ಕರ್ನಾಟಕ

karnataka

ETV Bharat / business

ಕೊರೊನಾ ಕಾರಣಕ್ಕೆ ಸಿಬ್ಬಂದಿ ವಜಾಗೊಳಿಸಲ್ಲ; ವಿಪ್ರೊ ಅಧ್ಯಕ್ಷರ ಸ್ಪಷ್ಟನೆ - ಉದ್ಯೋಗ ಕಡಿತ

ಕಳೆದ ವರ್ಷ ಜುಲೈನಲ್ಲಿ ಅಧಿಕಾರ ವಹಿಸಿಕೊಂಡ ನಂತರ ವಿಪ್ರೊ ಅಧ್ಯಕ್ಷರಾಗಿ ಮೊದಲ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆಸಿದ ರಿಷದ್​, ನೌಕರರ ಸುರಕ್ಷತೆ ಮತ್ತು ಯೋಗಕ್ಷೇಮವು ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

Wipro
ವಿಪ್ರೊಂ

By

Published : Jul 13, 2020, 11:05 PM IST

ಬೆಂಗಳೂರು: ಕೊರೊನಾ ಸೋಂಕಿನ ಕಾರಣಕ್ಕೆ ಕಂಪನಿಯು ಯಾವುದೇ ಉದ್ಯೋಗಿಯನ್ನು ವಜಾಗೊಳಿಸಿಲ್ಲ ಎಂದು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್​​ಜಿ ಸ್ಪಷ್ಟನೆ ನೀಡಿದರು.

ಕಂಪನಿಯ 74ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಷೇರುದಾರರ ಪ್ರಶ್ನೆಗೆ ಉತ್ತರಿಸಿದ ರಿಷದ್​, ಕೋವಿಡ್​-19 ಪ್ರಭಾವದಿಂದ ಇದೀಗ ಉದ್ಯೋಗ ಕಡಿತ ಮಾಡುವ ಯಾವುದೇ ವಿಚಾರಗಳು ನಮ್ಮ ಮುಂದೆ ಇಲ್ಲ ಎಂದರು.

ವಿವಿಧ ವಿಧಾನಗಳ ಮೂಲಕ ವೆಚ್ಚ ಕಡಿತ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದುವರೆಗೂ ಯಾವುದೇ ನೌಕರರನ್ನು ವಜಾಗೊಳಿಸಿಲ್ಲ. ಈ ಸಮಯದಲ್ಲಿ ಯಾರನ್ನೂ ವಜಾಗೊಳಿಸುವ ಯೋಜನೆಯನ್ನು ಕಂಪನಿ ಹೊಂದಿಲ್ಲ ಎಂದರು.

ಕಳೆದ ವರ್ಷ ಜುಲೈನಲ್ಲಿ ಅಧಿಕಾರ ವಹಿಸಿಕೊಂಡ ನಂತರ ವಿಪ್ರೊ ಅಧ್ಯಕ್ಷರಾಗಿ ಮೊದಲ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆಸಿದ ರಿಷದ್​, ನೌಕರರ ಸುರಕ್ಷತೆ ಮತ್ತು ಯೋಗಕ್ಷೇಮವು ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹೊಸಬಗೆಯ ಕೆಲಸದ ಸಂಸ್ಕೃತಿಗೆ ನಾವು ಸಂಪೂರ್ಣವಾಗಿ ಹೊಂದಿಕೊಂಡಿದ್ದೇವೆ. ನಮ್ಮೆಲ್ಲ ಗ್ರಾಹಕರ ವಹಿವಾಟು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡಿದ್ದೇವೆ. ಭವಿಷ್ಯದಲ್ಲಿ ನಾವು ಹೇಗೆ ಕೆಲಸ ಮಾಡಲಿದ್ದೇವೆ ಎನ್ನುವುದಕ್ಕೆ ಈ ಬದಲಾವಣೆಗಳು ನಿರಂತರವಾಗಿ ಮುಂದುವರೆಯುವ ಸಾಧ್ಯತೆ ಇದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದರು.

ABOUT THE AUTHOR

...view details