಲ್ಲಿ ಏರಿಕೆಯಾಗಲಿದೆ. ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಂದ ಒಟ್ಟಾರೆ ಹೂಡಿಕೆ 1,52,056 ಕೋಟಿ ರೂ.ಯಷ್ಟು ಹೆಚ್ಚಳವಾಗಿದೆ.

ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಒಟ್ಟು 14 ಜಾಗತಿಕ ಕಂಪನಿಗಳು ಹೂಡಿಕೆಯ ಒಪ್ಪಂದ ಮಾಡಿಕೊಂಡಿವೆ. ಫೇಸ್​ಬುಕ್- 43,573.62 ಕೋಟಿ ರೂ., ಸಿಲ್ವರ್ ಲೇಕ್ ಪಾರ್ಟ್‌ನರ್ಸ್‌​- 6,655.75 ಕೋಟಿ ರೂ., ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್- 11,367 ಕೋಟಿ ರೂ., ಜನರಲ್ ಅಟ್ಲಾಂಟಿಕ್- 6,598.38 ಕೋಟಿ ರೂ., ಕೆಕೆಆರ್- 11,367 ಕೋಟಿ ರೂ., ಮುಬದಲಾ- 9,093.60 ಕೋಟಿ ರೂ., ಸಿಲ್ವರ್ ಲೇಕ್ ಪಾಟ್​ನರ್ಸ್ 2ನೇ ಹೂಡಿಕೆ- 4,546.80 ಕೋಟಿ ರೂ., ಅಬುದಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ- 5,683.50 ಕೋಟಿ ರೂ., ಟಿಪಿಜಿ- 4,546.80 ಕೋಟಿ ರೂ., ಎಲ್ ಕಾಟರ್​ಟನ್- 1,894.50 ಕೋಟಿ ರೂ., ಪಿಐಎಫ್- 11,367ಕೋಟಿ ರೂ., ಇಂಟೆಲ್ ಕ್ಯಾಪಿಟಲ್- 1,894.50 ಕೋಟಿ ರೂ., ಕ್ವಾಲ್​ಕಾಮ್ ವೆಂಚರ್ಸ್- 730 ಕೋಟಿ ರೂ ಹಾಗೂ ಗೂಗಲ್​ನ 33,737 ಕೋಟಿ ರೂ. ಹೂಡಿಕೆ ಮಾಡಿವೆ.

ABOUT THE AUTHOR

...view details