ಬೆಂಗಳೂರು: ವಿಪ್ರೋ ಸಂಸ್ಥೆ ತನ್ನ ತ್ರೈಮಾಸಿಕ ವರದಿಯನ್ನು ಪ್ರಕಟಿಸಿ, 2,455.9 ಕೋಟಿ ನಿವ್ವಳ ಲಾಭವಾಗಿದೆ ಎಂದು ಘೋಷಿಸಿದೆ.
ವಿಪ್ರೋ ತ್ರೈಮಾಸಿಕ ವರದಿ ಬಿಡುಗಡೆ: 2,455.9 ಕೋಟಿ ರೂ. ಲಾಭ - ವಿಪ್ರೋ
ದೇಶದ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದಾಗಿರುವ ವಿಪ್ರೋದ ತ್ರೈಮಾಸಿಕ ವರದಿ ಬಿಡುಗಡೆಯಾಗಿದೆ. ಕಳೆದ ವರ್ಷದ ತ್ರೈಮಾಸಿಕ ಆದಾಯ 15,059.5 ಕೋಟಿ ಇತ್ತು. ಇದು ಈ ವರ್ಷ 15,470.5 ಆಗಿದೆ.
![ವಿಪ್ರೋ ತ್ರೈಮಾಸಿಕ ವರದಿ ಬಿಡುಗಡೆ: 2,455.9 ಕೋಟಿ ರೂ. ಲಾಭ ವಿಪ್ರೋ ತ್ರೈಮಾಸಿಕ ವರದಿ ಬಿಡುಗಡೆ](https://etvbharatimages.akamaized.net/etvbharat/prod-images/768-512-5714239-thumbnail-3x2-wipro.jpg)
ವಿಪ್ರೋ ತ್ರೈಮಾಸಿಕ ವರದಿ ಬಿಡುಗಡೆ
ಜೊತೆಗೆ ಪ್ರತಿ ಈಕ್ಯಿಟಿ ಶೇರ್ಗೆ 1 ರೂ. ಡಿವಿಡೆಂಡ್ ಘೋಷಿಸಿದೆ. ಸಂಸ್ಥೆಯ ಆದಾಯ ಶೇ.2.7ರಷ್ಟು ಏರಿದ್ದು, ಕಳೆದ ವರ್ಷದ ತ್ರೈಮಾಸಿಕ ಆದಾಯ 15,059.5 ಕೋಟಿ ಇದ್ದಿದ್ದರೆ ಈ ವರ್ಷ 15,470.5 ಆಗಿದೆ.
ಇದೇ ವೇಳೆ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬಿದಲಿ, ವಿಶ್ವದಲ್ಲಿ ಆಗುತ್ತಿರುವ ರಾಜಕೀಯ ತಲ್ಲಣದಿಂದ ಲಾಭ ಕೊಂಚ ಕುಸಿದಿದೆ. ಈ ಪರಿಸ್ಥಿತಿಯಲ್ಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಮುಂಬರುವ ದಿನಗಳಲ್ಲಿಇನ್ನೂ ಒಳ್ಳೆಯ ವ್ಯವಹಾರ ನಡೆಸುತ್ತೇವೆ ಎಂದು ಹೇಳಿದರು.