ಬೆಂಗಳೂರು:ಸಿಲಿಕಾನ್ ಸಿಟಿಯ ಐಟಿ ದಿಗ್ಗಜ ಕಂಪನಿ ವಿಪ್ರೋ ಇದುವರೆಗೂ ಮಾರಾಟ ಮಾಡದಿರುವಷ್ಟು ಅತೀ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಮರು ಖರೀದಿಗೆ (ಬೈ ಬ್ಯಾಕ್) ಮುಂದಾಗಿದೆ.
ವಿಪ್ರೋ ಗುರುವಾರ 9,500 ಕೋಟಿ ರೂ.ಮರು ಖರೀದಿ ಯೋಜನೆ ಸಂಬಂಧ ಪತ್ರ ಮತ್ತು ಟೆಂಡರ್ ಫಾರ್ಮ್ ಅನ್ನು ಡಿಸೆಂಬರ್ 29ರಂದು ತೆರೆಯಲಿದೆ. ಇದು ಜನವರಿ 11ರವರೆಗೆ ಲಭ್ಯವಿರುತ್ತದೆ. ಬಿಡ್ ಇತ್ಯರ್ಥಪಡಿಸುವ ಕೊನೆಯ ದಿನಾಂಕ ಜನವರಿ 20.
ಈಕ್ವಿಟಿ ಷೇರಿಗೆ 400 ರೂ. ಬೆಲೆ ನಿಗದಿಪಡಿಸಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಪ್ರೀಮಿಯಂನಲ್ಲಿದೆ. ಪ್ರವರ್ತಕರು ಮತ್ತು ಪ್ರವರ್ತಕ ಗ್ರೂಪಿನ ಸದಸ್ಯರು ಬೈ ಬ್ಯಾಕ್ನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗರಿಷ್ಠ 414 ಕೋಟಿ ಈಕ್ವಿಟಿ ಷೇರುಗಳನ್ನು ಟೆಂಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.